
ಹಾಸನ: ಕಟ್ಟಾಯದ ಬಳಿ ಕಾಂಗ್ರೆಸ್ ಅಭ್ಯರ್ಥಿ ಎದುರು ಪ್ರಜ್ವಲ್ ರೇವಣ್ಣರವರ ದೌರ್ಜನ್ಯ ತುಳಿಯಬೇಕು ಎಂದು ಭಾಷಣ ಮಾಡಿದ ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ. ಶಿವಲಿಂಗೇಗೌಡ ವಿರುದ್ಧ ಕೆಂಡಮಂಡಲವಾಗಿದಲ್ಲದೇ ಪ್ರಜ್ವಲ್ ರೇವಣ್ಣರವರನ್ನ ಗೆಲ್ಲಿಸಿಕೊಂಡು ಬರುವಂತೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಕರೆ ನೀಡಿದರು.
ಇನ್ನು ಮೊದಲ ಬಾರಿಗೆ ಜೆಡಿಎಸ್ ಪಕ್ಷದ ಸಭೆಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ್ರ ಹಾಗೂ ಬಿಜೆಪಿ ಜಿಲ್ಲೆಯ ಬಿಜೆಪಿ ಮುಖಂಡರ ಪೋಟೊವನ್ನು ಪ್ಲೆಕ್ಸ್ ನಲ್ಲಿ ಹಾಕಿರುವುದು ನೋಡಿದ್ರೆ ಬಿಜೆಪಿ ಜೊತೆ ಜೆಡಿಎಸ್ ಸಹಾಯಸ್ತ ಚಾಚಿದ್ರಾ ಎಂಬುದು ಕಂಡು ಬಂದಿತು.
ನಗರದ ಬಿ.ಎಂ. ರಸ್ತೆ ಬಳಿ ಇರುವ ಜ್ಞಾನಾಕ್ಷಿ ಕಲ್ಯಾಣ ಮಂಟಪದಲ್ಲಿ ಎಸ್.ಸಿ. ಮತ್ತು ಎಸ್.ಟಿ. ಘಟಕದ ಸಭೆಯಲ್ಲಿ ಮೊದಲು ಅಂಬೇಡ್ಕರ್ ಬಾವಚಿತ್ರಕ್ಕೆ ಪುಷ್ಫಾರ್ಚನೆ ನೆರವೇರಿಸಿ ನಂತರ ಜ್ಯೋತಿ ಬೆಳಗಿ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರಿ ಹುದ್ದೆಯಲ್ಲಿ ಇರುವ ಪರಿಶಿಷ್ಟ ಸಮುದಾಯದವರು ಕೈ ಎತ್ತುವಂತೆ ಸಭೆಯಲ್ಲಿ ದೇವೇಗೌಡರು ಕೋರಿದಾಗ ಕೇವಲ ನಾಲ್ಕು ಐದು ಜನ ಮಾತ್ರ ಕೈ ಎತ್ತಿದರು.
ಅಂಬೇಡ್ಕರ್ ಹೆಸರನ್ನು ಎಲ್ಲಾ ಹೇಳುತ್ತಾರೆ. ಅವರನ್ನು ಲೋಕಸಭೆಗೆ ಗೆಲ್ಲಲು ಬಿಡನೆ ಇಲ್ಲ. ಅಂಬೇಡ್ಕರ್ ಅವರು ಲೊಕಸಭೆ ಒಳಗಡೆ ಕಾಲನ್ನು ಹಾಕಲಿಲ್ಲ. ಇದು ಅಂಬೇಡ್ಕರ್ ಅವರಿಗೆ ಸಲ್ಲಿಸಿದ ಗೌರವನಾ! ಕೊನೆಗೆ ಅಂಬೇಡ್ಕರ್ ಬೇಸತ್ತು ಬೌದ್ದ ಧರ್ಮಕ್ಕೆ ಸೇರಿದರು. ನಾನಯ ಒಬ್ಬ ಬಡವನ ಮಗ. ನನ್ನ ಜೀವನದಲ್ಲಿ ಯಾವುದೇ ಆಸೆ ಇಟ್ಟುಕೊಂಡಿಲ್ಲ ಬರುವಾಗ ಬರಿ ಕೈ ಬಂದು ಹೋಗುವಾಗಲು ಬರಿ ಕೈಯಲ್ಲಿ ಹೋಗುತ್ತೇನೆ. ನಾನು ಬದುಕಿದ್ದೆನೆ. ಈ ಸಾರಿ ಅರಸೀಕೆರೆ ತಾಲ್ಲೂಕಿನಲ್ಲಿ ಸಂತೋಷ್ ಅವರು ಶಾಸಕನ್ನಾಗುವುದನ್ನು ನಾನು ಕಣ್ಣನಿಂದ ನೊಡುತ್ತೆನೆ. ನಾನೆ ಅರಸೀಕೆರೆಗೆ ಬರುವುದಾಗಿ ಶತಸಿದ್ದ ಎಂದು ಹೇಳಿದರು.
ನೆನ್ನೆ ಗೊರೂರು ಕಟ್ಟಾಯದ ಹತ್ತಿರ ಕಾಂಗ್ರೆಸ್ ಅಭ್ಯರ್ಥಿ ನಿಲ್ಲಿಸಿ ಪ್ರಜ್ವಲ್ ರೇವಣ್ಣನವರ ದೌರ್ಜನ್ಯ ತುಳಿಯಬೇಕು ಎಂದು ಭಾಷಣ ಮಾಡಿದ ಅರಸೀಕೆರೆ ಶಾಸಕರು ಮಾತನಾಡಿರುವುದನ್ನು ನೋಡಿದ್ದೆನೆ. ನನ್ನ ತಾಲ್ಲೂಕಿನ ಒಬ್ಬರು ರಾಜ್ಯಸಭೆಯ ಸದಸ್ಯನನ್ನು ಮಾಡಿದ್ದೆ ಅತನನ್ನು ಅಲ್ಲಿ ನೋಡಿದ್ದೆನೆ.
ಅರಸೀಕೆರೆ ಮಹಾನ್ ನಾಯಕನ ಮಾತನ್ನು ಗಮನಿಸಿದ್ದೆನೆ. ಜ್ಞಾಪಕಾರ್ಥವಾಗಿ ಇಟ್ಟುಕೊಳ್ಳಿ. ಈ ಬಾರಿ ಮಾಂಸ ತಿನ್ನುವರೆ, ತಿನ್ನದೆ ಇರುವರು ಎಂದು ಅರಸೀಕೆರೆ ತಾಲ್ಲೂಕಿನಲ್ಲಿ ಚುನಾವಣೆ ನಡೆದಿದೆ, ರೇವಣ್ಣರ ಬೆನ್ನಿಗೆ ಕಟ್ಟುಕೊಂಡು ತಿರುಗಿದ, ಈಗ ಅವನ ತಲೆಗೆ ಬಂದಿದೆ ಎಂದು ಪರೋಕ್ಷವಾಗಿ ಶಿವಲಿಂಗೇಗೌಡ ವಿರುದ್ಧ ಕಿಡಿಕಾರಿದರು.
ಆಂಧ್ರಪ್ರದೇಶದ ಸಂಜಿವಯ್ಯನನ್ನು ೬ ತಿಂಗಳು ಸಹಿಸಿದ ಕಾಂಗ್ರೆಸ್ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಾಂಗ್ರೆಸ್ ಪ್ರಧಾನಿ ಮಾಡುತ್ತಾರೋ ಮಾರ್ಮಿಕವಾಗು ನುಡಿದರು. ಸಿದ್ದರಾಮಯ್ಯ ಖರ್ಗೆ ಪ್ರಧಾನಿ ಮಾಡುತ್ತಾರೊ ಸಿದ್ದರಾಮಯ್ಯ ಯಾವ ಯಾವ ಸಂದರ್ಭದಲ್ಲಿ ಎನೆನೂ ಮಾಡಿದ್ದಿರಿ. ದೆಹಲಿಯಿಂದ ಬಂದ ಗುಲಾಂ ನಬಿ ಅಜಾದ್ ಗೆ ನನ್ನ ಮಗ ಬೇಡ ಖರ್ಗೆ ಮುಖ್ಯಮಂತ್ರಿ ಮಾಡಲು ಹೇಳಿದ್ದೆ ಆಗೇ ಕುಮಾರಸ್ವಾಮಿ ಬೇಡ ಅಂತ ಕೂಡ ಹೇಳಿದ್ದೆ. ಹೈಕಮಾಂಡ್ ಆದೇಶ ಎಂದು ಹೇಳಿದರು.
ನಾನು ರಾತ್ರಿ ಪೂರ್ತಿ ಖರ್ಗೆ ನೋಡಲು ಹೋದರೆ ರಾಜ್ಯ ಕಾಂಗ್ರೆಸ್ ನಾಯಕರು ಒಪ್ಪಲಿಲ್ಲ ಎಂದು ಬೇಸರವ್ಯಕ್ತಪಡಿಸಿದರು. ಸಿದ್ದರಾಮಯ್ಯ ಅವರು ೧೮ ಜನ ಶಾಸಕರನ್ನು ಬಾಂಬೆಗೆ ಕಳುಹಿಸಿ ನನ್ನ ಮಗನನ್ನು ಮುಖ್ಯಮಂತ್ರಿ ಹುದ್ದೆಯಿಂದ ತೆಗೆದರು. ಇದರ ಬಗ್ಗೆ ಸಿದ್ದರಾಮಯ್ಯ ಹೇಳುತ್ತಾರಾ ಎಂದರು.
ನಾನು ಲೊಕಪಯೋಗಿ ಸಚಿವನ್ನಾಗಿದ್ದಾಗ ೧೮ ಪರ್ಸೇಂಟ್ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಬ್ಯಾಕ್ ಲಾಗ್ ಹುದ್ದೆ ಕೊಟಾ ಭರ್ತಿ ಮಾಡಿದ್ದೆನು. ಬ್ಯಾಕಲಾಗ್ ಹುದ್ದೆಯ ಕೋಟಾವನ್ನು ೨೩ ಪಸೇಂಟ್ ಗೆ ಎರಿಸಿದ್ದು ನಾನು. ಈ ಕಾನೂನು ಮಾಡಿದ್ದು ನಿಮ್ಮ ಮುಂದೆ ಕುಳಿತಿರುವ ದೇವೇಗೌಡರು ಎಂದು ಹೇಳಿದರು.
ಇದು ಲೋಕಾಪಯೋಗಿ ಇಲಾಖೆಗೆ ನೀಡುವುದಿಲ್ಲ. ಎಲ್ಲಾ ಇಲಾಖೆಗೆ ಮಾಡಬೇಕಾಗುತ್ತದೆ. ನೀವು ಗಂಡಾಂತರ ಮಾಡಿಕೊಳ್ಳುತ್ತಿದ್ದಿರಿ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಹೇಳಿದರು. ಐ ಡೊಂಟ್ ಕೆರ್ ಎಂದೆ ಮಾತನಾಡಿದರು. ಎತ್ತಿನಹೊಳೆ ನೀರು ಅರಸೀಕೆರೆಗೆ ಹೋಗಿದ್ದು ೮ ಸಾವಿರ ಕೋಟಿ ಯೋಜನೆ. ಈಗ ೨೩ ಸಾವಿರ ಕೋಟಿಯಾಗಿದೆ ಎಂದರು.ಈಗ ದಿಮಾಕಿನಿಂದ ಕಾರಿನಲ್ಲಿ ಒಡಾಡುತ್ತೊದ್ದಾರೆ.
ದಿಮಾಕಿನ ಗರ್ವ ಪ್ರಜ್ವಲ್ ಉಳಿಸಲು ಒಡಾಡುತ್ತಿದೆ. ನಾನು ತುಂಬಾ ಮಾತನಾಡುತ್ತೇನೆ. ಬರಿ ಮಂಡಿನೊವು ಮಾತ್ರ. ತಲೆಯಲ್ಲಿ ನೋವು ಇಲ್ಲ. ಕಾವೇರಿ ನದಿ ನೀರು ಉಳಿಸಲು ಈ ವಯಸ್ಸಿನಲ್ಲಿ ಬೆಳಿಗ್ಗೆ ೬ ಗಂಟೆಗೆ ದೆಹಲಿಗೆ ಹೋಗಿ ವಕೀಲರನ್ಮು ಭೇಟಿ ಮಾಡಿ ಬಂದಿದೆ ಎಂದರು. ನಾನು ಈ ಚುನಾವಣೆಯಲ್ಲಿ ಮಂಡ್ಯ ಚುನಾವಣೆಯಲ್ಲಿ ಮಂಡ್ಯ. ಕೊಲಾರ ಬೆಂಗಳೂರು ಗ್ರಾಮಾಂತರ. ಉಳಿದ ೨೪ ಕ್ಷೇತ್ರದಲ್ಲಿ ಭಾರತೀಯ ಜನತಾ ಪಾರ್ಟಿ ಎಲ್ಲಿ ನಿಂತಿದ್ದೆಯೊ ಶೋಭಾ ಕರಂದಾಜ್ಲೆ ತುಮಕೂರು ಸೋಮಣ್ಣ. ಯಡಿಯೂರಪ್ಪನ ಮಗ ರಾಘವೇಂದ್ರ ಸೇರಿದಂತೆ ಎಲ್ಲಾ ಕಡೆಯೂ ಹೊಗಿ ೨೮ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ನಾನು ಚುನಾವಣೆ ಪ್ರಚಾರ ನಡೆಸಿ ಹೋರಾಟ ಮಾಡುವುದಾಗಿ ಇದೆ ವೇಳೆ ತಿಳಿಸಿದ್ದರು.
೧೫೦ ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ ಆರ್ಥಿಕ ಶಕ್ತಿ ೩ ನೇ ಸ್ಥಾನಕ್ಕೆ ತರುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿದರು. ಖರ್ಗೆ ಪ್ರಧಾನಿಯಾಗಲು ಮಮತಾ ಬ್ಯಾನರ್ಜಿಯವರು ಹೇಳಿದ್ದರೆ ಸಿದ್ದರಾಮಯ್ಯ ವಿರೋಧಿಸುತ್ತಾರೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದ ಕಳೆದುಕೊಂಡು ಜೆಡಿಎಸ್- ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿ. ಮುಖ್ಯಮಂತ್ರಿ ಯಾರಾಗುತ್ತಾರೆ ಅದು ಬೇಡ ಎಂದರು.
ಅರಸೀಕೆರೆ ಕ್ಷೇತ್ರದ ಶಾಸಕ ಗೃಹಮಂಡಳಿ ಅಧ್ಯಕ್ಷ ನಿಮಗೆ ಎಲ್ಲಾ ಮನೆ ಕಟ್ಟಿಸುಕೊಡುತ್ತಾರೆ. ದಲಿತರನ್ನು ಕೈ ಬಿಡುವುದಿಲ್ಲ ದಯಮಾಡಿ ಅಪಪ್ರಚಾರಕ್ಕೆ ಬಲಿಯಾಗ ಬೇಡಿ ಎಂದು ವಿನಂತಿಸಿಕೊಂಡರು.
ನನ್ನ ಜಿಲ್ಲೆಯ ಎಲ್ಲಾ ಮುಖಂಡರನ್ನು ಕೂರಿಸಿ ನನ್ನ ಆರೋಗ್ಯ ಕೆಡುತ್ತಿದೆ. ಯಾರದರು ಲೋಕಸಭೆ ಚುನಾವಣೆಗೆ ನಿಲ್ಲಿಸಿ ಎಂದು ಕೇಳಿದ್ದೆ ಆ ಸಮಯದಲ್ಲಿ ಯಾರು ಒಪ್ಪಲಿಲ್ಲ. ಆಗ ಪ್ರಜ್ವಲ್ ರೇವಣ್ಣ ಅಭ್ಯರ್ಥಿಯಾದ ಎಂದು ಮಾತನಾಡಿದರು.
ಮಾಜಿ ಸಚಿವರಾದ ಎಚ್.ಡಿ. ರೇವಣ್ಣ ಮಾತನಾಡಿ, ಹಾಸಸ ಜಿಲ್ಲೆಯಲ್ಲಿ ನಾವು ಅಧಿಕಾರದಲ್ಲಿ ಇದ್ದ ಸಂದರ್ಭದಲ್ಲಿ ಬೋರವೆಲ್ ಕೊರೆಸಿದರು. ಅವುಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಕಾಂಗ್ರೆಸ್ ಪಕ್ಷದ ಕೈಯಲ್ಲಿ ಆಗಿಲ್ಲ. ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಗೆ ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣ ಮಾಡಿಕೊಟ್ಟಿದ್ದೆನೆ. ಕಾಂಗ್ರೆಸ್ ಸರ್ಕಾರ ಅಂಬೇಡ್ಕರ್ ಸಮುದಾಯಭವನ ನಿರ್ಮಾಣ ಮಾಡಲು ಒಂದು ರುಪಾಯಿ ಕೊಟ್ಟಿಲ್ಲ ಎಂದು ಆರೋಪಿಸಿದರು.
ಮೀಸಲಾತಿ ಇಲ್ಲದ ಸಮಯದಲ್ಲಿ ಬಾಲಕೃಷ್ಣ ಮೂರ್ತಿಯವರನ್ನು ಜಿಪಂ ಅಧ್ಯಕ್ಷರಾಗಿ ಮಾಡಿದ್ದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು. ದೇವೇಗೌಡರು ಮುಖ್ಯಮಂತ್ರಿ ಆಗಿದ್ದ ಸಮಯದಲ್ಲಿ ಪುರಸಭೆ ನಗರಸಭೆ ಗ್ರಾಮ ಪಂಚಾಯತಿ ಜಿಲ್ಲಾ ಪಂಚಾಯತಿಗಳಲಿ ಪರಿಶಿಷ್ಟ ಸಮುದಾಯವರಿಗೆ ಮೀಸಲಾತಿ ಕೊಟ್ಟು ಅಧಿಕಾರ ನೀಡಿದ್ದು ಎಚ್.ಡಿ. ದೇವೇಗೌಡರು ಎಂದರು.
ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ, ಸಭೆಯ ಕೇಂದ್ರ ಬಿಂದುಗಳು ನಮ್ಮ ಪರಿಶಿಷ್ಟ ಸಮುದಾಯದವರು. ಪರಿಶಿಷ್ಟ ಸಮುದಾಯದ ವರ್ಗ ಅಧಿಕಾರ ನೀಡಿರುವುದಕ್ಕೆ ಸಾಕ್ಷಿ ಈ ವೇದಿಕೆಯಲ್ಲಿ ಕುಳಿತಿರುವ ಮುಖಂಡರು. ಮೊನ್ನೆ ನಡೆದ ಕಾಂಗ್ರೆಸ್ ದಲಿತ ಸಭೆಯಲ್ಲಿ ಸಂಘಟನೆ ಸಭೆ ಮಾಡಲು ಹೋಗಿ ಕಾಂಗ್ರೆಸ್ ಸಭೆ ನಡೆಸಿದ್ದಾರೆ. ಸ್ವಾತಂತ್ರ್ಯ ಸಿಕ್ಕಿ ೭೬ ವರ್ಷವಾದರು ದಲಿತ ನಾಯಕರನ್ನು ಬೆಳೆಸದ ಕಾಂಗ್ರೆಸ್ ಪ್ರತಿ ಚುನಾವಣೆಯಲ್ಲಿ ಅವರ ಮತ ಮಾತ್ರ ಪಡೆಯುತ್ತಿದೆ. ಅಂಗಂಡಿಹಳ್ಳಿ ೧೫೦ ಜನ ಸಮುದಾಯ ಇರುವ ಸಂಗಿತಾ ಎನ್ನುವ ಮಹಿಳೆಯಗೆ ತಾಪಂ ಸದಸ್ಯ ಸ್ಥಾನ ನೀಡುವ ಮೂಲಕ ಸಣ್ಣಪುಟ್ಟ ಸಮುದಾಯ ಗುರುತಿಸುವ ಕೆಲಸ ಜೆಡಿಎಸ್ ಪಕ್ಷ ಮಾಡಿದೆ. ನಾನು ನನ್ನ ಜೀವನದಲ್ಲಿ ದಲಿತ ಸಮುದಾಯ ಮರೆಯದೆ ಅಂಬೇಡ್ಕರ್ ಬರೆದ ಸಂವಿಧಾನದ ಗೌರವ ಹೆಚ್ಚಿಸುವ ಕೆಲಸ ಮಾಡುವುದಾಗಿ ಹೇಳಿದರು.
ಮುಂದಿನ ದಿನಗಳಲ್ಲಿ ಪರಿಶಿಷ್ಟ ಸಮುದಾಯವರ ಜೊತೆ ಅಣ್ಣತಮ್ಮಂದಿರಂತೆ ಜೊತೆಯಾಗಿ ಅವರಿಗೆ ರಾಜಕೀಯ ಶಕ್ತಿ ಹಾಗೂ ಆರ್ಥಿಕ ಶಕ್ತಿ ತುಂಬುವುದಾಗಿ ಭರವಸೆ ನೀಡಿದರು.
ಮಾಜಿ ಸಚಿವರಾದ ಎಚ್.ಕೆ. ಕುಮಾರಸ್ವಾಮಿ ಮಾತನಾಡಿ, ಜೆಡಿಎಸ್ ಪಕ್ಷ ಅಧಿಕಾರದಲ್ಲಿ ಇರಲಿ ಇಲ್ಲದೆ ಹೊಗಲಿ ದಲಿತ ಸಮುದಾಯದ ಜನರ ಹಿತ ಕಾಪಾಡಿದ್ದೆವೆ. ಕಾಂಗ್ರೆಸ್ ಪಕ್ಷ ಮಾತ್ರ ದಲಿತ ಚಾಂಪಿಯನ್ ಎಂಬ ಸ್ಲೋಗನ್ ಬರಿ ಬಾಯಿ ಮಾತಲ್ಲಿ ಮಾತ್ರ ಎಂದು ಕುಟುಕಿದರು. ಸ್ವಾತಂತ್ರ್ಯ ಬಂದು ೫೬ ವರ್ಷ ಆಡಳಿತವನ್ನು ಕಾಂಗ್ರೆಸ್ ಆಡಳಿತ ಮಾಡಿದೆ. ಬಿಜೆಪಿ ಜೆಡಿಎಸ್ ಕೆವಲ ೧೮ ವರ್ಷ ಮಾತ್ರ ಆಡಳಿತ ನಡೆಸಿದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ನೀರಾವರಿ ಸಚಿವರಾದ ಸಮಯದಲ್ಲಿ ದಲಿತರಲ್ಲಿ ಆರ್ಥಿಕ ಶಕ್ತಿ ತುಂಬುವ ಸಲುವಾಗಿ ದಲಿತರ ಜಮೀನಗಳಿಗೆ ಬೋರವೆಲ್ ಕೊರೆಯಿಸಿಕೊಡುವ ಕೆಲಸ ಮಾಡಿದ್ದರಿಂದ ದಲಿತರು ಶುಂಠಿ ಮತ್ತು ವ್ಯವಸಾಯ ಮಾಡಿ ಆರ್ಥಿಕ ಲಾಭಗಳಿಸಿದ್ದಾರೆ. ದಲಿತರ ಮೂಗಿಗೆ ತುಪ್ಪ ಹಚ್ಚಿ ದಲಿತರಿನ್ನು ಸೆಳೆಯುವ ಕೆಲಸ ಮಾಡುತ್ತಿದೆ ಎಂದು ದೂರಿದರು.
ಕಾಂಗ್ರೆಸ್ ಶಕ್ತಿ ದಲಿತರು ದಲಿತರು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕದೆ ಹೋದರೆ ಕಾಂಗ್ರೆಸ್ ಕೋಮ ಸ್ಠೇಜಿಗೆ ಹೋಗುತ್ತದೆ. ದಲಿತರಿಗೆ ಮಿಸಲಿಟ್ಟ ಹಣವನ್ನು ಗ್ಯಾರಂಟಿ ಯೋಜನಗೆ ಸಿದ್ದರಾಮಯ್ಯ ಬಳಸಿಕೊಂಡು ಹಾಸನ ಜಿಲ್ಲೆಯ ೧೩೪೦ ಕೋಟಿ ನಮ್ಮ ಕೆಲಸಗಳಿಗೆ ಸಿದ್ದರಾಮಯ್ಯ ಪೂಜೆ ಮಾಡಿದ್ದಾರೆ ಎಂದು ಆರೋಪಿಸಿದರು.
ಕೆಲಸ ಮಾಡಿರುವ ಯುವಕ ಸಂಸದ ಪ್ರಜ್ವಲ್ ಗೆ ಮತ ನೀಡುವಂತೆ ಮನವಿ ಮಾಡಿದರು. ಕುಟುಂಬ ರಾಜಕಾರಣ ಆರೋಪ ಮಾಡುವರು ಈಗ ಆ ವಿಚಾರ ಮಾತನಾಡುವುದಿಲ್ಲ. ೨೮ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮಂತ್ರಿ ಮಕ್ಕಳು ಸೊಸೆಯರು ಸೇರಿದಂತೆ ೧೬ ಜನರಿಗೆ ಟಿಕೆಟ್ ನೀಡಿದ್ದಾರೆ. ಇದು ಕುಟುಂಬ ರಾಜಕಾರಣ ಕಾಂಗ್ರೆಸ್ ಚಳುವಳಿ. ಯಾವುದೇ ಕಾರಣಕ್ಕಾಗಿ ಸಂವಿಧಾನದ ತಿದ್ದುಪಡಿ ಬದಲಾವಣೆ ಸಾಧ್ಯವಿಲ್ಲ ಕೆಲವರು ಅಲ್ಲೊಬ್ಬರು ಇಲ್ಲೊಬ್ಬರು ಹೇಳಿಕೆ ನಿಡಬಹುದು ದೇವೇಗೌಡರು ಸಂವಿಧಾನದ ಪರವಾಗಿ ಇದ್ದಾರೆ ಎಂದು ಭರವಸೆ ನೀಡಿದರು.
ಶಾಸಕ ಸಿ.ಎನ್. ಬಾಲಕೃಷ್ಣ ಮಾತನಾಡಿ, ಗ್ರಾಮ ಪಂಚಾಯತಿ. ಪುರಸಭೆ, ನಗರಸಭೆ ಸೇರಿದಂತೆ ದಲಿತ ಸಮುದಾಯದ ನಾಯಕರಿಗೆ ಮಿಸಲಾತಿ ಕೊಟ್ಟಿದ್ದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ರಾಜ್ಯಪಾಲರ ಭಾಷಣ ಸರ್ಕಾರ ಒದಿಸಿದೆ. ೩೪ ಸಾವಿರ ಕೋಟಿ ಹಣ ಪರಿಶಿಷ್ಟ ಜಾತಿಗೆ ಮೀಸಲಿಟ್ಟ ಬಗ್ಗೆ ಸುಳ್ಳು ಭಾಷಣವನ್ನು ರಾಜ್ಯ ಸರ್ಕಾರ ಮಾಡಿದೆ. ಕುಮಾರಸ್ವಾಮಿ ಅವಧಿಯಲ್ಲಿ ಪರಿಶಿಷ್ಟ ಸಮುದಾಯವರಿಗೆ ಬೊರವೆಲ್ ಕೊರೆಸಿದರು ಅದಕ್ಕೆ ವಿದ್ಯುತ್ ಸಂಪರ್ಕ ಒದಗಿಸಲು ಈ ಕಾಂಗ್ರೆಸ್ ಸರ್ಕಾರದ ಕಾಲದಲ್ಲಿ ಆಗಿಲ್ಲ ಎಂದರು.
ದಲಿತರ ಹಣವನ್ನು ರಾಜ್ಯ ಸರ್ಕಾರ ಬೇರೆ ಕಡೆ ಬಳಸಿಕೊಂಡಿದ್ದೆ ಎಂದರು. ಗಂಗಾ ಕಲ್ಯಾಣ ಯೋಜನೆ ಭಾರತ ದೇಶದಲ್ಲಿ ಜಾರಿಗೆ ತಂದಿದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು. ದಲಿತರಿಗೆ ಮಾಡಿರುವ ನಿಗಮಗಳಿಗೆ ಕಡಿಮೆ ಸಂಖ್ಯೆ ಬೊರವೆಲ್ ಮಂಜೂರು ಮಾಡಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಸಭೆಯಲ್ಲಿ ಶಾಸಕ ಹೆಚ್.ಪಿ. ಸ್ವರೂಪ್, ಮಾಜಿ ಶಾಸಕ ಕೆ.ಎಸ್. ಲಿಂಗೇಶ್, ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ, ಜೆಡಿಎಸ್ ಮುಖಂಡರು ಎನ್.ಆರ್. ಸಂತೋಷ್, ಎಸ್.ಸಿ./ಎಸ್.ಟಿ. ರಾಜ್ಯ ಅಧ್ಯಕ್ಷರಾದ ಅನ್ನದಾನಿ, ಮಹದೇವಯ್ಯ, ಚಂಚಲ ಕುಮಾರಸ್ವಾಮಿ, ಲತಾ, ನಗರಸಭೆ ಸದಸ್ಯ ಕ್ರಾಂತಿ ಸಿ. ಪ್ರಸಾದ್ ತ್ಯಾಗಿ, ಮಂಜುನಾಥ್, ಚಂದ್ರಶೇಖರ, ರಾಮಚಂದ್ರ, ಶಿವನಂಜಪ್ಪ, ಶಿವಣ್ಣ, ಶಾರದ, ಪುರೊಷೋತ್ತಮ್, ಮಂಜೇಗೌಡ, ಹೆಚ್.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ನಾಗರಾಜ್, ನಿಟ್ಟೂರು ಸ್ವಾಮಿ, ಜಿಲ್ಲಾ ಪಂಚಾಯತ್ ಜಿ.ಟಿ. ಇಂದ್ರಾ, ಕಾಮಾಕ್ಷಿ, ಗಿರೀಶ್, ಜಿಲ್ಲಾ ಜೆಡಿಎಸ್ ಎಸ್ಸಿ ಘಟಕದ ಅಧ್ಯಕ್ಷ ಕೆ.ಟಿ. ಮಂಜಯ್ಯ, ಮುಖಂಡರಾದ ಮರಿಯಪ್ಪ, ಶಿವನಂಜಪ್ಪ, ಮಂಜುನಾಥ್, ರಾಮಚಂದ್ರ, ಅರುಣ್ ಜಯರಾಂ, ಹೇಮರಾಜ್ ಇತರರು ಉಪಸ್ಥಿತರಿದ್ದರು.



