ಹಾಸನ: ನನಗೆ ಮತ್ತು ನಮ್ಮ ಕುಟುಂಬಕ್ಕೆ ರಕ್ಷಣೆ ನೀಡಬೇಕು ಹಾಗೂ ಮನೆ ನಿರ್ಮಾಣ ಮಾಡಲು ತಮ್ಮ ಸಹಕಾರ ನೀಡಬೇಕು. ಇಲ್ಲವಾದರೇ ನಾವು ಬದುಕುವುದೇ ಬೇಡ ಎಂದು ತೀರ್ಮಾನ ಮಾಡಲಾಗಿದ್ದು, ನಮ್ಮ ಕುಟುಂಬ ಸಮೇತ ನಮಗೆ ದಯಾಮರಣ ನೀಡಬೇಕಾಗಿ ಜಿಲ್ಲಾಧಿಕಾರಿ ಕಛೇರಿ ಮುಂದೆ ಶಿವಯೋಗಿಪುರ ನಿವಾಸಿಗಳಾದ ಯಶೋಧ ಹಾಗೂ ಚಂದ್ರಯ್ಯ ಅವರು ಅವರಲ್ಲಿ ಮನವಿ ಮಾಡಿದ್ದಾರೆ.

ಇದೆ ವೇಳೆ ಶಿವಯೋಗಿಪುರದ ಚಂದ್ರಯ್ಯ ಅವರು ಮಾಧ್ಯಮದೊಂದಿಗೆ ಮಾತನಾಡಿ, ಶಿವಯೋಗಿಪುರ ಗ್ರಾಮದಲ್ಲಿ ನನ್ನಸ್ವಂತ ಮನೆಯಿದ್ದು, ಖಾತೆ ನಂಬರ ೧೨೦, ಪೂ-ಪ: ೩೫ ಉ-ದ: ೧೯ ಶೌಚಾಲಯ ೭ * ೫ ಇದು ನನ್ನ ಸ್ವಂತ ಮನೆಯಾಗಿದ್ದು, ನಾನು ಸುಮಾರು ೨೫ ವರ್ಷಗಳಿಂದ ವಾಸವಾಗಿರುತ್ತೇವೆ.

ಮಳೆ ಹಾನಿಗೆ ಮನೆ ಬಿದ್ದು ಹೋಗಿರುತ್ತದೆ. ಇದಕ್ಕೆ ನಾನು ಸರ್ಕಾರದಿಂದ ರೂ ೯೫,೦೦೦ ರೂಗಳನ್ನು ಪಡೆದುಕೊಂಡಿದೆ. ಪುನಾ: ಮನೆ ನಿರ್ಮಾಣ ಮಾಡಲು ಮುಂದಾದರೇ ನಮ್ಮ ಗ್ರಾಮದಲ್ಲಿರುವ ಕೆಲವರು ತೊಂದರೆ ಕೊಡುತ್ತಿದ್ದು, ಹಲವಾರು ಬಾರಿ ಎಲ್ಲಾ ಇಲಾಖೆಗಳಿಗೂ ದೂರು ನೀಡಿದ್ದರೂ ಇದುವರೆಗೂ ಯಾವ ಪ್ರಯೋಜನವಾಗಿರುವುದಿಲ್ಲ.

ಮಳೆಗಾಲ ಪ್ರಾರಂಭವಾಗುತ್ತಿದ್ದು ನಮ್ಮಗಳಿಗೆ ವಾಸ ಮಾಡಲು ಮನೆ ಇರುವುದಿಲ್ಲ. ಬದುಕಲು ಕಷ್ಟವಾಗಿದ್ದು ನಮಗೆ ದಯಾಮರಣ ನೀಡಬೇಕಾಗಿರುವ ಕೋರಿದರು.

ಶಿವಯೋಗಿಪುರ ಗ್ರಾಮ, ಗ್ರಾಮ ಠಾಣಾ ಜಾಗದಲ್ಲಿ ಸುಮಾರು ೨೫ ವರ್ಷಗಳಿಂದ ವಾಸವಿದ್ದು, ೨೦೨೨ನೇ ಇಸವಿಯಲ್ಲಿ ಮಳೆ ಅರೆದೃಷ್ಟಿಯಿಂದ ಮನೆ ಕುಸಿದು ಬಿದ್ದ ನಂತರ ಸರ್ಕಾರದ ಅನುದಾನದಲ್ಲಿ ಪುನರ್ ನಿರ್ಮಿಸಲು ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ಬೇಲೂರು ತಾಲ್ಲೂಕು ಪಂಚಾಯಿತಿಯ ಅನುಮೋದನೆ ಪಡೆದು ಮನೆ ನಿರ್ಮಾಣದ ಕಾಮಗಾರಿಯನ್ನು ಪ್ರಾರಂಬಿಸಿದ್ದು, ಕಾನೂನು ವಿರುದ್ದ ಮತ್ತು ದುರುದ್ದೇಶದಿಂದ ಕೆಲ ವ್ಯಕ್ತಿಗಳಾದ ರೌಡಿಶೀಟರ್ ತಿರುಮಲಹಳ್ಳಿ ಶಿವಕುಮಾರು, ತಿರುಮಲನಹಳ್ಳಿ ಹರೀಶ್ ಹಾಗೂ ಗ್ರಾಮದ ವ್ಯಕ್ತಿಗಳಾದ ಮಲ್ಲಿಕಾರ್ಜುನ, ಕುಸುಮ, ಸಿದ್ದಯ್ಯ, ಯಶೋದಮ್ಮ, ಶಶಿಕಲಾ, ಸಾವಿತ್ರಮ್ಮ.೮)ಶಿವಶಂಕರ, ಸುಜಾತ ಈ ವ್ಯಕ್ತಿಗಳು ದುರುದ್ದೇಶದಿಂದ ನಮಗೆ ಅಡ್ಡಿ ಉಂಟು ಮಾಡಲು ಅಂಬೇಡ್ಕರ್‌ರವರ ಪೋಟೋ ಮತ್ತು ಫ್ಲೆಕ್ಸ್ ಅನ್ನು ಇಟ್ಟಿರುತ್ತಾರೆ ಎಂದು ದೂರಿದರು.

ಮನೆಯ ಅಡಿಪಾಯ ಒಳಬಾಗದಲ್ಲಿ ತಂದು ಇರಿಸಿ ಸಾರ್ವಜನಿಕವಾಗಿ ಗಲಾಟೆ ಮತ್ತು ಶಾಂತಿ ಕದಡುವ ಉದ್ದೇಶದಿಂದ ಈ ರೀತಿಯಲ್ಲಿ ನಡೆಸಿದ್ದು, ಹಾಗೂ ನ್ಯಾಯಾಲಯದ ಆದೇಶ ಉಲ್ಲಂಘಸಿ ಅಡಿಪಾಯವನ್ನು ದ್ವಂಸ ಮಾಡಿರುತ್ತಾರೆ.

ಹಳೇಬೀಡು ಪೊಲೀಸು ಠಾಣೆಗೆ ಖುದ್ದಾಗಿ ದೂರು ನೀಡಿದ್ದು, ಎಫ್.ಐ.ಆರ್. ದಾಖಲಾಗಿರುತ್ತಿಸಿದ್ದಾರೆ. ಆದರೂ ರೌಡಿಷೀಟರ್ ಶಿವಕುಮಾರ ಮತ್ತು ಆತನ ಸಹಚರರು ಸೇರಿಕೊಂಡು ಮನೆ ನಿರ್ಮಾಣ ಮಾಡದಂತೆ ಹಾಗೂ ಕೊಲೆ ಬೆದರಿಕೆ ಹಾಕಿ ನಮ್ಮ ಕುಟುಂಬಕ್ಕೆ ಜೀವ ಬೆದಕರಿಕೆಯಿದ್ದು, ಈ ಕಾರಣದಿಂದ ನಾವುಗಳು ತಮ್ಮ ಕಛೇರಿಗೆ ಬಂದು ಅರ್ಜಿ ನೀಡಿರುತ್ತೇವೆ ಎಂದು ಹೇಳಿದರು.

ಇನ್ನು ಕೆಲ ದಿನಗಳಲ್ಲೆ ಮಳೆಗಾಲ ಆರಂಭವಾಗುತ್ತಿದ್ದು, ನಮಗೆ ವಾಸ ಮಾಡಲು ಯಾವುದೇ ಮನೆ ಇಲ್ಲ ಸಣ್ಣದೊಂದು ಗುಡಿಸಲಿಲ್ಲ ಎರಡು ಹೆಣ್ಣು ಮಕ್ಕಳೊಂದಿಗೆ ವಾಸವಾಗಿದ್ದೇವೆ. ನಾವು ಬದುಕಲು ಕಷ್ಟವಾಗಿರುವುದರಿಂದ ನಾವು ಬದುಕುವುದೇ ಬೇಡ ಎಂದು ತೀರ್ಮಾನ ಮಾಡಲಾಗಿದ್ದು, ನಮ್ಮ ಕುಟುಂಬ ಸಮೇತ ನಮಗೆ ದಯಾ ಮರಣ ನೀಡಬೇಕಾಗಿ ಮನವಿ ಮಾಡಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *