
ಚನ್ನರಾಯಪಟ್ಟಣ: ಜೂಜು ಮನುಷ್ಯನ ಬದುಕಿನ ನೆಮ್ಮದಿಗೆ ವಿರುದ್ಧವಾದದ್ದು ಮತ್ತು ನಮ್ಮ ಸಮಾಜಕ್ಕೆ ಬಹು ದೊಡ್ಡ ಅಪಾಯವನ್ನು ತರುತ್ತಿದ್ದೆ ಎಂದು ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎಲ್. ಮಲ್ಲೇಶಗೌಡ ಹಿರೀಸಾವೆಯಲ್ಲಿ ಮಂಗಳವಾರ ಹೇಳಿದರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹೋಬಳಿ ಕಸಾಪ ಘಟಕವು ಏರ್ಪಡಿಸಿದ್ದ ‘ಅನ್ ಲೈನ್ ಬೆಟ್ಟಿಂಗ್ ದಂಧೆಯಿಂದ ಸಮಾಜದ ಮೇಲಾಗುವ ಮಾರಕ ಪರಿಣಾಮಗಳು ಮತ್ತು ನಿವಾರಣೋಪಾಯಗಳು’ ವಿಷಯದ ತಾಲ್ಲೂಕು ಮಟ್ಟದ ಪ್ರಬಂದ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಲವು ತಂತ್ರಜ್ಞಾನದ ಮೂಲಕ ಹಣದ ಆಮೀಷಗಳನ್ನು ತೋರಿಸುತ್ತಾ ಆನ್ ಲೈನ್ ಬೆಟ್ಟಿಂಗ್ಗೆ ಯುವ ಜನತೆಯನ್ನು ಸೆಳೆಯುತ್ತಾ, ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿವೆ. ಬೆಟ್ಟಿಂಗ್, ಮೊಬೈಲ್ ಕಂಪನಿಗಳ ಕೆಲವೆ ವ್ಯಕ್ತಿಗಳ ದುಡ್ಡಿನ ದಾಹಕ್ಕಾಗಿ, ಭಾರತ ದೇಶದ ಮುಗ್ಧ ಮನಸ್ಸುಗಳ ಮೇಲೆ ಪ್ರವಾಹ ಮಾಡುತ್ತಿದ್ದಾರೆ ಎಂದರು.
ಬೆಟ್ಟಿಂಗ್ ಬಗ್ಗೆ ದೇಶದಲ್ಲಿ ನಡೆಯುತ್ತಿರುವ ವ್ಯವಹಾರವನ್ನು ಅಂಕಿ ಅಂಶಗಳ ವಿವರವನ್ನು ತಿಳಿಸಿ, ಪ್ರಸ್ತುತ ಐಪಿಎಲ್ ಪಂದ್ಯಗಳಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆಯುತ್ತಿದ್ದೆ ಎಂದು ವಿಷಯದ ಸಂಪನ್ಮೂಲ ವ್ಯಕ್ತಿ ಸುನಿಲ್ ಕುಮಾರ್ ತಿಳಿಸಿದರು.
ಹೋಬಳಿ ಘಟಕದ ಕಸಾಪ ಅಧ್ಯಕ್ಷ ಪ್ರಮೋದ್ ಪ್ರಾಸ್ತಾವಿಕ ನುಡಿಗಳನ್ನು, ಡಾ. ಎಚ್.ಪಿ. ಶಂಕರ್, ಡಾ.ಟಿ.ಟಿ. ಲೋಕೇಶ್ ಪ್ರಬಂಧಗಳ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬೋರಣ್ಣ, ಜಿಲ್ಲಾ ಕಸಾಪದ ಪ್ರಕಾಶ್, ಬೋಮ್ಮೇಗೌಡ, ಸೆಸ್ಕ್ ನ ನಾಗೇಶ್ ಬಾಬು, ಕಾಲೇಜಿನ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಎನ್.ಆರ್. ಆಶಾ, ಕಸಬಾ ಹೋಬಳಿ ಘಟಕದ ಅಧ್ಯಕ್ಷ ಶೇಟ್ಟಿಹಳ್ಳಿ ದಯಾನಂದ್ ಇದ್ದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಬಸವರಾಜು ವಹಿಸಿದ್ದರು. ಹೋಬಳಿಯ ಕಸಾಪದ ಪದಾಧಿಕಾರಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರಬಂಧ ಸ್ಪರ್ಧೆಯಲ್ಲಿ ಚನ್ನರಾಯಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ. ದ್ರಾಕ್ಷಾಯಿಣಿ ಪ್ರಥಮ, ಹಿರೀಸಾವೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಚನ್ನಕೇಶವ ದ್ವಿತೀಯ, ಚನ್ನರಾಯಪಟ್ಟಣದ ನ್ಯೂ ಅಲಯನ್ಸ್ ಕಾಮರ್ಸ್ ಕಾಲೇಜಿನ ಶುಭಶ್ರೀ ತೃತೀಯ, ಹಿರೀಸಾವೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಂಜಯ್ ಚತುರ್ಥ ಮತ್ತು ಆದಿಚುಂಚನಗಿರಿ ಗೌತಮ್ ಮತ್ತು ಚನ್ನರಾಯಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮಾನ್ಯ ಸಮಾಧನಕರ ಬಹುಮಾನಗಳನ್ನು ಪಡೆದರು.
ಹಿರೀಸಾವೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹೋಬಳಿ ಕಸಾಪ ಮಂಗಳವಾರ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯನ್ನು ಜಿಲ್ಲಾ ಕಸಾಪ ಅಧ್ಯಕ್ಷ ಮಲ್ಲೇಶಗೌಡ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಬಸವರಾಜು, ಹೋಬಳಿ ಅಧ್ಯಕ್ಷ ಪ್ರಮೋದ್, ಗ್ರಾ.ಪಂ. ಅಧ್ಯಕ್ಷ ಬೋರಣ್ಣ ಸೇರಿದಂತೆ ಇತರರು ಹಾಜರಿದ್ದರು.


