ತೆಂಕಲಗೂಡು ಬೃಹನ್ಮ ಠದಲ್ಲಿ ಮಾರ್ಚ್ 28ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ.

ಸಕಲೇಶಪುರ:- ತಾಲೂಕು ಯಸಳೂರು ಗ್ರಾಮದ ಶ್ರೀ ತೆಂಕಲಗೂಡು ಬೃಹನ್ಮ ಠದಲ್ಲಿ ಮಾರ್ಚ್ 28 ರಂದು ನೂತನ ಶ್ರೀ ಗುರು ನಿವಾಸದ ಪ್ರವೇಶೋತ್ಸವ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬರವನ್ನು ಏರ್ಪಡಿಸಿಲಾಗಿದ್ದು,ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹಾಗೂ ಮಠದ ಸದ್ಭಕ್ತರು ಆಗಮಿಸಬೇಕೆಂದು ಶ್ರೀ ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಂದು ತೆಂಕಲಗೂಡು ಬೃಹನ್ಮ ಠದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಆರೋಗ್ಯ ಶಿಬಿರದ ಬಗ್ಗೆ ಮಾಹಿತಿ ನೀಡುತ್ತಾ ಈ ಉಚಿತ ತಪಾಸಣೆ ಶಿಬಿರಕ್ಕೆ ಮೈಸೂರಿನ ಅಪೊಲೊ, ಬಿ.ಜಿ.ಎಸ್, ಎಸ್.ಎಸ್.ಎಂ. ಆಸ್ಪತ್ರೆ, ಹಾಸನ ಹಾಗೂ ಸ್ಪರ್ಶ ಆಸ್ಪತ್ರೆಯಿಂದ ನುರಿತ ವೈದ್ಯರ ತಂಡ ಬರುತ್ತಿದ್ದು ಮೈಸೂರಿನ ಅಪೊಲೊ ಮತ್ತು ಬಿ.ಜಿ.ಎಸ್. ಆಸ್ಪತ್ರೆಯ ವತಿಯಿಂದ ಈಕೋ ಮತ್ತು ಇಸಿಜಿ ಪರೀಕ್ಷೆಗಳು ನಡೆಯುತ್ತವೆ.

ಹಾಗೂ ಎಸ್.ಎಸ್.ಎಂ. ಹಾಗೂ ಸ್ಪರ್ಶ ಆಸ್ಪತ್ರೆಗಳ ವೈದ್ಯರ ತಂಡದಿಂದ ನರರೋಗ ,ಪ್ಲಾಸ್ಟಿಕ್ ಸರ್ಜರಿ ,ಮೂಳೆ ,ಕಿವಿ, ಗಂಟಲು ಮತ್ತು ಮೂಗು , ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು,ಚರ್ಮರೋಗ, ರತಿರೋಗ ಮತ್ತು ಕುಷ್ಠರೋಗ ,ನರರೋಗ ಸಂಬಂಧಪಟ್ಟ ರೋಗಗಳಿಗೆ ಉಚಿತ ತಪಾಸಣೆ ಹಾಗೂ ಚಿಕಿತ್ಸೆ ಕೊಡಲಾಗುವುದು.

ಇದರ ಸದುಪಯೋಗವನ್ನು ಸದ್ಭಕ್ತರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ವಿನಂತಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಎಸಳೂರು ವೀರಶೈವ ಸಂಘದ ಅಧ್ಯಕ್ಷರಾದ ಶಿವರಾಜ್ ಹಾಗೂ ಉಪಾಧ್ಯಕ್ಷರಾದ ರಾಜಶೇಖರ್ ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *