ಸಕಲೇಶಪುರ : ಜಿಲ್ಲಾ ಸ್ವೀಪ್ ಸಮಿತಿ ಪುರಸಭೆಯ ಹಾಗೂ ತಾಲೂಕು ಪಂಚಾಯತ್ ಆಡಳಿತಾಧಿಕಾರಿಗಳಿಂದ ಇಂದು ಲೋಕಸಭಾ ಚುನಾವಣೆಗೆ ಸಂಬಂಧ ಪಟ್ಟಂತೆ ಮತದಾರರಲ್ಲಿ ಜನಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು

ಲೋಕಾಸಭಾ ಚುನಾವಣೆಯ ಜಾಗ್ರತ ಕಾರ್ಯಕ್ರಮದ ಜಾಥಾದಲ್ಲಿ ಉಪವಿಭಾಗಾಧಿಕಾರಿಗಳಾದ ಶ್ರುತಿ ಮಾತನಾಡಿ 2024 ಏಪ್ರಿಲ್ 26 ಶುಕ್ರವಾರ ನಡೆಯಲ್ಲಿರುವ ಮತದಾನಕ್ಕೆ ಮತದಾರರು ಯಾವುದೇ ಪಕ್ಷದವರು ಕೂಡುವ ಸೀರೆ, ಹಣ , ಹೆಂಡ ಮತ್ತಿತ್ತರ ಆಸೆಗಳಿಗೆ ಒಳಗಾಗದೇ ಜಾಗ್ರತೆಯಿಂದ ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡಿದ್ದೇ ಆದರೆ ಸಮರ್ಥ ನಾಯಕರನ್ನು ಚುಣಾಯಿಸುವುದರ ಮೂಲಕ ದೇಶದ ಪ್ರಗತಿಗೆ ಹಾಗೂ ಮುಂಬರುವ ಪೀಳಿಗೆಗೆ ಅಡಿಪಾಯ ಹಾಕಿಕೊಟ್ಟಂತೆ ಸರಿ ಎಂದಿದ್ದಾರೆ.

ಕಳೆದ ಬಾರಿ ಮತದಾನವು 79% ಮತದಾನವಾಗಿತ್ತು. ಟೌನ್ಲಿಮಿಟ್ ಗಳಲ್ಲಿ ಕೇವಲ 26% ರಷ್ಟು ಮತದಾನವಾಗಿತ್ತು. ಆದರೆಈ ಬಾರಿ ಹೆಚ್ಚಿನ ಮತದಾನ ಮಾಡಬೇಕು. ಪ್ರತಿಯೊಬ್ಬರೂಸಹ ಮತದಾನ ಮಾಡಬೇಕು ಎಂದು ಬೈಕ್ ರ್ಯಾಲಿಯ ಮೂಲಕ ಪ್ರತಿಯೊಂದು ವಾರ್ಡಗಳಿಗೆ ಹಳ್ಳಿಗಳಿಗೆ ಬೇಟಿ ನೀಡಿ ಅರಿವು ಮೂಡಿಸುವ ಕಾರ್ಯಕ್ರಮ ಮಾಡುತ್ತಿದ್ದೇವೆ.

ಮತದಾನ ಮಾಡಬೇಕು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮಗೆ ಬೇಕಾದಉತ್ತಮ ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಳ್ಳಲು ಪ್ರತಿಯೊಬ್ಬರಿಗೂ ಹಕ್ಕಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನದ ಮೂಲಕ ಮತದಾನದ ಹಕ್ಕು ಪಡೆದಿರುವಮತದಾರ ಸರ್ಕಾರವನ್ನು ರಚಿಸುವುದರಲ್ಲಿ ಉತ್ತಮ ಜನಪರಕಾಳಜಿ ಇರುವ ನಾಯಕರನ್ನು ಆಯ್ಕೆ ಮಾಡಲು ಸುಸ್ಥಿರಹಾಗೂ ಅಭಿವೃದ್ಧಿ ಯನ್ನು ಒದಗಿಸುವ ಯೋಗ್ಯರು ಯಾರೆಂದುನೀವೇ ನಿರ್ಧರಿಸಬೇಕು ಎಂದು ಹೇಳಿದರು

ಸ್ವೀಪ್ ಸಮಿತಿ ವತಿಯಿಂದ ತಾಲೂಕು ಪಂಚಾಯತ್ ಹಾಗೂ ತಾಲೂಕು ಆಡಳಿತಾಧಿಕಾರಿಗಳಿಗೆ ಪಿ,ಡಿ,ಓ ಹರೀಶ್ ಮತದಾರರ ಕರ್ತವ್ಯಜವಾಬ್ದಾರಿಗಳ ವಿಧಿ ವಿಧಾನಗಳ ಪ್ರತಿಜ್ಞೆ ಮಾಡಿಸಿದರು.

ಜಾಥಾ ರ್ಯಾಲಿಯು ತಾಲೂಕು ಪಂಚಾಯತ್ ಆವರಣದಲ್ಲಿ ಅಧಿಕಾರಿ ಗಳ ಸಮ್ಮುಖದಲ್ಲಿ ಆರಂಭಗೊಂಡು ಸಕಲೇಶ್ವರ ಸ್ವಾಮಿದೇವಸ್ಥಾನ ದಿಂದ ಆಜಾದ್ ರಸ್ಥೆ, ಟೋಲ್ಗೇಟ್, ಕುಶಾಲನಗರ, ಹಾಗೂ ಪಟ್ಡಣದ ಆಸ್ಪತ್ರೆಬೀದಿಯಲ್ಲಿ ಮತದಾರರ ಮತದಾನದ ಜಾಗ್ರುತಿ ಕಾರ್ಯಕ್ರಮ ನೆರವೇರಿತು.

ಈ ಸಂದರ್ಭದಲ್ಲಿ ಪುರಸಭಾ ಮುಖ್ಯಧಿಕಾರಿಗಳಾದ ರಮೇಶ್,ದಂಡಾಧಿಕಾರಿಗಳಾದ ಮೇಘನ, ಪಿಡಿಓ ಅಧಿಕಾರಿಯಾದ ಆದಿತ್ಯಹರೀಶ್, ಇ, ಓ ರಾಮ್ ಕೃಷ್ಣಾ ಮತ್ತಿತ್ತರರು ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *