ಸಕಲೇಶಪುರ : ಪಟ್ಟಣದ ಸಿ ವಿ ಲ್ ನ್ಯಾಯಾಲಯ ಆವರಣದಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಹಾಗೂ ಸಕಲೇಶಪುರ ತಾಲೂಕು ವಕೀಲರ ಸಂಘದ (ರಿ) ಇವರ ಸಂಯುಕ್ತ ಆಶ್ರಯದಲ್ಲಿ ವಕೀಲರಿಗಾಗಿ ಎರಡು ದಿನಗಳ ಜಿಲ್ಲಾ ಮಟ್ಟದ ಕಾನೂನು ಕಾರ್ಯಗಾರ ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಬೆಂಗಳೂರು ಹೈಕೋರ್ಟ್ ಆಫ್ ಕರ್ನಾಟಕ ಗೌರವಾನ್ವಿತ ನ್ಯಾಯಮೂರ್ತಿಗಳಾದ ಹೆಚ್ ಸಿ ಸಂದೇಶ್ ನಾಗರಾಜ್ ರವರು ಎಲೆಕ್ಟ್ರಾನಿಕ್ ಟೆಕ್ನಾಲಜಿ ಹಾಗೂ ಸೈಬರ್ ಕ್ರೈಂ ಅಪರಾಧದಗಳ ಬಗ್ಗೆ ವಿಚಾರ ಗೋಷ್ಠಿಯಲ್ಲಿ ವಿಸ್ತಾರವಾಗಿ ತಿಳಿಸಿದರು.

ಹಾಗೂ ಸುಪ್ರೀಂ ಕೋರ್ಟ್ ನಲ್ಲಿ ನಡೆದಂತಹ ಕೆಲವು ಪ್ರಮುಖ ಪ್ರಕರಣಗಳ ಬಗ್ಗೆ ಕುರಿತು ಜಡ್ಜ್ಮೆಂಟ್ ಕುರಿತು, ಎಲೆಕ್ಟ್ರಾನಿಕ್ ಮತ್ತು ಸೈಬರ್ ಕ್ರೈಂ ಪ್ರಕರಣಗಳ ಬಗ್ಗೆ ಉದಾಹರಣೆ ಸಹಿತ ವಿಸ್ತಾರವಾಗಿ ತಿಳಿಸಲಾಯಿತು.

ಈ ಸಂದರ್ಭದಲ್ಲಿ ಹೈ ಕೋರ್ಟ್ ಆಫ್ ಕರ್ನಾಟಕ ನ್ಯಾಯಮೂರ್ತಿಗಳಾದ ಎಸ್ ಸುನಿಲ್ ದತ್ತ ಯಾದವ್, ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರು ಹಾಸನ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ವಿವೇಕ್ ಸುಬ್ಬರೆಡ್ಡಿ, ಹಾಗೂ ಸಕಲೇಶಪುರ ನ್ಯಾಯಾಲಯದ ನ್ಯಾಯಾಧೀಶರಾದ ಸುಧೀರ್, ನ್ಯಾಯಾಧೀಶರಾದ ಧನಲಕ್ಷ್ಮಿ, ಕರ್ನಾಟಕ ರಾಜ್ಯ ವಕೀಲರ ಪರಿಷತ್ ಸದಸ್ಯರಾದ ಮಧು ಮಧುಸೂದನ್, ಸಕಲೇಶಪುರ ವಕೀಲರ ಸಂಘದ ಅಧ್ಯಕ್ಷರಾದ ಪ್ರದೀಪ್, ಹಿರಿಯ ಸದಸ್ಯರಾದ ಚಾರ್ಲ್ಸ್ ಸಿಕ್ವೇರಾ, ಐ ಇ ಪೀತಾಂಬಾಚಾರ್, ಕಾರ್ಯಕಾರಿ ಮಂಡಳಿ ಹಾಗೂ ಸದಸ್ಯರಾದ ತಾರಾ, ವೈ ಡಿ ರಮೇಶ್, ಮತ್ತು ಎಲ್ಲ ಸದಸ್ಯರುಗಳು ವಕೀಲರು ಗಳು ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *