*ಕಾಡು ಹಕ್ಕಿಯ ಹಾಡು ಇನ್ನಿಲ್ಲ*

ಸಕಲೇಶಪುರ ತಾಲೂಕಿನ ಹೊಂಗಡಹಳ್ಳ ಗ್ರಾಮದ ಬರಹಗಾರ ಸಾಹಿತಿ ಲೇಖಕ ಹೊಂಗಡಹಳ್ಳ ಉಮೇಶ್ ರವರು ಅನಾರೋಗ್ಯದಿಂದ ಇಂದು ತಮ್ಮ ಸ್ವಗ್ರಾಮದಲ್ಲಿ ಶುಕ್ರವಾರ ನಿಧನರಾದರು.

ಅವರು ಅನೇಕ ಲೇಖನ ಹಾಗೂ ಕಥೆಗಳನ್ನು ಬರೆದಿದ್ದು ಅವರ ಪ್ರಸಿದ್ದ ಕವನ ಕಾಡು ಹಕ್ಕಿಯ ಹಾಡು ಕವನ ಸಂಕಲನ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.

ಉಮೇಶ್ ರವರು ಇಂದು 2.30 ಕ್ಕೆ ಅನಾರೋಗ್ಯದಿಂದ ದೈವದೀನರಾಗಿದ್ದಾರೆ.

ಇವರ ಆತ್ಮಕ್ಕೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಶಾಸಕ ಸಿಮೆಂಟ್ ಮಂಜುನಾಥ್, ಮಾಜಿ ಶಾಸಕರಾದ ಹೆಚ್.ಕೆ.ಕುಮಾರಸ್ವಾಮಿ, ಹೆಚ್.ಎಂ.ವಿಶ್ವನಾಥ್, ಬಿ.ಆರ್.ಗುರುದೇವ್, ರಂಗಕರ್ಮಿ ರಕ್ಷಿದಿ ಪ್ರಸಾದ್, ಸಂತಾಪ ಸೂಚಿಸಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *