
ಆಲೂರು: ತಾಲೂಕಿನ ಕೆಂಚಮ್ಮನ ಹೊಸಕೋಟೆ ಹೋಬಳಿ ಹರಿಹಳ್ಳಿ ಗ್ರಾಮದ ಬಳಿ ಬಾಳ್ಳುಪೇಟೆ-ಕೊಡ್ಲಿಪೇಟೆಯ ಹರಿಹಳ್ಳಿ ಯಲ್ಲಿ ರಾಜ್ಯ ಹೆದ್ದಾರಿ 112 ರಲ್ಲಿ ಬಿರು ಬಿಸಿಲಿನಲ್ಲಿ ರಸ್ತೆಗೆ ಉರುಳಿದ ಬೃಹಧಾಕರ ಮರ ಪರಿಣಾಮ ಚಲಿಸುತ್ತಿದ್ದ ಆಲ್ಟೋ 800 ಕಾರ್ ಜಕಂ ಗೊಂಡಿದೆ.
ಕಾರು ಚಾಲಕನಿಗೆ ಗಂಭೀರ ಗಾಯ ಗೊಂಡಿದ್ದು, ಸಮಾಜ ಸೇವಕ ಶೇಖರ್ ಆಟೋ,ಸ್ಥಳೀಯ ಜನಪ್ರತಿನಿಧಿ ಹಾಗೂ ಸ್ಥಳೀಯ ಗ್ರಾಮಸ್ಥರಿಂದ ಮುರಿದು ಬಿದ್ದುದ್ದ ಮರವನ್ನು ತೆರವು ಗೊಳಿಸಿದ್ದಾರೆ.
ಗ್ರಾಮ ಪಂಚಾಯತಿ ಸದಸ್ಯ ಚಂದ್ರಶೇಖರ್ ಮಾತನಾಡಿ ಕಳೆದ ನಾಲ್ಕೈದು ವರ್ಷಗಳಲ್ಲಿ ಇದೇ ರೀತಿ ಟೊಳ್ಳು ಬಿದ್ದ, ಗೆದ್ದಲು ಹಿಡಿದ, ಹಳೆಯ ಕಾಲದ ಮರಗಳು, ವಾಹನಗಳು ಚಲಿಸುವಾಗ ಮುರಿದು ಬಿದ್ದು 3- 4 ಸಾವು ಸಂಭವವಿರ್ಸಿರುವ ಘಟನೆಯು ನಡೆದಿವೆ. ಆದರೂ ಕೂಡ ಎಚ್ಚೆತ್ತುಕೊಳ್ಳದ ಅರಣ್ಯ ಅಧಿಕಾರಿಗಳ ವಿರುದ್ಧ ಸ್ಥಳೀಯರು ಹಾಗೂ ಜನ ಪ್ರತಿನಿಧಿಗಳು, ಹಲವು ಬಾರಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಈ ಬಗ್ಗೆ ದೂರು ನೀಡಿದರು ನಿರ್ಲಕ್ಷ ವಹಿಸಿದ್ದಾರೆ.
ಮುರಿದು ಬೀಳುವಂಥ ಅಪಾಯಕಾರಿ ಮರಗಳನ್ನು ತೆರೆವು ಗೊಳಿಸುವ ಕಾರ್ಯಾಚರಣೆಗೆ ಮುಂದಾಗಿಲ್ಲ, ಇದಕ್ಕೆಲ್ಲ ಅರಣ್ಯ ಇಲಾಖೆ ಅಧಿಕಾರಿಗಳೇ ನೆರ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುರಿದು ಬಿದ್ದ ಮರವನ್ನು ಹರಿಹಳ್ಳಿ ಗ್ರಾಮದ ಸಮಾಜ ಸೇವಕ ಶೇಖರ್ . ಗ್ರಾಮ ಪಂಚಾಯತಿ ಸದಸ್ಯ ಚಂದ್ರಶೇಖರ್ ಹಾಗೂ ಸ್ಥಳೀಯರು ಮರವನ್ನು ತೆರೆವು ಗೊಳಿಸಿ ಗಾಯಗೊಂಡ ಚಾಲಕನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ.



