
ಸಕಲೇಶಪುರ : ಇತ್ತೀಚೆಗೆ ಸಕಲೇಶಪುರ ಸಹಾಯಕ ಕೃಷಿ ನಿರ್ದೇಶಕರಾಗಿ ನಿಯೋಜನೆಗೊಂಡಿದ್ದ ದಕ್ಷ ಅಧಿಕಾರಿ ಪ್ರಕಾಶ್ ಕುಮಾರ್ ವರ್ಗಾವಣೆ.
ತಮ್ಮ ಕಾರ್ಯ ವೈಖರಿ ಮೂಲಕ ಸಾರ್ವಜನಿಕರ ಗಮನ ಸೆಳೆದಿದ್ದ ತಾಲೂಕು ಸಹಾಯಕ ಕೃಷಿ ಅಧಿಕಾರಿ ಪ್ರಕಾಶ್ ಕುಮಾರ್ ಅವರನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶಿಸಿದೆ.
ಸಾರ್ವಜನಿಕ ಹಾಗೂ ಚುನಾವಣಾ ದೂರುಗಳನ್ನು ಆಧರಿಸಿ ಪ್ರಕಾಶ್ ಕುಮಾರ್ ಅವರನ್ನು ಉತ್ತರ ಕನ್ನಡ ಜಿಲ್ಲೆಯ ಕಾರವಾರಕ್ಕೆ ವರ್ಗಾವಣೆಗೊಳಿಸಲಾಗಿದೆ. ಆದರೆ ತಾಲೂಕಿನ ಜನತೆ ಇವರ ಕಾರ್ಯಕ್ಷಮತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರೂ ಸರ್ಕಾರದ ಈ ನಿರ್ಧಾರಕ್ಕೆ ತಾಲೂಕಿನ ಜನರು ಅಸಮಾಧಾನ ಹೊರಹಾಕಿದ್ದಾರೆ.
ಕೆಲ ದಿನಗಳ ಹಿಂದೆ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಮುರಳಿ ಮೋಹನ್ ಹಾಗೂ ಪ್ರಕಾಶ್ ಕುಮಾರ್ ನಡುವೆ ನಡೆದಿದ್ದ ಆಡಿಯೋ ಸಂಭಾಷಣೆ ವೈರಲ್ ಆಗಿತ್ತು. ಇದರ ನಡುವೆಯೂ ಕೃಷಿ ಅಧಿಕಾರಿಯ ವರ್ಗಾವಣೆ ತಾಲೂಕಿನ ಜನರಿಗೆ ಅಚ್ಚರಿ ಮೂಡಿಸಿದೆ ..

