ಸಕಲೇಶಪುರದ : ಪಟ್ಟಣದ ಮಿನಿ ವಿಧಾನ ಸೌಧದಲ್ಲಿ ಉಪ ವಿಭಾಗಧಿಕಾರಿಯವರು ಹಾಗೂ ತಹಸೀಲ್ದಾರ್ ರವರು ಜಂಟಿಯಾಗಿ ಬೆಳೆಗಾರ ಸಂಘದ ಪದಾಧಿಕಾರಿಗಳನ್ನು ಬರ ಪರಿಸ್ಥಿತಿಯ ವಿಚಾರವಾಗಿ ಸಭೆ ಕರೆದಿದ್ದು, ಇತ್ತೀಚಿನ ದಿನಗಳಲ್ಲಿ ಕೌಡಳ್ಳಿ, ಹೆನ್ನಲಿ, ಇನ್ನೂ ಮುಂತಾದ ಗ್ರಾಮಗಳಲ್ಲಿ ಹೊಳೆ ಮತ್ತು ಸರ್ಕಾರಿ ಕೆರೆಗಳಲ್ಲಿನ ನೀರನ್ನು ತೋಟಗಳಿಗೆ ಹರಿಸುತಿದ್ದು, ಮದ್ಯ ರಾತ್ರಿಯಲ್ಲಿ ಕೆಲವು ದುಷ್ಕರ್ಮಿಗಳು ನಮಗೆ ದೂರವಾಣಿ ಮೂಲಕ ಕರೆ ಮಾಡಿ ಮೋಟಾರ್ ತಗಿಸುವಂತೆಯೂ, ತಗಿಸದಿದ್ದಲ್ಲಿ ಜಿಲ್ಲಾಧಿಕಾರಿಯವರಿಗೂ ಕರೆ ಮಾಡುತ್ತಿದ್ದು, ಜಿಲ್ಲಾಧಿಕಾರಿಯವರು ನಮಗೆ ಮೋಟಾರ್ ಎತ್ತಿಸುವಂತೆ ಒತ್ತಾಯ ಮಾಡುತ್ತಿದ್ದಾರೆ ಆದ್ದರಿಂದ ದಯವಿಟ್ಟು ಯಾರು ಕೂಡಾ ಸರ್ಕಾರಿ ಕೆರೆ ಹಾಗೂ ಹೊಳೆಗೆ ಪಂಪ್ಸೆಟ್ ಬಳಸದಂತೆ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಬೆಳೆಗಾರ ಸಂಘದ ಪದಾಧಿಕಾರಿಗಳು, ಕಾಫಿ ಬೆಳೆಗರರಾದ ನಾವು ಪರಿಸರಕ್ಕೆ ನಮ್ಮದೇ ಅದ ಕೊಡುಗೆಯನ್ನು ನೀಡಿದ್ದೇವೆ ಹಾಗೂ 9000 ಕೋಟಿಗೂ ಹೆಚ್ಚು ವಿದೇಶಿ ವಿನಿಮಯ ತಂದುಕೊಟ್ಟಿದ್ದೇವೆ, ನಮಗೆ ಈ ಸಂದರ್ಭದಲ್ಲಿ ನೀರನ್ನು ಹಾಯಿಸುವುದು ಅನಿವಾರ್ಯ, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಾವು ಮಣ್ಣು ತಿನ್ನಬೇಕಾಗುತ್ತದೆ

ಸಕಲೇಶಪುರದಲ್ಲಿ ಹೆನ್ನಲಿ ಇಂದ ಮೇಲೆ ಮಾತ್ರ ಹೇಮಾವತಿ ಹೊಳೆಯಿಂದ ನೀರನ್ನು ಕುಡಿಯಲು ತೆಗೆದು ಕೊಳ್ಳುತ್ತಿದ್ದು, ಅಲ್ಲಿಂದ ಕೆಳಗೆ ಗೊರೂರು ಡ್ಯಾಮ್ ವರೆಗಿನ ನೀರು ಕೂಡಾ ವ್ಯರ್ಥವಾಗುತ್ತಿದ್ದು, ಇದನ್ನು ನಾವು ತಿಂಗಳಿಗೆ 2 ಭಾರಿ ಉಪಯೋಗಿಸಿಕೊಳ್ಳುತ್ತೇವೆ, ಹಾಗೆಯೇ ಸರ್ಕಾರಿ ಕೆರೆಗಳ್ಳಲ್ಲಿನ ನೀರು ಪ್ರಾಣಿ ಪಕ್ಷಿಗಳು ಕುಡಿಯಲು ಯೋಗ್ಯ ಆಗಿರುವುದಿಲ್ಲ ಹಾಗಾಗಿ ಇದನ್ನು ನಾವು ಬಳಸಿಕೊಳ್ಳುತ್ತೇವೆ ಎಂದು ಮನವಿ ಮಾಡಿದರು.

ಇದಕ್ಕೆ ಒಪ್ಪದ ಅಧಿಕಾರಿಗಳು, ಜಿಲ್ಲಾಧಿಕಾರಿಗಳ ಆದೇಶ ಹಾಗಾಗಿ ನೀವು ಯಾವುದೇ ಕಾರಣಕ್ಕೂ ನೀರನ್ನು ಬಳಸುವಂತಿಲ್ಲ, ಬಳಸಿದರೆ FIR ಮಾಡುವಂತೆ ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದಾರೆ, ಅದರಂತೆ ನಾವು ಕೆಲಸ ನಿರ್ವಹಿಸುತ್ತೇವೆ ಎಂದರು.

ಹೇಮಾವತಿ ಹೊಳೆ ಇಂದ ಇಟ್ಟಿಗೆ ಕೆಲಸ ಮಾಡುವರು, ಬೈಪಾಸ್ ರಸ್ತೆ ಮಾಡುವರು ಎಲ್ಲರೂ ನೀರನ್ನು ಬಳಸುತ್ತಿದ್ದಾರೆ ಹಾಗೆ ಪ್ರತಿನಿತ್ಯ ಹೇಮಾವತಿ ನದಿಯಲ್ಲಿ ಮರಳನ್ನು ತೆಗೆಯುತ್ತಿದ್ದಾರೆ, ಇವರ ವಿರುದ್ದ ಕಾನೂನು ಕ್ರಮ ಕೈಗೊಳ್ಳದ ನೀವು ಅಮಾಯಕ ರೈತರ ಮೇಲೆ ಕ್ರಮ ಕೈಗೊಳ್ಳುವುದಾದರೆ ನಮಗೆ ಸ್ವಲ್ಪ ವಿಷ ಕೊಟ್ಟುಬಿಡಲು ನಿಮ್ಮ ಜಿಲ್ಲಾಧಿಕಾರಿಗಳಿಗೆ ಹೇಳಿ, ರೈತರ ಸಮಾಧಿ ಮೇಲೆ ನೀವು ನಿಮ್ಮ ಆಡಳಿತ ನೆಡೆಸಿ ಎಂದು ಆಕ್ರೋಶ ವ್ಯಕ್ತಪಡಿಸದರು.

ಒಂದು ಕಡೆ ಕಾಡನೆ ಸಮಸ್ಯೆ, ಇನ್ನೊಂದು ಕಡೆ ಅಧಿಕಾರಿಗಳ ದೌರ್ಜನ್ಯವಾದರೆ ರೈತರು ಬದುಕುವುದು ಹೇಗೆ, ಈ ಹಿಂದೆಯೇ ಈ ವರ್ಷ ಬರ ಬರುತ್ತದೆ ಎಂದು ಗೊತ್ತಿದ್ದರೂ ಅಧಿಕಾರಿಗಳು ಏಕೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ, ಅಧಿಕಾರಿಗಳಿಗೆ ಒಂದು ನ್ಯಾಯ, ರೈತರಿಗೆ ಒಂದು ನ್ಯಾಯವೇ…..?

ಯಾರಿಗೂ ಉಪಯೋಗಕ್ಕೆ ಬಾರದ ನೀರನ್ನು ನಾವು ಉಪಯೋಗಿಸಿದಾರೆ ಯಾರಿಗೆ ಏನು ನಷ್ಟ, ರೈತರು ತಮ್ಮ ಕೆಲಸ ಕಾರ್ಯಕ್ಕೆ ನಿಮ್ಮ ಕಚೇರಿಗೆ ಬಂದರೆ ವರ್ಷನುಗಟ್ಟಲೆ ಅಲೆಯುಸುವ ನೀವು ತೋಟಕ್ಕೆ ನೀರು ಹೊಡೆಯುವಾಗ ಮದ್ಯ ರಾತ್ರಿ ಬರುವುದಾದರು ಏಕೆ ಎಂದು ಪ್ರಶ್ನಿಸಿದರು.

ಸಭೆಯಲ್ಲಿ ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಗೌರವ ಕಾರ್ಯದರ್ಶಿ ಲೋಹಿತ್ ಕೌಡಳ್ಳಿ, ಕಸಬಾ ಹೋಬಳಿ ಬೆಳೆಗಾರ ಸಂಘದ ಅಧ್ಯಕ್ಷ ಚಂದ್ರು ಶೇಖರ್, ಕಾರ್ಯದರ್ಶಿ ಮದನ್ ಕುಮಾರ್, ಖಜಾಂಚಿ ರಾಕೇಶ್ ಆನೆಮಹಲ್ ಗ್ರಾಮ ಪಂಚಾಯತ್ ಬೆಳೆಗಾರ ಸಂಘದ ಅಧ್ಯಕ್ಷ ದಿಲೀಪ್ ಕುಮಾರ್ ಕೆಜೆಫ್ ನಿರ್ದೇಶಕ y s ಗಿರೀಶ್ ಕೌಡಳ್ಳಿ ಗಣೇಶ ಹಾಗೂ ಕಸಬಾ ವ್ಯಾಪ್ತಿಯ ಪದಾಧಿಕಾರಿಗಳು ಮಹಿಳಾ ಬೆಳೆಗರಾರು ಭಾಗವಹಿಸಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *