ಸಕಲೇಶಪುರ : ನಗರದ ತಾಲೂಕು ಪಂಚಾಯತಿ ಆವರಣದಲ್ಲಿ  ಕೃಷಿ ಇಲಾಖೆಯಿಂದ ಆಯ್ದ ರೈತ ಫಲಾನುಭವಿಗಳಿಗೆ ಮಿನಿ ಟ್ರ್ಯಾಕ್ಟರ್ ವಿತರಣಾ ಕಾರ್ಯಕ್ರಮದಲ್ಲಿ ಶಾಸಕ, ರಾಜ್ಯ ಬಿಜೆಪಿ ಎಸ್.ಸಿ ಮೋರ್ಚಾ ರಾಜ್ಯಧ್ಯಕ್ಷ ಸಿಮೆಂಟ್ ಮಂಜುನಾಥ್ ಭಾಗಿಯಾಗಿದ್ದರು.

ನಂತರ ಮಾತನಾಡಿದ ಅವರು, ಇಲಾಖೆಯ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಂಡು ರೈತರು ಆರ್ಥಿಕವಾಗಿ ಸದೃಢರಾಗಬೇಕು ದೇಶದಲ್ಲಿ ಬಹುಪಾಲು ಜನ ಇಂದಿಗೂ ಕೃಷಿ ಅವಲಂಬಿತರಾಗಿದ್ದಾರೆ. ರೈತರು ದೇಶದ ಅರ್ಥ ವ್ಯವಸ್ಥೆಯ ಬೆನ್ನೆಲುಬು. ಹಗಲಿರುಳು ದುಡಿಯುವ ರೈತರಿಗೆ ಇಂದಿಗೂ ಅವರ ಶ್ರಮಕ್ಕೆ ತಕ್ಕ ಪ್ರತಿಫಲ ದೊರಕದಿರುವುದು ದುರಂತ.

ರೈತರು ಇಲಾಖೆಯ ಸೌಲಭ್ಯಗಳನ್ನು ಸಮರ್ಥವಾಗಿ ಬಳಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಅವರು ಕರೆ ನೀಡಿದರು.

ಸಹಾಯಕ ಕೃಷಿ ನಿರ್ದೇಶಕ ಪ್ರಕಾಶ್ ಕುಮಾರ್ ಮಾತನಾಡಿ,ಸರ್ಕಾರದ ಸಹಾಯಧನದಯಡಿಯಲ್ಲಿ ಕೃಷಿ ಇಲಾಖೆ ವತಿಯಿಂದ ನಾಲ್ವರು ರೈತರಿಗೆ ಮಿನಿ ಟ್ರ್ಯಾಕ್ಟರ್ ವಿತರಣೆ ಮಾಡಲಾಗಿದೆ.

2023-24 ಸಾಲಿನಲ್ಲಿ ಮಳೆ ಅಭಾವವಿರುವುದ್ದರಿಂದ 1500ಕ್ಕೂ ತುಂತುರು ನೀರಾವರಿ ಘಟಕಗಳನ್ನು ಸ್ಥಾಪನೆ ಮಾಡಲಾಗಿದೆ.324 ಫಲನುಭವಿಗಳಿಗೆ ಡೀಸೆಲ್ ಮೋಟಾರ್ ಗಳು, ಪವರ್ ಸ್ಪ್ರೇ ಗಳನ್ನು 19 ಸಾಮಾನ್ಯ ವರ್ಗ ಮತ್ತು 26 ಪರಿಶಿಷ್ಟ ಪಂಗಡದವರಿಗೆ ನೀಡಲಾಗಿದೆ.

ಪವರ್ ವಿಡರ್ ನ್ನು ಸಾಮಾನ್ಯ 19 ಹಾಗೂ 45 ಪರಿಶಿಷ್ಟ ಜಾತಿ,04 ಪರಿಶಿಷ್ಟ ಪಂಗಡದವರಿಗೆ ನೀಡಲಾಗಿದ್ದು.ಇದರ ಜೊತೆಗೆ ಭತ್ತಮೇವು ಕಟಾವು ಯಂತ್ರಗಳನ್ನು ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಮಿನಿ ಟ್ರ್ಯಾಕ್ಟರ್ ಚಾಲನೆ ಮಾಡುವ ಮೂಲಕ ಶಾಸಕರು ಎಲ್ಲರ ಗಮನ ಸೆಳೆದರು ಈ ಸಂಧರ್ಭದಲ್ಲಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ ರಾಮಕೃಷ್ಣ, ತಾಪಂ ಸಹಾಯಕ ನಿರ್ದೇಶಕರುಗಳಾದ ಆದಿತ್ಯ,ಹರೀಶ್ ಪುರಸಭಾ ಸದಸ್ಯರಾದ ರೇಖಾ ರುದ್ರಕುಮಾರ್, ಪ್ರದೀಪ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *