
ಹಾಸನ: ಜಿಲ್ಲೆಗೆ ಕೊಟ್ಟಿರುವ ಕೊಡುಗೆಗಳ ಬಗ್ಗೆ ಬೆನ್ನು ತಟ್ಟಿಕೊಳ್ಳಲು ಸಭೆ ಕರೆದಿಲ್ಲ. ಪ್ರಜ್ವಲ್ ರೇವಣ್ಣ ಈ ಕ್ಷೇತ್ರದ ಅಭ್ಯರ್ಥಿ ಅಲ. ಕುಮಾರಸ್ವಾಮಿ ಈ ಕ್ಷೇತ್ರದ ಅಭ್ಯರ್ಥಿ ಗೆಲ್ಲಿಸಿ ಎಂದು ಒಂದು ಕಡೆ ಮಾಜಿ ಸಿಎಂ ಕಣ್ಣೀರು ಹಾಕಿ, ನಾನು ಚಿಕಿತ್ಸೆ ಪಡೆದು ರಾಜ್ಯಾಧ್ಯಾಂದತ ಬಿಜೆಪಿ ಜೆಡಿಎಸ್ ಅಭ್ಯರ್ಥಿ ಗೆಲುವಿಗೆ ಶ್ರಮಿಸುವುದಾಗಿ ಹೇಳಿದ ವೇಳೆ ಸ್ಥಳದಲ್ಲೆ ಇದ್ದ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರು ಕೂಡ ಕಣ್ಣಿರು ಹಾಕಿದ ಪ್ರಸಂಗ ನಡೆಯಿತು
ನಗರದ ಬಿ.ಎಂ. ರಸ್ತೆ ಬಳಿ ಇರುವ ಜ್ಷಾನಾಕ್ಷಿ ಕಲ್ಯಾಣ ಮಂಟಪದಲ್ಲಿ ಬುಧವಾರದಂದು ನಡೆದ ಜೆಡಿಎಸ್ ಮುಖಂಡರ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಉದ್ದೇಶಿಸಿ ಮಾತನಾಡಿದ ಅವರು, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ನಡೆಯಲು ಸಮಸ್ಯೆ ಇದ್ದರೂ ರಾಜ್ಯಸಭೆಯ ಅಧಿವೇಶನದಲ್ಲಿ ಭಾಗವಹಿಸಿ ರಾಜ್ಯದ ರೈತರ ನೀರಾವರಿ ಕೊಬ್ಬರಿ ಬೆಲೆಯ ಬಗ್ಗೆ ಮಾತನಾಡಿ ಸರ್ಕಾರದ ಗಮನ ಸೇಳೆದಿದ್ದಾರೆ.
ಇದು ಹಾನಸ ಜಿಲ್ಲೆಯ ಜನತೆ ನಮಗೆ ಕೊಟ್ಟ ಶಕ್ತಿ ಎಂದರು. ಶ್ರೀರಾಮ ದೇವರ ಕಟ್ಟೆಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಪ್ರಜ್ವಲ್ ರೇವಣ್ಣನವರೆ ಮುಂದಿನ ಅಭ್ಯರ್ಥಿ ಎಂದು ದೇವೇಗೌಡರು ಘೋಷಣೆ ಮಾಡಿದರು.
ಈ ನಂತರ ಯಾವ ರೀತಿ ಚರ್ಚೆಗಳು ಹಾಸನ ಜಿಲ್ಲೆ ಹಾಗೂ ರಾಜ್ಯದಲ್ಲಿ ನಡೆಯುತ್ತಿದೆ ಎಂದು ಸೂಕ್ಷ್ಮವಾಗಿ ಗಮನಿಸುತ್ತಿದ್ದೆನೆ. ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಪ್ರಾರಂಭವಾಗಿ ಒಂದು ವರ್ಷ ಪೂರೈಸಿ ಪ್ರತಿ ದಿನ ೫ ಗ್ಯಾರಂಟಿ ಮೇಲೆ ಲೋಕಸಭೆ ಚುನಾವಣೆ ಪ್ರಚಾರ ನಡೆಸುತ್ತಿದ್ದಾರೆ. ಹಾಸನ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಉಪಮುಖ್ಯಮಂತ್ರಿ ಸಚಿವರು ಭಾಗವಹಿಸಿದ್ದಾರೆ. ೫ ಗ್ಯಾರಂಟಿ ಕಾರ್ಯಕ್ರಮದ ಬಗ್ಗೆ ಪ್ರತಿದಿನ ಪೇಪರ್ ಗಳಲ್ಲಿ ಕಾಣುತ್ತಿದ್ದೆವೆ. ಪೇಪರ್ ಪೆನ್ನು ಕೇಳಿದ ವ್ಯಕ್ತಿಯನು ಮಾಡುತ್ತಿದ್ದಾರೆ ನಾವು ನೋಡುತ್ತಿದ್ದೆವೆ.
ನಾನು ಕಳೆದ ಸ್ವಲ್ಪ ದಿನಗಳಿಂದ ಯಾರ ಬಗ್ಗೆ ಮಾತನಾಡುತ್ತಿಲ್ಲ. ನನಗೆ ಮಾತನಾಡದಂತೆ ಕೆಲವರು ಸಲಹೆ ನೀಡಿದ್ದಾರೆ. ಪ್ರತಿ ದಿನ ಟಿವಿಯಲ್ಲಿ ಗ್ಯಾರಂಟಿ ಬಗ್ಗೆ ಬರುತ್ತಿದೆ. ಗ್ಯಾರಂಟಿಗಳಿಂದ ಜನರು ತೃಪ್ತರಾಗಿದ್ದಾರೋ ಗೊತ್ತಿಲ್ಲ. ಪ್ರತಿದಿನ ಕೊಟ್ಯಾಂತರ ರುಪಾಯಿ ಹಣ ಗ್ಯಾರಂಟಿ ಹಣದ ಕಾರ್ಯಕ್ರಮ ಪ್ರಚಾರ ಹಾಗೂ ಕಾರ್ಯಕ್ರಮಗಳಿಗೆ ಖರ್ಚಾಗುತ್ತಿದೆ.
ರಾಜ್ಯದ ರೈತರ ಎಂ.ಎಸ್.ಪಿ. ಬೆಂಬಲ ಬೆಲೆಯಡಿ ರಾಗಿ ಭತ್ತ ಖರೀದಿ ಮಾಡಿರುವುದಿಲ್ಲ ಎಂದರು. ರೇವಣ್ಣನವರೆ ಬೆಳಿಸಿದ ವ್ಯಕ್ತಿ ಪರೋಕ್ಷವಾಗಿ ಎಂದು ಹೇಳಿ ಕೆ.ಎಂ. ಶಿವಲಿಂಗೇಗೌಡರ ಬಗ್ಗೆ ಮಾತನಾಡಿ, ಶಿವಲಿಂಗೇಗೌಡ ೧೪ ಮತಗಳಿಂದ ಸೋತ ನಂತರ ರೇವಣ್ಣನವರು ಕೊಟ್ಯಾಂತರ ಹಣ ಗುತ್ತಿಗೆ ಕಾಮಗಾರಿ ನೀಡಿದ್ದು ರೇವಣ್ಣ.
ಒಂದು ದಿನ ಶಿವಲಿಂಗೇಗೌಡ ರೇವಣ್ಣನವರ ಬಗ್ಗೆ ಮಾತನಾಡಲಿಲ್ಲ. ಕೊಬ್ಬರಿ ಖರೀದಿ ಕೇಂದ್ರದಲ್ಲಿ ಪೊಲೀಸ್ ಲಾಠಿ ಹಿಡಿದು ನಿಂತಿದ್ದ ನರೇಂದ್ರ ಮೋದಿ ಬೆಂಬಲ ಬೆಲೆ ಕೊಟ್ಟಿಲ್ಲ. ಪ್ರಜ್ವಲ್ ರೇವಣ್ಣನವರ ಮೇಲೆ ಆರೋಪ ಮಾಡುತ್ತಾನೆ. ರಾಜ್ಯದ ಜನರು ತೆರಿಗೆ ಕಟ್ಟಿದ್ದಾರೆ. ನಿಮ್ಮ ಸಿದ್ದರಾಮಯ್ಯನಿಗೆ ಹೇಳಿ ರೈತರ ಸಾಲ ಮನ್ನ ಮಾಡಿಸಲಿ.
ದಯಮಾಡಿ ಯಾವ ರೈತರು ಚಿಂತೆ ಮಾಡಬೇಡಿ ನಾನಿದ್ದನೆ ನಿಮ್ಮ ಸಾಲ ಮನ್ನಾ ಮಾಡುತ್ತೆನೆ ಎಂದು ಭರವಸೆ ನೀಡಿದರು.
ಶಿವಲಿಂಗೇಗೌಡರ ನಡೆದುಕೊಂಡ ಬಗ್ಗೆ ಎಲ್ಲಾ ನೋಡಿದ್ದೆನೆ. ಇವತ್ತು ಅಹಂಕಾರ ಬಂದಿದೆ. ಈ ದೇಶದಲ್ಲಿ ಮಹಾನ್ ಆರ್ಥಿಕ ತಜ್ಞ ನಾನೆ ಎಂದು ಬಿಂಬಿಸಿಕೊಳ್ಳಿತ್ತಿದ್ದಾರೆ. ೫೨ ಸಾವಿರ ಕೋಟಿ ೫ ಗ್ಯಾರಂಟಿ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ೧ ಲಕ್ಷದ ೫ ಸಾವಿರ ಕೋಟಿ ಹಣ ಒಂದೆ ವರ್ಷಗಳಲ್ಲಿ ರಾಜ್ಯ ಸರ್ಕಾರ ಮಾಡಿದೆ. ಅದಕ್ಕೆ ಜಾಹಿರಾತು ಕೊಡುತ್ತಾರೆ. ಸಾಲ ಮಾಡಿ ತುಪ್ಪ ತಿನ್ನುವ ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರದ ಹಣ ಕೊಡದ ಬಗ್ಗೆ ಈಗ ಧರಣಿ ನಡೆಸಿರುವ ಸಿದ್ದರಾಮಯ್ಯ ಜಂತರ್ ಮಂತರ್ ನಲ್ಲಿ ಧರಣಿ ನಡೆಸಿದ್ದಾರೆ.
ನಾನು ೨೫ ಸಾವಿರ ಕೋಟಿ ರೈತರ ಸಾಲಮನ್ನಾ ಮಾಡಿದ್ದೆ ನಾನು ಎಂದು ಕೇಂದ್ರ ಸರ್ಕಾರ ಹಣ ನೀಡಿಲ್ಲ ಎಂದು ಕೇಂದ್ರ ಸರ್ಕಾರ ಬೈಯಲಿಲ್ಲ. ಈ ರಾಜ್ಯದ ರೈತರ ಟ್ಯಾಕ್ಸ್ ಹಣದಿಂದ ಮನ್ನಾ ಮಾಡಿದ್ದೆನೆ. ಈ ಹಣ ಹರದನಹಳ್ಳಿಯ ದೇವೇಗೌಡರ ಮನೆ ಹಣವೂ ಕೂಡ ಅಲ್ಲ ಅಂದರು.
ಹಾಸನ ಮೈಸೂರು ಅರಸೀಕೆರೆ ೧೮ ರೈಲು ದೇವೇಗೌಡರ ಪ್ರಯತ್ನದಿಂದ ಓಡಾಡುತ್ತಿವೆ. ಹಾಸನ ಜಿಲ್ಲೆಯ ಅಭಿವೃದ್ಧಿಗೆ ರೇವಣ್ಣ ಸರ್ಕಾರದಲ್ಲಿ ಇರಲಿ ಇಲ್ಲದೆ ಹೋಗಲಿ ಕೈ ಕಾಲು ಕಟ್ಟಿ ಹಾಸನ ಜಿಲ್ಲೆಯ ಕೆಲಸ ಮಾಡಿದ್ದಾನೆ.
ಹಾಸನ – ಬೇಲೂರು ರಸ್ತೆ ೬೮೭ ಕೋಟಿ ರುಪಾಯಿ ವೆಚ್ಚದಲ್ಲಿ ಗಡ್ಕರಿ ಪೌಂಡೇಷನ್ ಹಾಕಿದ್ದಾರೆ ಅದು ರೇವಣ್ಣ ಹಠ ಮಾಡಿ ತಂದಂತಹ ಯೋಜನೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಕೇಂದ್ರ ಮಂತ್ರಿಗಳಿಗೆ ಬರಿ ದೂರವಾಣಿ ಕರೆ ಮಾಡಿದ್ದರೆ ಕೇಂದ್ರ ಸಚಿವರು ದೇವೇಗೌಡರ ಮನೆಗೆ ಬಂದು ಕೆಲಸ ಮಾಡಿಕೊಡುತ್ತಾರೆ.
ಹಾಸನ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ರೇವಣ್ಣನವರ ಕೊಡುಗೆ ಜಿಲ್ಲೆಯ ಜನತೆಗೆ ಕೈ ಜೊಡಿಸಿ ಮನವಿ ಮಾಡುತ್ತೆನೆ. ನೀವು ಬೆಳೆಸಿರುವ ಮಕ್ಕಳು ನಾವು ನಿಮ್ಮ ಕುಟುಂಬದಲ್ಲಿ ಮಕ್ಕಳು ದಾರಿ ತಪ್ಪಿದಾಗ ಅವಕಾಶ ಕೊಡುವ ನೀವು ಬೆಳಸಿರುವ ಮಕ್ಕಳು ತಿಂದುಕೊಳ್ಳುವ ಅವಕಾಶ ಕೊಡಿ ಎಂದು ಪರಿಪರಿಯಾಗಿ ಬೇಡಿಕೊಂಡರು.
ರೇವಣ್ಣ ಹಾಗೂ ಪ್ರಜ್ವಲ್ ಬಗ್ಗೆ ಅಪಪ್ರಚಾರ ನಡೆಯುತ್ತಿದೆ. ವೈಯಕ್ತಿಕವಾಗಿ ನಾವು ಜಿಲ್ಲೆಯ ಯಾವುದೇ ಜನತಗೆ ಅನ್ಯಾಯ ಮಾಡಿಲ್ಲ. ಹಾಸನ ಜಿಲ್ಲೆಯ ಡೈರಿ ಐತಿಹಾಸಿಕ. ಅದರಲ್ಲಿ ಸಾವಿರಾರು ಕುಟುಂಬಗಳು ಜೀವನ ನಡೆಸುತ್ತಿದ್ದಾರೆ. ಕೆಲಸದ ಅವಧಿಯಲ್ಲಿ ರಾಜ್ಯದ ಯಾವುದೇ ವ್ಯಕ್ತಿ ಮಾಡದ ಕೆಲಸ ರೇವಣ್ಣ ಮಾಡಿದ್ದಾನೆ. ನಿಮ್ಮ ಮನಸ್ಸಿನಲ್ಲಿ ನಾವು ಮಾಡಿರುವ ತಪ್ಪುಗಳನ್ನು ಇಟ್ಟಿಕೊಳ್ಳಬೇಡಿ ಎಂದು ಕೋರಿದರು.
ಮುಖ್ಯಮಂತ್ರಿ ಕ್ಷೇತ್ರದಲ್ಲಿ ಮೊನ್ನೆ ಅವರ ಮಗ ಅವರಿಗೆ ಮತ ನೀಡಿದ ಕ್ಷೇತ್ರದ ಹಳ್ಳಿ ಅವರ ಸಮುದಾಯದ ಊರಿಗೆ ಹೊದರೆ ಮುಖ್ಯಮಂತ್ರಿ ಮಗನ ಗ್ರಾಮಕ್ಕೆ ಸೇರಿಸಲಿಲ್ಲ. ಅ ರೀತಿ ಹಾಸನ ಜಿಲ್ಲೆಯಲ್ಲಿ ಯಾವುದು ನಡೆದಿಲ್ಲ. ನಮ್ಮ ಕಡೆಯಿಂದ ಕೆಲವು ತಪ್ಪುಗಳಾಗಿವೆ ಕ್ಷೇತ್ರವನ್ನು ಜೆಡಿಎಸ್ ನಿಂದ ಪಡೆಯಲು ಎಲ್ಲಾ ರೀತಿಯ ಪ್ರಯತ್ನ ನಡೆಯುತ್ತಿದೆ. ದೇವೇಗೌಡರು ರಾಜಕೀಯ ಜೀವನದಲ್ಲಿ ಸೋತಿದ್ದಾರೆ ಸೋತಾಗ ದೇವೇಗೌಡರು ಮನೆಯಲ್ಲಿ ಕೂರಲಿಲ್ಲ. ೧೯೮೯ ರಲ್ಲಿ ಹೊಳೆನರಸೀಪುರ ಕ್ಷೇತ್ರದಲ್ಲಿ ದೇವೇಗೌಡರನ್ಮು ಸೋಲಿಸಿದರು.
ಸೋಲಲು ಕಾರಣ ರೇವಣ್ಣನವರು. ಕೆಲವು ಕಾರ್ಯಕರ್ತರಿಗೆ ಗುತ್ತಿಗೆ ನೀಡಿದ್ದಾಗ ಗುತ್ತಿಗೆ ಮಾಡಿದ ಕೆಲವು ಗುತ್ತಿಗೆದಾರರು ಬೈಕ್ ತಂದು ಒಡಾಡುವುದನ್ನ ನೋಡಿ ಅಸಮಾಧಾನ ಉಂಟಾಗಿ ಯಾವುದೇ ತಪ್ಪು ಮಾಡದ ದಿನದ ೨೪ ಗಂಟೆ ರೈತರ ಬಗ್ಗೆ ಯೋಚನೆ ಮಾಡುವ ವ್ಯಕ್ತಿ ಪ್ರಥಮವಾಗಿ ಚುನಾವಣೆಯಲ್ಲಿ ಸೋತರು ಕನಕಪುರ ಚುನಾವಣೆಯಲ್ಲಿ ಸೋತರು ದೇವೇಗೌಡರು ರಾಜಕೀಯ ಭವಿಷ್ಯ ಮುಗಿಯಿತು ಮೊಮ್ಮಕಳ ಜೊತೆ ಆಟವಾಡಲಿ ಎಂದು ಟೀಕೆ ಮಾಡಿದರು.
ಮಂಡ್ಯದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರ ಹೇಳಿಕೆಹೊಂದರಲ್ಲಿ ದೇವೇಗೌಡರು ಅವರ ಕುಟುಂಬಕ್ಕೆ ಮಾತ್ರ ಕಣ್ಣಿರು ಹಾಕುತ್ತಾರೆ ಎಂದು ಗ್ಯಾರಂಟಿ ಸಮಾವೇಶದಲ್ಲಿ ಮಾತನಾಡಿದ್ದಾರೆ. ದೇವೇಗೌಡರ ಎದುರು ಗೆದ್ದಾಂತಹ ವ್ಯಕ್ತಿ ನೀರಾವರಿ ಸಚಿವರಾದ ಸಮಯದಲ್ಲಿ ತಮಿಳುನಾಡಿನ ಮಂತ್ರಿ ಬಂದಾಗ ಸರಿಯಾಗಿ ಮಾತನಾಡದ ಕಾರಣ ಕಾವೇರಿ ವಿಚಾರದಲ್ಲಿ ಟ್ರಿಬ್ಯೂನಲ್ ರಚನೆ ಯಾಯಿತು. ೧೯೮೯ ರಲ್ಲಿ ಆದ ಅನಾಹುತ ಮತ್ತೆ ಆಗಬಾರದು. ಆ ಪ್ರತಿಫಲ ಇವತ್ತು ಪ್ರತಿ ಹನಿ ನಿರಿಗೂ ಕಣ್ಣಿರು ಹಾಕುವ ಪರಿಸ್ಥಿತಿ ಬಂದಿದೆ.
೧೯೯೯ ರಲ್ಲಿ ಲೊಕಸಭೆ ಚುನಾವಣೆಯಲ್ಲಿ ಸೋತರು ಕನಕಪುರ ಉಪಚುನಾವಣೆಯಲ್ಲಿ ಗೆದ್ದರು ಆದರೂ ಹಾಸನ ಜಿಲ್ಲೆಯನ್ನು ದೇವೇಗೌಡರು ಮರೆಯಲಿಲ್ಲ. ಅವರ ಮಗನಾಗಿ ದೇವೇಗೌಡರು ಮಾಡದ ಕೆಲಸವನ್ನು ಶ್ರಮ ಹಾಕಿ ರೇವಣ್ಣ ಕೆಲಸ ಮಾಡಿದ್ದಾನೆ. ಅಷ್ಟೆಲ್ಲ ಕೆಲಸ ಮಾಡಿ ಉಪಯೋಗ ಇಲ್ಲ ಸಣ್ಣ ತಪ್ಪುಗಳು ಅಕ್ರೋಶವಾಗಿ ತಿರುಗಬಾರದು ಜಿಲ್ಲೆಯ ಜನತೆ ಆ ಕಾರಣದಲ್ಲಿ ನಮ್ಮನ್ನು ಕೈ ಬಿಡಬಾರದು ಎಂದರು.
೨೦೧೯ರ ಲೊಕಸಭೆ ಚುನಾವಣೆ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಮಾಡಿ ಮಂಡ್ಯ ಜಿಲ್ಲೆಯಲ್ಲಿ ನಡೆದ ಘಟನೆ ಬಗ್ಗೆ ಹೇಳಿದ್ದಾರೆ. ಪಕ್ಷೇತರ ಅಭ್ಯರ್ಥಿ ಗೆಲ್ಲಲು ಕಾಂಗ್ರೆಸ್ ಪಕ್ಷದವರು ಮತ ಹಾಕಿದ್ದಾರೆ ಎಂದು ಸ್ವತಃ ಮುಖ್ಯಮಂತ್ರಿಯೆ ಹೇಳಿದ್ದಾರೆ.ಮಂಡ್ಯ ಜಿಲ್ಲೆಯ ೮ ಶಾಸಕರು ೩ ಜನ ಮಂತ್ರಿಯಾದರು ಅಲ್ಲಿ ಸೊಲಲು ಕಾಂಗ್ರೆಸ್ ಬಿಜೆಪಿ ರೈತ ಸಂಘ ಕೆಲವು ಮಾಧ್ಯಮದ ಸ್ನೇಹಿತರು ಕಾರಣ ನಾನು ನಿಖಿಲ್ ಗೆ ಚುನಾವಣೆ ನಿಲ್ಲಬಾರದು ಎಂದು ಪರಿಪರಿಯಾಗಿ ಶಾಸಕರು ಕಾರ್ಯಕರ್ತರ ಒತ್ತಡದ ಮೇಲೆ ನಿಲ್ಲಬೇಕಾಯಿತು.ಆ ಪರಿಸ್ಥಿತಿ ನಮ್ಮ ಸಹೋದರನ ಮಗನಿಗೆ ಬರಬಾರದು ಕಾರ್ಯಕರ್ತರು ಉಳಿಸಿಕೊಳ್ಳುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
ಬಿಜೆಪಿ- ಜೆಡಿಎಸ್ ಮೈತ್ರಿಯಿಂದ ಬಿಜೆಪಿಗೆ ಕೂಡ ಶಕ್ತಿ ಜಾಸ್ತಿಯಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ೨ ಲಕ್ಷ ಜೆಡಿಎಸ್ ಮತ ಇದೆ ಅದೆ ರೀತಿ ಬಿಜೆಪಿ ಶಿವಮೊಗ್ಗದಲ್ಲಿ ನಮ್ಮ ಪಕ್ಷದ ಶಕ್ತಿ ಇದೆ ಅದನ್ನು ಹಾಸನ ಜಿಲ್ಲೆಯ ಬಿಜೆಪಿ ಮುಖಂಡರು ಕಾರ್ಯಕರ್ತರು ಅರ್ಥ ಮಾಡಿಕೊಳ್ಳಬೇಕು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎರಡು ಪಕ್ಷದವರು ಜೆಡಿಎಸ್ ಸೋಲಿಸಲು ನಮ್ಮ ಪಕ್ಷ ಕಡಿಮೆ ಮತ ಪಡೆದಿದೆ.
ಸಕಲೇಶಪುರ ವಿಧಾನಸಭೆ ಕ್ಷೇತ್ರದ ಎಚ್.ಕೆ .ಕುಮಾರಸ್ವಾಮಿ ಸೋಲಲು ನಮ್ಮ ತಪ್ಪುಗಳು ಕಾರಣವಾಗಿರಬಹುದು ಎಂದು ಅನುಮಾನಿಸಿದರು. ಪಂಚರತ್ನ ಸಮಾವೇಶದಲ್ಲಿ ಜನಸಾಗರ ಸೇರಿದರು. ೧೯ ಸ್ಥಾನಗಳಿಗೆ ಇಳಿದಿದ್ದೆನೆ. ನನಗೆ ಚಿಕ್ಕ ವಯಸ್ಸಿನಲ್ಲಿ ದೇಹದ ಆರೋಗ್ಯ ಸಮಸ್ಯೆ ಇದೆ. ನಾನು ರಾಜಕಾರಣಕ್ಕೆ ಬಂದಿರುವುದು ಆಕಸ್ಮಿಕ. ನನಗೆ ಎರಡು ಬಾರಿ ಹೃದಯ ಚಿಕಿತ್ಸೆಯಾಗಿದೆ. ನಾನು ಪುನಃ ಚಿಕಿತ್ಸೆಗೆ ಇನ್ನೊಂದು ವಾರದಲ್ಲಿ ಹೊಗಬೇಕಾಗಿದೆ. ನನ್ನ ಆರೋಗ್ಯಕ್ಕಿಂತ ಜಿಲ್ಲೆಯ ನಮ್ಮ ದೇವೇಗೌಡರನ್ನು ಬೆಳಸಿಂದಂತಹ ಜಿಲ್ಲೆಯಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳು ಆಗಬಾರದು. ಪ್ರಜ್ವಲ್ ರೇವಣ್ಣ ಈ ಕ್ಷೇತ್ರದ ಅಭ್ಯರ್ಥಿ ಅಲ. ಕುಮಾರಸ್ವಾಮಿ ಈ ಕ್ಷೇತ್ರದ ಅಭ್ಯರ್ಥಿ ಎಂದು ಹೇಳಿಕೆ ನೀಡುವ ವೇಳೆ ಕಾರ್ಯಕ್ರಮದಲ್ಲಿ ಕಣ್ಣಿರು ಹಾಕಿದರು.
ನನಗೊಸ್ಕರ ಜಿಲ್ಲೆಯ ಸೇವೆ ಮಾಡಿದ್ದಾರೆ ಅಪಪ್ರಚಾರಕ್ಕೆ ಕಿವಿಗೊಡದೆ ಈ ಚುನಾವಣೆ ಸತ್ವ ಪರೀಕ್ಷೆ ನಾವು ಭವಿಷ್ಯ ಮಂಡ್ಯ. ಹಾಸನ ಕೋಲಾರದಲ್ಲಿ. ಜೆಡಿಎಸ್ ನಿಲ್ಲಿಸಲು ಬಿಜೆಪಿ ಅವಕಾಶ ನೀಡಿದೆ. ನಾವು ಕೇಳಿದರೆ ಇನ್ನೂ ಎರಡು ಕ್ಷೇತ್ರ ಕೊಡುತ್ತಿದ್ದರು. ಅದರೆ ಚುನಾವಣೆ ನಡೆಯುವ ರೀತಿ ನೋಡಿದರೆ. ಆ ಕಾರಣ ನಾನು ೨೦೦೭ ರಿಂದ ೧೭ ವರ್ಷಗಳ ಕಾಲ ಜನರಿಗೆ ಸೇವೆ ಮಾಡಿದ್ದನೆ. ಹಣ ಮಾಡಿಲ್ಲ. ನಮ್ಮಿಂದ ಸೇವೆ ಪಡೆದವರು ಕೈ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಆರೋಪ ಮಾಡಿದಾಗೆ ಕಾಂತರಾಜು ವರದಿ ಕುಮಾರಸ್ವಾಮಿ ತೆಗೆದುಕೊಳ್ಳಲಿಲ್ಲ. ಅನ್ನುವರು ಜಯಪ್ರಕಾಶ್ ಹೆಗಡೆ ಕಾಂತರಾಜು ವರದಿಯ ತೆಗೆದುಕೊಂಡು ಎನು ಮಾಡುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದರು.
ಜಾತಿಯಲ್ಲಿ ಬಡತನ ಇಲ್ಲ ಲಿಂಗಾಯಿತರು ಒಕ್ಕಲಿಗರು ಬಡವರಿದ್ದಾರೆ. ಅದೆ ರೀತಿ ದಲಿತರು ಕೂಡ ಬಡವರಿದ್ದಾರೆ. ಎಲ್ಲಾ ಜಾತಿಯವರು ಬಡವರಿದ್ದಾರೆ. ಜಾತಿಗಣತಿ ವರದಿ ಬಿಡುಗಡೆ ಮಾಡಿ ಎಂದು ಚಾಲೇಂಜ್ ಮಾಡಿದರು. ನೀವು ಕೊಡುವ ಎರಡು ಸಾವಿರ ಹಣದಿಂದ ಶಿಕ್ಷಣ ಆರೋಗ್ಯ ಕೊಡಲು ಆಗುವುದಿಲ್ಲ. ನಾನು ಹತ್ತು ಹದಿನೈದು ದಿನಗಳ ಕಾಲ ಹಾಸನ ಜಿಲ್ಲೆಯ ಚುನಾವಣೆಯಲ್ಲಿ ಪ್ರಚಾರ ಮಾಡುತ್ತೆನೆ. ರೇವಣ್ಣನವರ ಮುಂಗೋಪ ನಿಮ್ಮ ಮನಸ್ಸಿಗೆ ನೊವಾಗಿರಬಹುದು. ಅಷ್ಟಕ್ಕೇ ಅವರ ಬಗ್ಗೆ ಅಸಮಾಧಾನ ಬೇಡ ಅವನಂತಹ ದುಡಿಮೆ ಮಾಡುವ ವ್ಯಕ್ತಿ ಈ ಜಿಲ್ಲೆಯಲ್ಲಿ ಯಾರು ಸಿಗುವುದಿಲ್ಲ ಎಂದರು.
ವಯಸ್ಸಿನ ಕಾರಣ ಪ್ರಜ್ವಲ್ ತಪ್ಪು ಮಾಡಿರಬಹುದು. ತಿದ್ದುಕೊಳ್ಳುವ ಮನುಷ್ಯನಿಗೆ ಇರುವ ದೊಡ್ಡಗುಣ ಜನ ಕ್ಷಮಿಸಬೇಕು. ಅದರಲ್ಲಿ ನಂಬಿಕೆ ಇದೆ ಈ ಪಕ್ಷ ಮುಗಿಸಿಲು ಹೊರಟಿದ್ದಾರೆ ನಾನೆನು ಹಣ ಸಂಪಾದನೆ ಮಾಡಿಲ್ಲ ಆಸ್ತಿ ಮಾಡಲು ಗಮನ ನೀಡಿಲ್ಲ ನಾನು ಬಂದಾತಹ ಜನರ ಕಷ್ಟ ಸುಖ ವಿಚಾರಣೆ ಮಾಡಿ ಲಕ್ಷಾಂತರ ಜನರನ್ನು ಸಂಪಾದನೆ ಮಾಡಿದ್ದೆನೆ.
ನರೇಂದ್ರ ಮೊದಿ ದೇವೇಗೌಡರಿಗೆ ಕೊಡುವ ಗೌರವ ಉಳಿಸಲು ರೇವಣ್ಣನವರ ಮಗ ಅಲ್ಲ ನನ್ನ ಮಗ ಅಂತ ಚುನಾವಣೆಯಲ್ಲಿ ಗೆಲ್ಲಿಸಿ ರೇವಣ್ಣನವರ ವರ್ತನೆ ಬದಲಾವಣೆ ಮಾಡಲು ನಾನು ಶ್ರಮ ಹಾಕುತ್ತೆನೆ. ಬಿಜೆಪಿ ಜೊತೆ ಹೋದ ಕಾರಣ ಅಲ್ಪಸಂಖ್ಯಾತರಿಗೆ ಅಸಮಾಧಾನ ಇರಬಹುದು. ರಾಜ್ಯದ ಒಬ್ಬ ಅಲ್ಪಸಂಖ್ಯಾತ ಮಂತ್ರಿ ಕೇಂದ್ರ ಸರ್ಕಾರ ಮುಸ್ಲಿಂ ಸಮುದಾಯದ ಶಾಲೆಗೆ ಕೊಟ್ಟಿರುವ ೨೮೨ ಕೋಟಿ ಬಗ್ಗೆ ಹೇಳಿಕೆ ನೀಡಿದ್ದಾರೆ. ಇದನ್ನು ಅರ್ಥ ಮಾಡಿಕೊಳ್ಳಿ ನಾನು ಚುನಾವಣೆಯಲ್ಲಿ ನಿಲ್ಲುವುದಿಲ್ಲ.
ನಾನು ಮಂಡ್ಯದಲ್ಲಿ ತುಮಕೂರು, ಚಿಕಬಳ್ಳಾಪುರ ಜಿಲ್ಲೆಯಲ್ಲಿ ನಿಲ್ಲುವ ಒತ್ತಡ ಇದೆ. ಮಾತ್ತೆತಿದ್ದರೆ ದೇವೇಗೌಡರ ಕುಟುಂಬದ ಬಗ್ಗೆ ಮಾತನಾಡುತ್ತಾರೆ. ಪಟ್ಟಿ ತೆಗೆದು ನೋಡಿ ಯಾವ ಯಾವ ಪಕ್ಷದಲ್ಲಿ ಕುಟುಂಬದ ಅಣ್ಣ ತಮ್ಮ ಅಪ್ಪ ಮಗ ಸಹೋದರರು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.
ಮಾತೆತಿದ್ದರೆ ದೇವೇಗೌಡರು ಕುಟುಂಬದ ರಾಜಕೀಯ ಬಗ್ಗೆ ಮಾತನಾಡುತ್ತಾರೆ. ನಾವು ಮಂಜುನಾಥ ರವರನ್ನು ರಾಜಕೀಯ ತರಲು ಇಷ್ಟವಿರಲಿಲ್ಲ. ಕೇಂದ್ರದ ಬಿಜೆಪಿ ಹೈಕಮಾಂಡ್ ನನ್ನ ಮೇಲೆ ಒತ್ತಡ ಹಾಕಿ ನಾನು ಬೆಳೆದಂತಹ ನನಗೆ ಜನ್ಮ ನೀಡಿದ ಕ್ಷೇತ್ರದಿಂದ ಲೋಕಸಭೆಗೆ ಅಭ್ಯರ್ಥಿಯಾಗಿದ್ದಾರೆ. ಇವತ್ತು ನೀವು ಹಾಕುವ ಕೂಗು ಕನಕಪುರಕ್ಕೆ ಕೇಳಬೇಕು. ಅವನು ಹಾಸನ ಜಿಲ್ಲೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಾಸನದ ಕೂಗು ಹೊಳೆನರಸೀಪುರ ಕ್ಷೇತ್ರಕ್ಕೆ ಕೇಳಬೇಕು ಎನ್ನುತ್ತಾರೆ. ನಾನು ರಾಜಕೀಯದಲ್ಲಿ ಲೂಟಿ ಹೊಡೆಯಲಿಲ್ಲ ಎಂದ ಅವರು, ನಾನು ಚಿಕಿತ್ಸೆ ಪಡೆದು ರಾಜ್ಯಾಧ್ಯಾಂದತ ಬಿಜೆಪಿ ಜೆಡಿಎಸ್ ಅಭ್ಯರ್ಥಿ ಗೆಲುವಿಗೆ ಶ್ರಮಿಸುವುದಾಗಿ ಹೇಳಿದ ವೇಳೆ ಸ್ಥಳದಲ್ಲೆ ಇದ್ದ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರು ಕಣ್ಣಿರು ಹಾಕಿದ ಪ್ರಸಂಗ ನಡೆಯಿತು.
ಇದೆ ವೇಳೆ ಮಾಜಿ ಸಚಿವ ಹೆಚ್.ಡಿ. ರೇವಣ್ಣ, ಸಂಸದರಾದ ಪ್ರಜ್ವಲ್ ರೇವಣ್ಣ, ವಿಧಾನ ಪರಿಷತ್ತು ಸದಸ್ಯರಾದ ಸೂರಜ್ ರೇವಣ್ಣ, ಶಾಸಕರಾದ ಹೆಚ್.ಪಿ. ಸ್ವರೂಪ್, ಸಿ.ಎನ್. ಬಾಲಕೃಷ್ಣ, ಎ. ಮಂಜು, ಮಾಜಿ ಸಚಿವರಾದ ಹೆಚ್.ಕೆ. ಕುಮಾರಸ್ವಾಮಿ, ಲಿಂಗೇಶ್, ಬಿ.ವಿ. ಕರೀಗೌಡ, ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ, ಬೋಜರಾಜ್, ತೋ.ಚ. ಅನಂತಸುಬ್ಬರಾಯ್, ಹುಡಾ ಮಾಜಿ ಅಧ್ಯಕ್ಷ ಕೆ.ಎಂ. ರಾಜೇಗೌಡ, ಮುಖಂಡರಾದ ಸಂತೋಷ್, ಹೆಚ್.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ನಾಗರಾಜು, ಬಿದರಿಕೆರೆ ಜಯರಾಂ, ಗಿರೀಶ್ ಚನ್ನವೀರಪ್ಪ, ಪ್ರಭುಕುಮಾರ್, ನಗರಸಭೆ ಮಾಜಿ ಅಧ್ಯಕ್ಷ ಸಿ.ಆರ್. ಶಂಕರ್, ಅಶೋಕ್, ಮಾಧ್ಯಮ ವಕ್ತಾರ ಹೊಂಗೆರೆ ರಘು ಇತರರು ಉಪಸ್ಥಿತರಿದ್ದರು.






