
ಹಾಸನ: ಭೂಮಿ ಮೇಲೆ ಸುಮ್ಮನೆ ಹುಟ್ಟಿದ್ದೇವೆ. ಶರೀರ ಶಾಶ್ವತವಲ್ಲ ಭಗವಂತಹ ಕೊಟ್ಟಂತಹ ಅವಕಾಶವನ್ನು ಸಾರ್ಥಕಪಡಿಸಿಲಲ್ಲಿರುವಷ್ಟು ದಿವಸಗಳ ಕಾಲ ಸೇವೆ ಮಾಡಬೇಕೆಂದು ಶ್ರೀ ಆದಿಚುಂಚನಗಿರಿ ಶಾಖಾ ಮಠದ ಮಠಾಧೀಶರಾದ ಶ್ರಿ ಶಂಭುನಾಥ ಸ್ವಾಮೀಜಿ ಕಿವಿಮಾತು ಹೇಳಿದರು.
ನಗರದ ಶ್ರೀ ಶಂಕರ ಮಠದಲ್ಲಿ ಎಸ್.ಎಸ್.ಎಂ. ಮಲ್ಟಿ ಸ್ಪೆಷಾಲಿಸಿ ಹಾಸ್ಪಿಟಲ್ ಇವರ ಸಂಯುಕ್ತಾಶ್ರಯದಲ್ಲಿ ಬುಧವಾರದಂದು ನಡೆದ ಡಾ. ಎಸ್.ಆರ್. ದಿನೇಶ್ ಜನ್ಮ ದಿನದ ಸ್ಮರಣೆ ಕಾರ್ಯಕ್ರಮದ ಅಂಗವಾಗಿ ನಡೆದ ಎರಡು ದಿನಗಳ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ತಮ್ಮ ಆಶೀರ್ವಚನದಲ್ಲಿ ಉದ್ದೇಶಿಸಿ ಮಾತನಾಡಿದ ಅವರು,
ಎಸ್.ಎಸ್.ಎಂ. ಆಸ್ಪತ್ರೆಯನ್ನು ಸೇವೆ ರೀತಿ ಬೆಳೆಸಿಕೊಂಡು ಬಂದಂತಹ ದಿವಂಗತ ಡಾ. ದಿನೇಶ್ ಅವರ ಜನ್ಮದಿನವನ್ನು ಉಚಿತ ಆರೋಗ್ಯ ತಪಾಸಣೆ ಮೂಲಕ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಅವರ ಹುಟ್ಟು ಹಬ್ಬ ಮತ್ತು ಸ್ಮರಣೆಯನ್ನು ಅವರ ಶ್ರೀಮತಿಯವರು ಹಾಗೂ ಜನ್ಮ ಕೊಟ್ಟಂತಹ ತಾಯಿಯವರು, ಅಭಿಮಾನಿಗಳು, ಹಿತೈಸಿಗಳು ಎಲ್ಲಾ ಸೇರಿ ಉತ್ತಮ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದಾರೆ ಎಂದರು.
ಭೂಮಿ ಮೇಲೆ ಸುಮ್ಮನೆ ಹುಟ್ಟಿದ್ದೇವೆ. ಆಗೆ ಹೋಗಬಾರದು. ಭಗವಂತಹ ಕೊಟ್ಟಂತಹ ಅವಕಾಶವನ್ನು ಸಾರ್ಥಕವಾದ ನಮ್ಮ ಬದುಕಿನಲ್ಲಿ ರೂಪಿಸಿಕೊಂಡರೇ ಮನ್ನಣೆ ಸಿಗುತ್ತದೆ. ಈ ಶರೀರ ಅನಿಥ್ಯವಾದುದ್ದು ಶಾಶ್ವತವಾದುದ್ದಲ್ಲ. ನಾವು ಏನೆನು ಸಂಪಾದನೆ ಮಾಡಿದ್ದೇವೆ ಅವು ಯಾವುದು ನಮ್ಮ ಹಿಂದೆ ಬರುವುದಿಲ್ಲ. ಪ್ರತಿನಿತ್ಯ, ಕ್ಷಣ ಹುಟ್ಟಿದ ನಾವು ಸಾವು ಕಡೆ ಪ್ರಯಾಣ ಮಾಡಲೇಬೇಕು ಎಂದು ಕಿವಿಮಾತು ಹೇಳಿದರು.
ಅಷ್ಟರೊಳಗೆ ಭಗವಂತ ಕೊಟ್ಟಂತಹ ಅವಕಾಶವನ್ನು ಸಾರ್ಥಕವಾಗಿ, ಸುಂದರವಾಗಿ ಒಂದಷ್ಟು ಸೇವೆ ಮಾಡಿದರೇ ಸಾಕು ಸದಾ ಸ್ಮರಣೆ ಮಾಡುತ್ತಾರೆ ಎನ್ನುವುದಕ್ಕೆ ಡಾ. ದಿನೇಶ್ ಅವರೆ ಉದಾಹರಣೆ. ಒಂದು ಜವಬ್ಧಾರಿ ಸ್ಥಾನದಲ್ಲಿ ಇದ್ದಂತವರು ಅವರು ಕಣ್ಮರೆಯಾದಂತಹ ಸಮಯದಲ್ಲಿ ದಿಕ್ಕು ತಪ್ಪಿದಂತೆ ಆಗುತ್ತದೆ. ಆದರೇ ದಿಕ್ಕು ತಪ್ಪದೆ ಆತ್ಮಸ್ಥೈರ್ಯವಾಗಿ ಅವರ ಹಿತೈಸಿಗಳಾದಂತಹ ವೈದ್ಯರುಗಳ ಜೊತೆಯಲ್ಲಿ ಉತ್ತಮವಾಗಿ ನಡೆಸುಕೊಂಡು ಬರುತ್ತಿರುವುದು ನಿಜಕ್ಕು ಶ್ಲಾಘನೀಯ ಎಂದು ಹೇಳಿದರು.
ಎಸ್.ಎಸ್.ಎಂ. ಮಲ್ಟಿ ಸ್ಪೆಷಾಲಿಸಿ ಹಾಸ್ಪಿಟಲ್ ಮುಖ್ಯಸ್ಥರಾದ ಸೌಮ್ಯದಿನೇಶ್ ಮಾತನಾಡಿ, ಕಷ್ಟದ ಸಮಯದಲ್ಲಿ ನನ್ನನ್ನು ಅತ್ತೆ ಮಾವ ಅವರು ತುಂಬ ಚನ್ನಾಗಿ ಮಗುತರ ನೋಡಿಕೊಂಡಿದ್ದು, ನಾವು ಮಾಡುವ ಪ್ರತಿ ಕೆಲಸಕ್ಕೂ ಆಶೀರ್ವಾದ ಮಾಡುತ್ತಿದ್ದಾರೆ. ಮಾನಸಿಕ ಸ್ಥೈರ್ಯದ ವೇಳೆ ಹಾಗೂ ಕಷ್ಟದ ಸಮಯದಲ್ಲಿ ವೈದ್ಯರು ಹಾಗೂ ಆಸ್ಪತ್ರೆಯ ವರ್ಗದವರು ಸಹಕಾರ ನೀಡಿದ್ದಾರೆ ಎಂದರು. ಪ್ರಸ್ತೂತ ದಿನಗಳಲ್ಲಿ ಸ್ಪರ್ದಾತ್ಮಕದ ವೇಳೆ ಎಸ್.ಎಸ್.ಎಂ. ಆಸ್ಪತ್ರೆ ಬೆಳೆಯಲು ಪ್ರೋತ್ಸಹಿಸಿದ್ದಾರೆ ಎಂದು ಹೇಳಿದರು.
ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷರಾದ ದೇವದಾಸ್ ಮಾತನಾಡಿ, ಹಣವಂತರಿಗೆ ಮಾತ್ರ ಆಸ್ಪತ್ರೆ ನಿರ್ಮಿಸಲಿಲ್ಲ. ಬಡವರಿಗೆ ಕೈಗೆಟಕುವ ಬೆಲೆಯಲ್ಲಿ ಸೇವೆ ನೀಡಿದ್ದಾರೆ. ಬಡವರ ಬಗ್ಗೆ ಹೆಚ್ಚಿನ ಕಳಾಕಳಿ ಇಟ್ಟುಕೊಂಡು ಕೆಲಸ ಮಾಡಿದ್ದಾರೆ ಎಂದು ದಿವಂಗತ ದಿನೇಶ ಅವರನ್ನು ಸ್ಮರಿಸಿದರು.
ಈಗ ಅವರ ಪತ್ನಿ ಸೌಮ್ಯ ಅವರು ಆಸ್ಪತ್ರೆಯನ್ನು ಉತ್ತಮವಾಗಿ ಬೆಳೆಸಿಕೊಂಡು ಬರುತ್ತಿದ್ದಾರೆ ಎಂದರು. ಹೆಣ್ಣಾಗಿ ತುಂಬ ದೈರ್ಯದಲ್ಲಿ ಆಸ್ಪತ್ರೆಯನ್ನು ಮೇಲ್ ದರ್ಜೆಗೆ ಏರಿಸಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಅನೀಲ್, ಎಸ್.ಎಸ್.ಎಂ. ಮಲ್ಟಿ ಸ್ಪೆಷಾಲಿಸಿ ಹಾಸ್ಪಿಟಲ್ ವೈದ್ಯರಾದ ಡಾ. ವಿನಾಯಕ್, ಡಾ. ಶ್ರೀ ವಿದ್ಯಾ ಇತರರು ಉಪಸ್ಥಿತರಿದ್ದರು.



