ಸಕಲೇಶಪುರ: ಮಾ,27: ಗುಡಿಸಲಿನಲ್ಲಿ ಮಲಗಿಸಿದ್ದ ಕೂಲಿ ಕಾರ್ಮಿಕರ 14 ತಿಂಗಳ ಹೆಣ್ಣು ಮಗು ಕಳ್ಳತನವಾಗಿರುವ ಪ್ರಕರಣ ತಾಲ್ಲೂಕಿನ ಮಳಲಿ ಸಮೀಪ ನಡೆದಿದೆ.

ಸಂಜು ಮತ್ತು ರೋಹಿತ್ ದಂಪತಿಗಳಕೀರ್ತಿ ಎಂಬ ಹೆಸರಿನ ಹೆಣ್ಣ ಮಗು ಕಳ್ಳತನವಾಗಿದ್ದು. ಇವರು ಮಧ್ಯಪ್ರದೇಶ ರಾಜ್ಯದ ಸತ್ಮ ಜಿಲ್ಲೆಯ ವೀರ್ ಸಿಂಗ್ ಪುರ್ ತಾಲ್ಲೂಕಿನವರಾಗಿದ್ದಾರೆ.

ಕಳೆದ ಮೂರು ತಿಂಗಳ ಹಿಂದೆ ಊರಿಗೆ ಬಂದ ಇಟ್ಟಿಗೆ ಕೆಲಸಕ್ಕಾಗಿ ಬಂದಿದ್ದಾರೆ.ಮಣ್ಣಿನ ಇಟ್ಟಿಗೆ ಕೆಲಸ ಮಾಡುವ ದಂಪತಿಗಳುಮದ್ಯಾಹ್ನ 12 ಗಂಟೆ ಸಮಯದಲ್ಲಿ ಗುಡಿಸಲಿನಲ್ಲಿ ಮಗುವನ್ನು ಮಲಗಿಸಿ ಪಕ್ಕದಲ್ಲಿ ಹರಿಯುವ ನದಿಯಲ್ಲಿ ಸ್ನಾನ ಮಾಡಿ 20 ನಿಮಿಶದ ನಂತರ ಮರಳಿ ಬಂದಾಗ ಮಗು ಕಳ್ಳತನವಾಗಿದೆ.

ಮಗುವನ್ನ ಗುಡಿಸಿನಲ್ಲಿ ಮಲಗಿಸಿ ದಿನನಿತ್ಯ ಸ್ನಾನ ಮಾಡುವುದು ಈ ದಂಪತಿಗಳ ದಿನಚರಿಯಾಗಿದೆ. ಗುಡಸಲಿನ ಪಕ್ಕದಲ್ಲಿ ಕೆಲವು ವ್ಯಕ್ತಿಗಳು ಮಲಗಿದ್ದರು ಸಹ ಇವರಿಗೆ ತಿಳಿಯದೆ ಮಗುವನ್ನ ಕಳ್ಳತನ ಮಾಡಲಾಗಿದೆ.

ಇವರಿಗೆ ನಾಲ್ಕು ವರ್ಷದ ಗಂಡು ಮಗು ಇದ್ದು , ಎರಡನೇ ಹೆಣ್ಣು ಮಗು ಕಳ್ಳತನ 24 ಗಂಟೆ ಕಳೆದರು ಪೋಲಿಸರು ಇಲ್ಲಿಯ ವರಗೆ ಸ್ಥಳ ಪರಿಶೀಲನೆ ಮಾಡಿಲ್ಲ ಎಂದು ಪೋಷಕರು ದೂರಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *