ಸಕಲೇಶಪುರ :- ತಾಲೂಕಿನ ಯಸಳೂರು ಹೋಬಳಿಯಲ್ಲಿ 146 ಗ್ರಾಮಗಳಿದ್ದು, ಇಲ್ಲಿ ಎಲ್ಲಾ ರೈತರು ಪೂರ್ವಕಾಲದಿಂದಲೂ ಕೃಷಿಯನ್ನು ಅವಲಂಬಿಸಿಕೊಂಡಿದ್ದಾರೆ , ಇಲ್ಲಿಯ ಪ್ರಮುಖ ಬೆಳೆಗಳಾದ ಭತ್ತ, ಕಾಫಿ, ಏಲಕ್ಕಿ, ಮೆಣಸು ಶುಂಠಿ, ಅಡಿಕೆ ಆಗಿದ್ದು, ಬೆಳೆದ ಬೆಳೆಯನ್ನು ದಾಸ್ತಾನು, ವ್ಯಾಪಾರ, ವಹಿವಾಟುಮಾಡಲು ತಾಲ್ಲೂಕು ಕೇಂದ್ರ ಸಕಲೇಶಪುರ 40-50 ಕಿ.ಮೀ ದೂರದಲ್ಲಿರುತ್ತದೆ.

ಸರಕು ಸಾಗಾಣಿಕೆ ವೆಚ್ಚ ಜಾಸ್ತಿ ಬರುವುದರಿಂದ ಅದನ್ನು ಭರಿಸಲು ರೈತರಿಗೆ ಕಷ್ಟವಾಗಿರುತ್ತದೆ.ಆದ್ದರಿಂದ ಇಲ್ಲಿಯ ರೈತರು ಯಸಳೂರಿನಲ್ಲಿ ರೈತ ಭವನ, ಕೃಷಿ ಮಾರುಕಟ್ಟೆಯನ್ನು ಮಾಡಲು ರೈತ ಭವನ, ರೈತ ಕಾರ್ಯದರ್ಶಿ ಕಛೇರಿ, ಸಿಬ್ಬಂದಿ ಕೊಠಡಿ, ದಾಸ್ತಾನು ಶೇಖರಣಾ ಗೋದಾಮು ಮತ್ತು ಮಾರುಕಟ್ಟೆ ಹಾಗೂ ವಾಹನ ನಿಲುಗಡೆ ಸ್ಥಳ ಬೇಕಾಗಿದ್ದು, ಇದಕ್ಕೆ ಸಂಬಂಧಿಸಿದಂತೆ 1 ಎಕರೆ ಜಾಗ ಯಸಳೂರು ಸರ್ವೆ ನಂಬರ್ 125 ರಲ್ಲಿ ಖಾಲಿ ಇದ್ದು, ಈ ಜಾಗಕ್ಕೆ ಮೋಜಿನಿದಾರರಿಂದ ನಕಾಶೆ ತಯಾರಿಸಿ ಕೂಡಲೆ ಈ ಜಾಗವನ್ನು ಮಂಜೂರು ಮಾಡಿಸಿಕೊಡಬೇಕಾಗಿ ಯಸಳೂರು ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷರಾದ ಗಂಗಾಧರ್ ಕೆ. ಬಿ ಹಾಗೂ ಹಾಗೂ ಸಂಘದ ಸದಸ್ಯರು ತಾಲೂಕು ದಂಡಾಧಿಕಾರಿಯದ ಮೇಘನಾ ಜಿ. ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಯಸಳೂರು ಹೋಬಳಿ ಬೆಳಗಾರರ ಸಂಘದ ಗೌರವ ಕಾರ್ಯದರ್ಶಿ ವೈ.ಎಂ. ಸಿರಾಜ್ ಅಹಮದ್, ಐಗೂರು ಬೆಳೆಗಾರರ ಸಂಘದ ಅಧ್ಯಕ್ಷರಾದ ಸಿ.ಕೆ ರವಿ,. H.D.P. A ನಿರ್ದೇಶಕರಾದ ಮಂಜುನಾಥ್ ಟಿ.ಬಿ, ಐಗೂರು ಗ್ರಾಮ ಪಂಚಾಯಿತಿ ಸದಸ್ಯರಾದ ನಂದನ್ ಕುಮಾರ್, ಬೆಳೆಗಾರರದ ಸುಬ್ಬೆಗೌಡ, ಎಡಕೇರಿ ಮೂರ್ತಿ ಗೌಡ ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *