
ಚನ್ನರಾಯಪಟ್ಟಣ: ವಿಶ್ವದಲ್ಲೇ ದೇಶ ಬಹುಳ ಮುಂದುವರೆದಿದ್ದು ಅಭಿವೃದ್ಧಿ ಹೊಂದುತ್ತಿದೆ ಆದರೆ ನ್ಯಾಯ ನೀತಿ ಸತ್ಯ ಧರ್ಮ ಉಳಿದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ತಿಳಿಸಿದರು.
ಅವರು ತಾಲೂಕಿನ ಕಸಬಾ ಹೋಬಳಿ ಮಲ್ಲವನಘಟ್ಟದಲ್ಲಿ ನೂತನವಾಗಿ ಜೀರ್ಣೋದ್ಧಾರಗೊಂಡ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದ ಪುನರ್ ಪ್ರತಿಷ್ಠಾಪನ, ನೂತನ ವಿಮಾನ ಗೋಪುರ ಕಳಶ ಪ್ರತಿಷ್ಠಾಪನ ಹಾಗೂ ಮಹಾ ಕುಂಭಾಭಿಷೇಕ ಕಾರ್ಯಕ್ರಮದಲ್ಲಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಜನರು ನಾವು ಎಷ್ಟು ಬೇಗ ಅಭಿದ್ಧಿಯಾಗುತ್ತೇವೆ ಎಷ್ಟು ಹಣ ಮಾಡುತ್ತೇವೆ ಎಂಬುದರ ಕಡೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಬೇರೆಯವರಿಗಿಂದ ಹೆಚ್ಚು ಶ್ರೀಮಂತರಾಗಬೇಕು ಎಂಬ ದುರಾಸೆ ಹೆಚ್ಚಾಗುತ್ತಿದೆ.
ಹಿಂದಿನ ಕಾಲದಲ್ಲಿ ಕುಟುಂಬಗಳಲ್ಲಿ ಪ್ರೀತಿ ವಾತ್ಸಲ್ಲ ಹೆಚ್ಚಾಗಿತ್ತು ಆದರೆ ಈಗ ಪ್ಯಾಷನ್ ಯುಗಕ್ಕೆ ಹೆಚ್ಚು ಮಾರುಹೋಗುತ್ತಿರುವ ಯುವಕರು ಸಂಸ್ಕಾರ ಸಂಸ್ಕೃತಿಗೆ ಆದ್ಯತೆ ನೀಡಬೇಕು. ಒಟ್ಟು ಕುಟುಂಬದಲ್ಲಿ ಇರದೆ ಪ್ರತ್ಯೇಕ ಸಂಸಾರಗಳನ್ನು ನಡೆಸಲು ಇಷ್ಟ ಪಡುತ್ತಾರೆ ಇದು ಒಳ್ಳೆಯ ಬೆಳವಣಿಗೆಯಲ್ಲಿ. ಹಳ್ಳಿಗಳಿದ್ದರೆ ದೇಶ ಉಳಿಯುಲು ಸಾಧ್ಯ ದೇವಸ್ಥಾನ ನಿರ್ಮಾಣದಿಂದ ಹಳ್ಳಿಗಳಲ್ಲಿ ಹೆಚ್ಚು ನೆಮ್ಮದಿ ಸಂತೋಷ ಕೂಡಿರುತ್ತದೆ ಎಂದರು.
ಶಾಸಕ ಸಿ. ಎನ್. ಬಾಲಕೃಷ್ಣ ಮಾತನಾಡಿ ಸುಮಾರು 500 ವರ್ಷಗಳ ಇತಿಹಾಸವಿರುವ ಶ್ರೀ ವೀರಾಂಜನೇಯ ಶೀತಲಗೊಂಡಿದ್ದು ಜನಪ್ರತಿನಿಧಿಗಳು ಗ್ರಾಮಸ್ಥರು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಸಹಕಾರದೊಂದಿಗೆ ಒಂದು ಕೋಟಿ ರೂ ವೆಚ್ಚದಲ್ಲಿ ಜೀರ್ಣೋದ್ಧಾರಗೊಳಿಸಲಾಗಿದ್ದು ಗ್ರಾಮಗಳಲ್ಲಿ ಶಾಂತಿ ನೆಮ್ಮದಿ ಉಳಿಯುವುದು ದೇವಸ್ಥಾನ ನಿರ್ಮಾಣಗಳಿಂದ ಮಾತ್ರ ಸಾಧ್ಯ, ಹಾಸನಕ್ಕೆ ಇಂದು ಕುಮಾರಸ್ವಾಮಿಯವರು ಆಗಮಿಸಿ ಪಕ್ಷ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಂದರ್ಭದಲ್ಲಿ ಇಂದು ದೇವಸ್ಥಾನ ಉದ್ಘಾಟನೆಗೆ ಆಗಮಿಸಿದ್ದಾರೆ ಮುಂದಿನ ದಿನಗಳಲ್ಲಿ ಕುಮಾರಸ್ವಾಮಿಯವರಿಗೆ ಆಂಜನೇಯನ ಕೃಪೆಯಿಂದ ಆರೋಗ್ಯ ಭಾಗ್ಯ ಕೊಟ್ಟು ರಾಜಕೀಯದಲ್ಲಿ ದೊಡ್ಡ ಶಕ್ತಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಮಲ್ಲನಘಟ್ಟ ಕಗ್ಗೆರೆ ಬಾಬು, ಗ್ರಾಮ ಪಂಚಾಯಿತಿ ಸದಸ್ಯ ಪ್ರಕಾಶ್, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಮಂಜೇಗೌಡ, ಜವರೇಗೌಡ, ಮುಖಂಡರಾದ ನಂಜುAಡೇಗೌಡ, ಅನಂತ್, ಉಮೇಶ್ ಮತ್ತಿತರಿದ್ದರು.
