ಬೇಲೂರು : ಪಟ್ಟಣದ ಚನ್ನಕೇಶವ ಸ್ವಾಮಿ ರಥೋತ್ಸವದ ಸಂದರ್ಭದಲ್ಲಿ ಕುರಾನ್ ಪಠಣಕ್ಕೆ ಅವಕಾಶ ನೀಡಬಾರದು ಎಂದು ತಾಲೂಕು ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ವತಿಯಿಂದ ತಹಶಿಲ್ದಾರ್ ಎಂ ಮಮತಾಅವರಿಗೆ ಮನವಿ ಪತ್ರ ಸಲ್ಲಿಸಿದರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ಮನವಿ ಸಲ್ಲಿಸಿಮಾತನಾಡಿದ ವಿಶ್ವ ಹಿಂದೂ ಪರಿಷತ್ ಬಜರಂಗದಳ ತಾಲೂಕು ಕಾರ್ಯದರ್ಶಿ ನಾಗೇಶ್ ಗುಂಡ ಮಾತನಾಡಿ ಪಟ್ಟಣದ ಶ್ರೀ ಚನ್ನಕೇಶವ ದಿವ್ಯ ರಥೋತ್ಡವದಂದು ನಡೆಯುವ ಧಾರ್ಮೀಕ ಪದ್ದತಿ ಹಿಂದೂ ಸಂಪ್ರದಾಯದಂತೆ ಮಾತ್ರ ಪೂಜಾ ವಿಧಿ ವಿಧಾನಗಳು ನಡೆಯಲಿ ಆದರೆ ಅಲ್ಲಿ ಯಾವುದೇ ರೀತಿಯಲ್ಲೂ ಕುರಾನ್ ಪಠಣ ಮಾಡುವುದು ಬೇಡ.
ಕಳೆದ ವರ್ಷವೂ ಕೂಡ ಈ ಸಮಸ್ಯೆಯ ಬಗ್ಗೆ ಸರ್ಕಾರದ ಗಮನ ಸೆಳೆದ ಸಂದರ್ಭದಲ್ಲಿ ಮುಜರಾಯಿ ಕಮಿಷನರ್ ಆದೇಶದಂತೆ ಆಗಮಿಕ ಪಂಡಿತರು ಬೇಲೂರಿಗೆ ಆಗಮಿಸಿ ಸಂಪೂರ್ಣ ಈ ವಿಷಯದ ಬಗ್ಗೆ ವಿಮರ್ಷೆ ಮಾಡಿ ಕುರಾನ್ ಪಠಣೆ ನಡೆಸಲು ಯಾವ ಆಧಾರವು ಇಲ್ಲ, ಕೇವಲ ವಂದನೆ ಸಲ್ಲಿಸಲು ಅವಕಾಶ ನೀಡಬೇಕು ಎಂಬ ಸ್ಪಷ್ಟ ನಿರ್ದೇಶನವನ್ನು ನೀಡಿರುತ್ತಾರೆ ಎಂಬುದನ್ನು ತಹಸೀಲ್ದಾರ್ ಗಮನಕ್ಕೆ ತಂದಿದ್ದು ಕಳೆದ ವರ್ಷ ರಥೋತ್ಸವದ ಮುಂದೆ ಕುರಾನ್ ಪಠಣ ನಡೆಸಲು ಅವಕಾಶ ನೀಡದಿರುವುದು ಸ್ವಾಗತಾರ್ಹವಾಗಿದೆ.
ಆದರೂ ಕಾಜಿಯವರಿಂದ ದೇವಾಲಯದ ಒಂದು ಮೂಲೆಯ ಮೆಟ್ಟಲುಗಳ ಮೇಲೆ ಪ್ರಾರ್ಥನೆ ಸಲ್ಲಿಸಿರುವುದಕ್ಕೆ (ಅರಬಿಕ್ ಭಾಷೆಯಲ್ಲಿ) ಕೂಡ ಯಾವ ಆಧಾರವು ಇರುವುದಿಲ್ಲ ಅದ್ದರಿಂದ ಅಲ್ಲಿಯೂ ಸಹ ಅವರಿಗೆ ಅವಕಾಶ ಕೊಡಬಾರದು.
ಬೇಲೂರಿಗೆ ಬರುವ ಲಕ್ಷಾಂತರ ಭಕ್ತಾದಿಗಳಿಗೆ ರಥೋತ್ಸವ ಸಂದರ್ಭದಲ್ಲಿ ಉತ್ಸವ ಮೂರ್ತಿ ದರ್ಶನ ಕೆಲವೇ ಕ್ಷಣಗಳು ಪಡೆದರು ಕೂಡ ಜೀವನ ಪಾವನವಾದಂತೆ ಎಂದು ಭಾವಿಸುವ ಸಂದರ್ಭದಲ್ಲಿ ಇಲ್ಲ ಸಲ್ಲದ ಮುಸ್ಲಿಂ ಆಚರಣೆಗಳನ್ನು ಬಲವಂತವಾಗಿ ಹೇರುವ ರೀತಿ, ಕಾಜಿಯವರಿಗೆ ಯಾರಿಗೂ ನೀಡದ ವಿಷೇಶ ಸ್ಥಾನಮಾನವನ್ನು ಮೆಟ್ಟಿಲು ಮೇಲೆ ನೀಡಿ ಮುಜರೆ ಮರ್ಯಾದೆ/ವಂದನೆ ಅಥವಾ ಕುರಾನ್ ಪಠಣ ಸಲ್ಲಿಸಲು ಅವಕಾಶ ನೀಡಿರುವುದನ್ನು ವಿರೋಧಿಸುತ್ತೇವೆ.
ಕಾಜಿಯವರು ಎಲ್ಲರಂತೆ ಜಾತ್ರಾ ಮಹೋತ್ಸವಕ್ಕೆ ಬಂದು ದೇವರಿಗೆ ಕೈಮುಗಿದು ಹೋಗಲು(ವಂದನೆ ಸಲ್ಲಿಕೆ) ನಮ್ಮ ಯಾವ ಅಭ್ಯಂತರವೂ ಇಲ್ಲ. ಅವರಿಗೆ ಮೆಟ್ಟಿಲು ಮೇಲೆ ವಿಶೇಷ ಅವಕಾಶ ನೀಡುವುದನ್ನು ಕೂಡಲೇ ನಿಲ್ಲಿಸಬೇಕು ಹಾಗೂ ಇದಕ್ಕೆಲ್ಲ ಮೂಲ ಆಧಾರವಾಗಿರುವ ಬೇಲೂರು ಶ್ರೀ ಚನ್ನಕೇಶವ ದೇವಾಲಯದ ಮ್ಯಾನ್ಯುಯಲ್ ತಿರಸ್ಕರಿಸಿ, ಪುನರ್ ರಚಿಸಬೇಕೆಂದು ಈ ಮೂಲಕ ತಹಶಿಲ್ದಾರ್ ಎಂ ಮಮತಾರವರಿಗೆ ಮನವಿ ಸಲ್ಲಿಸಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ತಾಲೂಕು ಸಂಯೋಜಕ ಭರತ್, ಅರುಣ್ ಸಿಂಗ್ ರಜಪೂತ ಮೋಹನ್ ಸಂಜಯ್ ಹೇಮಂತ್ ಪವನ್ ಮತ್ತು ಹಿಂದೂ ಕಾರ್ಯಕರ್ತರು ಹಾಜರಿದ್ದರು.
*ಬಾಕ್ಸ್ ನ್ಯೂಸ್*ಒಂದು ವೇಳೆ ಶ್ರೀ ಚನ್ನಕೇಶವ ದೇವಾಲಯದ ದಿವ್ಯ ರಥೋತ್ಸವದಂದು ಕುರಾನ್ ಪಠಣ ನಿಲ್ಲಿಸದಿದ್ದರೆ ವಿಶ್ವ ಹಿಂದೂ ಪರಿಷತ್ ಬಜರಂಗದಳ ರಾಜ್ಯದಾದ್ಯಂತ ಹೋರಾಟಕ್ಕೆ ಕರೆ ಕೊಡುತ್ತದೆ ಎಂದು ವಿಶ್ವ ಹಿಂದೂ ಪರಿಷತ್ ಬಜರಂಗದಳ ತಾಲೂಕು ಕಾರ್ಯದರ್ಶಿ ನಾಗೇಶ್ ಗುಂಡ ಎಚ್ಚರಿಕೆ ನೀಡಿದರು.