
ಸಕಲೇಶಪುರ : ಲಯನ್ಸ್ ಸೇವಾ ಸಂಸ್ಥೆಯು ಅನೇಕ ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಮಾಡುತ್ತ ಬರುತ್ತಿದೆ ಎಂದು ಲಯನ್ ಡಿಸ್ಟ್ರಿಕ್ಟ್ ಗೌರ್ನರ್ ಮೆಲ್ವಿನ್ ಡಿಸೋಜ 317 -D ಹೇಳಿದರು.
ಪಟ್ಟಣದ ಲಯನ್ಸ್ ಸೇವಾ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ದಿ ಅಫೀಷಿಯಲ್ ವಿಸಿಟ್ ಡಿಸ್ಟ್ರಿಕ್ಟ್ ಗೌರ್ನರ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು
ಲಯನ್ಸ್ ಸಂಸ್ಥೆಯು ಸಕಲೇಶಪುರದಲ್ಲಿ ಹಿಂದು ಮುಕ್ತಿಧಾಮ, ಹಾಗೂ ಅದರ ನಿರ್ವಹಣೆ, ಬ್ಲಡ್ ಡೊನೇಷನ್, ಹಾಗೂ ಇತ್ತೀಚೆಗೆ ಮೂರು ಹಾಸಿಗೆಗಳ ಸಂಜೀವನಿ ಡಯಾಲಿಸಿಸ್ ಸೆಂಟರ್ ತೆರೆಯಲಾಗಿದೆ ಇದರ ಸದುಪಯೋಗವನ್ನು ಎಲ್ಲರೂ ಬಳಸಿಕೊಳ್ಳಬಹುದಾಗಿದೆ
ಇದಕ್ಕೆ ಶ್ರಮಿಸಿದ ಎಲ್ಲಾ ಲಯನ್ಸ್ ಮಿತ್ರರು ಉತ್ತಮ ಕಾರ್ಯಕ್ರಮಗಳನ್ನು ಮಾಡುತ್ತ ಬರುತ್ತಿದ್ದು ಅವರುಗಳಿಗೆ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಡಿಸ್ಟ್ರಿಕ್ಟ್ ನಿಕಟಪೂರ್ವ ಅದ್ಯಕ್ಷರಾದ ಸಂಜಿತ್ ಶೆಟ್ಟಿ, ಲಯನ್ಸ್ ಸಂಸ್ಥೆಯ ಅದ್ಯಕ್ಷರಾದ ಬಬಿತಾ ವಿಶ್ವನಾಥ್, ಸಿ.ಪಿ.ಪ್ರಸನ್ನ ಕುಮಾರ್, ಡಾ.ನವೀನ್ ಚಂದ್ರಶೆಟ್ಟಿ, ಮೀನಾಕ್ಷಿ ಖಾದರ್, ಇನ್ನಿತರರು ಇದ್ದರು.
