ಸಕಲೇಶಪುರ : ತಾಲೂಕು ಹೆತ್ತೂರು ಹೋಬಳಿಯಲ್ಲಿ 1974 ರಲ್ಲಿ ಓದಿದಂತ ಹಳೆಯ ವಿದ್ಯಾರ್ಥಿಗಳು ಇಂದು ಇಲ್ಲಿನ ಇಖಾ ರೆಸಾರ್ಟ್ ನಲ್ಲಿ ಏರ್ಪಡಿಸಿದ್ದ 50 ನೇ ವರ್ಷದ ಸುವರ್ಣ ಸಂಭ್ರಮಾಚರಣೆಯಲ್ಲಿ ಭಾಗವಹಿಸುವ ಮೂಲಕ ಪರಸ್ಪರ ಕುಶಲೋಪಹರಿ ಮಾಡಿಕೊಳ್ಳುವ ಮೂಲಕ ಖುಷಿಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದರು

1973-74 ರ ಸಾಲಿನಲ್ಲಿ 10 ನೇ ತರಗತಿಯಲ್ಲಿ ಸುಮಾರು 35 ವಿದ್ಯಾರ್ಥಿಗಳ ಪೈಕಿ 12 ಜನ ವಿದ್ಯಾರ್ಥಿಗಳು ಉತ್ತಿರ್ಣಹೊಂದಿ ರಾಜ್ಯದ ವಿವಿಧ ಭಾಗಗಳಲ್ಲಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ .

ಅವರೆಲ್ಲ ಇಂದು ಒಂದೆಡೆ ಸೇರುವ ಮೂಲಕ ತಮ್ಮ ಸಂತೋಷದ ಕ್ಷಣಗಳನ್ನು ಹಂಚಿಕೊಂಡರು.

ಇದೆ ಸಂದರ್ಭದಲ್ಲಿ ಉದ್ಯಮಿಗಳಾದ ರಾಬರ್ಟ್ ಕೊಲೋಸ್ ಅವರು ತಾನು ಓದಿದ ಶಾಲೆಯ ಅಭಿವೃದ್ದಿಗಾಗಿ 25 ಲಕ್ಷ ರೂಪಾಯಿಗಳನ್ನು ಕೊಡುಗೆಯಾಗಿ ನೀಡಿದರು

ಕಾರ್ಯಕ್ರಮದಲ್ಲಿ ನಿವೃತ್ತ ಕೃಷಿ ಅಧಿಕಾರಿ ಕೆ.ಬಿ.ಸುಬ್ರಮಣ್ಯ, ಅಶೋಕ್,,ಏಲಕ್ಕಿ ಸಂಬಾರ ಮಂಡಳಿಯ ವಿಜಯ್ ಕುಮಾರ್, ಮೆಲಬರ್ನ್ ಯೂನಿವರ್ಸಿಟಿಯ ಪ್ರೊ ನಾಗೇಶ್, ಚಲನಚಿತ್ರ ನಟ ಹಾಗೂ ನಿರ್ದೇಶಕ ರ್ಯಾಂಬೋ ವೀರೇಶ್ ಹಾಗೂ ಎಲ್ಲಾ ಹಳೆಯ ವಿದ್ಯಾರ್ಥಿಗಳು ಮತ್ತು ಸ್ನೇಹಿತರು ಭಾಗವಹಿಸಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *