
ಜಾನಪದ ಕಲೆಗಳು ಅನೇಕ ಕಲೆಗಳ ತಾಯಿಬೇರು ಇದ್ದಂತೆ.ಹೀಗಾಗಿ ಜಾನಪದಕಲೆಗಳೆಂದರೆ ಜನರಿಗೆ ಈಗಲೂ ಅಚ್ಚುಮೆಚ್ಚು.
ಇಂದಿನ ದೂರದರ್ಶನ ಸಿನಿಮಾ ಮಾಧ್ಯಮಗಳ ಪರಿಕಲ್ಪನೆಗೆ ಈ ಜಾನಪದ ಕಲೆ ಅಡಿಪಾಯ ಹಾಕಿತು ಎಂದರೆ ತಪ್ಪಾಗುವುದಿಲ್ಲ. ಅಂತಹ ಹೆಗ್ಗಳಿಕೆಯಲ್ಲಿ ಮೊದಲ ಸ್ಥಾನದಲ್ಲಿ ತೊಗಲು ಗೊಂಬೆಯಾಟ ನಿಲ್ಲುತ್ತದೆ.
ಇಂದಿನ ಪೀಳಿಗೆಗೆ ತೊಗಲು ಗೊಂಬೆ ಆಟದ ಬಗ್ಗೆ ಗೊತ್ತಿಲ್ಲ.ಅಪರೂಪದ ಜಾನಪದ ಕಲೆಯಾಗಿರುವ ತೊಗಲುಗೊಂಬೆ ಆಟ ಇಂದು ಮೂಲೆಗುಂಪಾಗುವತ್ತ ಸಾಗಿದೆ.ನೋಡುಗರ ಮನಸೆಳೆಯುವ ಆಟ
ತೊಗಲು ಗೊಂಬೆ ಎಂದರೇನು :?? ಪರದೆಯ ಹಿಂದೆ ಕುಳಿತು ತಾಳ ಮೇಳಗಳೊಂದಿಗೆ ತೊಗಲುಗೊಂಬೆಗಳನ್ನು ಕೈಬೆರಳಿಂದಲೇ ಕುಣಿಸುತ್ತಾ ಒಂದು ಕಥೆಯನ್ನು ಅಥವಾ ಪ್ರಸಂಗವನ್ನು ಮನಮುಟ್ಟುವಂತೆ ಹೇಳುವ ಕಲೆಯೇ ಕ ತೊಗಲುಗೊಂಬೆ ಆಟ.
ಮನರಂಜನೆಯ ಮಾಧ್ಯಮಗಳು ಇಲ್ಲದ ಸಂದರ್ಭದಲ್ಲಿ ಜನರಿಗೆ ಮನರಂಜನೆಯ ಜೊತೆಗೆ ಪೌರಾಣಿಕ ನೀತಿ ಕಥೆಗಳನ್ನು ಮನಮುಟ್ಟುವಂತೆ ತಲುಪಿಸುತ್ತಿದ್ದ ಕಲಾ ವೇದಿಕೆಯಾಗಿತ್ತು.ತೊಗಲು ಗೊಂಬೆ ಆಟ ನಶಿಸಿದ್ದಕ್ಕೆ ದೂರದರ್ಶನಗಳು ಜನ್ಮತಾಳಿದ್ದು.
ಹೌದು ಹಿಂದೆ ತೊಗಲುಗೊಂಬೆ ಆಟ ಎಂದರೆ ಇಡೀ ಗ್ರಾಮದ ಜನರು ಅಕ್ಕಪಕ್ಕದ ಗ್ರಾಮಸ್ಥರು ಹಾಗೂ ಮಕ್ಕಳು ಪರದೆಯ ಮುಂದೆ ಕುಳಿತು ನೋಡುವಂತಹ ಆಟ. ಆದರೆ ತಂತ್ರಜ್ಞಾನ ಬದಲಾವಣೆಯೊಂದಿಗೆ ಈಗಿನ ಇಂದಿನ ತೊಗಲು ಗೊಂಬೆ ಆಟ ನಶಿಸಿ ಹೋಗಿ ದೂರದರ್ಶನ ಸಿನಿಮಾ ಮಾಧ್ಯಮ ಜನ್ಮತಾಳಲು ಕಾರಣವಾಗಿರಬಹುದು.
ಹೀಗಾಗಿ ತೊಗಲುಗೊಂಬೆಯಾಟ ಅನೇಕ ಜನಪದ ಕಲೆಗಳ ತಾಯಿ ಬೇರೆ ಎಂದು ಬಣ್ಣಿಸುತ್ತಾರೆ.ಐತಿಹಾಸಿಕ ಕಥೆಗಳ ಪಾತ್ರಗಳನ್ನು ಚರ್ಮದಿಂದ ತಯಾರಿಸಿದ ಗೊಂಬೆಗಳ ಮೂಲಕ ತಾಳಮದ್ದಳೆ ಮೇಳದೊಂದಿಗೆ ನಿರೂಪಿಸುತ್ತಾರೆ.
ನೋಡುಗರ ಮನ ಸೆಳೆಯುವ ಆಟ : ತೊಗಲುಗೊಂಬೆಯಾಟ ನೋಡುತ್ತಿದ್ದರೆ ನಮ್ಮ ಕಣ್ಣು ಮುಂದೆ ಆ ಸನ್ನಿವೇಶದ ನಡೆಯುತ್ತಿದೆಯೇನೋ ಎಂಬ ಭಾವನೆ ಬರುತ್ತದೆ ರಾಮಾಯಣ ಮಹಾಭಾರತದ ಕಥಾ ಸನ್ನಿವೇಶಗಳನ್ನು ತೊಗಲುಗೊಂಬೆಯಾಟದಲ್ಲಿ ಮನಮುಟ್ಟುವಂತೆ ನಿರೂಪಿಸಲಾಗುತ್ತದೆ.
ಹಿಂದೆ ಮಳೆಯಾಗದ ಸಂದರ್ಭದಲ್ಲಿ ತೊಗಲುಗೊಂಬೆ ಆಟ ಆಡಿಸಿದರೆ ಮಳೆ ಬರುತ್ತದೆ ಎಂಬ ನಂಬಿಕೆ ಇತ್ತು. ಹೀಗಾಗಿ ಗ್ರಾಮೀಣ ಪ್ರದೇಶದಲ್ಲಿ ತೊಗಲುಗೊಂಬೆ ಆಟ ಆಡಿಸುವ ಪರಂಪರೆ ಬೆಳೆದು ಬಂದಿದೆ. ಈಗಲೂ ಮಳೆಯಾಗದೆ ಇದ್ದರೂ ಗ್ರಾಮೀಣ ಪ್ರದೇಶದಲ್ಲಿ ತೊಗಲುಗೊಂಬೆ ಆಟ ಆಡಿಸುತ್ತಾರೆ. ಆದರೆ ಇತ್ತೀಚಿಗೆ ತೊಗಲುಗೊಂಬೆ ಕಲಾವಿದರು ಸಿಗುವುದು ಅತಿವಿರಳ ಎಂಬಂತಾಗಿದೆ. ಸಾಂಪ್ರದಾಯಿಕ ಕಲೆಯಾದ ಜನಪದ ಶ್ರೀಮಂತಿಕೆಯ ತೊಗಲುಗೊಂಬೆಯಾಟ ಕಲೆಯನ್ನು ಉಳಿಸಬೇಕಿದೆ.
ಇಂದಿನ ಪೀಳಿಗೆಗೆ ತೊಗಲುಗೊಂಬೆ ಆಟದ ಕಲೆಯ ಕಲಿಕಾ ಶಿಬಿರಗಳನ್ನು ಆಯೋಜಿಸುವ ಮೂಲಕ ಮುಂದಿನ ಪೀಳಿಗೆಗೆ ಉಳಿಸಬೇಕು ಎನ್ನುತ್ತಾರೆ ತೊಗಲುಗೊಂಬೆಯಾಟದ ಕಲಾವಿದರು.
ಹಾಸನ ಜಿಲ್ಲೆಯಲ್ಲಿರುವ ಹಾಗೂ ಬೇರೆ ಕಡೆ ಬೆರಳೆಣಿಕೆಯಷ್ಟು ಇರುವ ತೊಗಲುಗೊಂಬೆ ಕಲಾವಿದರು ದೇಶ ಮಾತ್ರವಲ್ಲದೆ ಕಡಲಾಚೆಗೂ ತೆರಳಿ ತೊಗಲುಗೊಂಬೆಯಾಟದ ಪ್ರದರ್ಶನಗಳನ್ನು ನೀಡಿರುವುದು ಈ ಕಲೆಯ ಹೆಗ್ಗಾಳಿಕೆಯಾಗಿದೆ. ತೊಗಲುಗೊಂಬೆಯಾಟವನ್ನು ಬಯಲು ನಾಟಕದ ಮೂಲಕ ಪ್ರದರ್ಶಿಸುತ್ತಿರುವ ಕಲಾವಿದರು
ಹೌದು ಈಗ ತೊಗಲು ಗೊಂಬೆ ಆಟ ಸಂಪೂರ್ಣ ನಶಿಸಿಹೋಗಿದ್ದು ಮಾಡುವರ ಸಂಖ್ಯೆಯು ವಿರಳವಾಗಿದೆ ಹಾಗಾಗಿ ದೃಶ್ಯಮಾಧ್ಯಮಗಳು ತಾಂಡವಾಡುತ್ತಿದೆ.ಹಾಗಾಗಿ ಈಗಲೂ ಸಹ ಕಲಾತಂಡಗಳು ಆರೋಗ್ಯ ಮೇಳ ಬಯಲು ನಾಟಕ ಮತ್ತು ಜನರಿಗೆ ಜನಜಾಗೃತಿ ಮೂಡುವಂತಹ ಕೆಲಸಕ್ಕೆ ಮುಂದಾಗಿದ್ದು ಬೇರೆಯವರಿಗೂ ಕೂಡ ಕಲಿಸಿ ಕೊಡುವಂತಹ ಕೆಲಸವನ್ನು ಮಾಡುತ್ತಿದ್ದಾರೆ.
ವರದಿ :ಪ್ರದೀಪ್ ಗೇಕರವಳ್ಳಿ ಆಲೂರು




