ಬೇಲೂರು : ಸಾರ್ವಜನಿಕರಿಗೆ ಕಂದಾಯ ಕಟ್ಟಲು ಅನುಕೂಲಕ್ಕಾಗಿ ಬ್ಯಾಂಕ್ ಔಟ್ ಲೆಟ್ ಕೌಂಟರ್ ಅನ್ನು ತೆರೆಯಲಾಗಿದೆ ಎಂದು ಮುಖ್ಯಾಧಿಕಾರಿ ಎಂ ಇಂದೂ ತಿಳಿಸಿದರು.

ಪುರಸಭೆ ಕಚೇರಿಯಲ್ಲಿ ಹೆಚ್ ಡಿ ಎಫ್ ಸಿ ಬ್ಯಾಂಕ್ ಇವರ ಸಹಯೋಗದೊಂದಿಗೆ ಪುರಸಭೆಯಲ್ಲಿ ಕಂದಾಯ ತೆರಿಗೆ ಹಾಗೂ ಇನ್ನಿತರ ತೆರಿಗೆ ಪಾವತಿ ಮಾಡಲು ಬ್ಯಾಂಕ್ ಕೌಂಟರ್ ತೆರಯುವ ಮೂಲಕ ನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಇದೇ ವೇಳೆ ಮಾತನಾಡಿದ ಮುಖ್ಯಾಧಿಕಾರಿ ಎಂ ಇಂದೂ ಪುರಸಭೆ ವ್ಯಾಪ್ತಿಯಲ್ಲಿ ಬರುವಂತಹ ಕಂದಾಯ ತೆರಿಗೆ ಪಾವತಿ ಮಾಡಲು ಸಾರ್ವಜನಿಕರಿಗೆ ತೊಂದರೆಯಾಗುತ್ತಿತ್ತು ಇದರಿಂದ ಆಸ್ತಿತೆರಿಗೆ ಕಟ್ಟಡ ಪರವಾನಗಿ ಮಳಿಗೆ ಬಾಡಿಗೆ ಹಾಗೂ ಪುರಸಭೆ ಗೆ ಸೇರಿದ ಇನ್ನಿತರ ತೆರಿಗೆಗಳನ್ನು ಪಾವತಿ ಮಾಡಲು ಸಾರ್ವಜನಿಕರು ಕಚೇರಿಗೆ ಹಾಗೂ ಬ್ಯಾಂಕಿಗೆ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಬಡಾವಣೆಗಳು ೩೮೩೨ ,ವಾಣಿಜ್ಯ ಉದ್ದೇಶಕ್ಕೆ ೧೫೪೫ ,ಖಾಲಿ ನಿವೇಶನಗಳು ೨೧೬೬ ನಿವೇಶನಗಳಿದ್ದು ಕಳೆದ ಸಾರಿ ೧ ಕೋಟಿ ೯೯ ಲಕ್ಷ ತೆರಿಗೆ ಹಣ ಬಂದಿದ್ದು ಇನ್ನು ಬಾಕಿ ೫ ಲಕ್ಷ ಇದ್ದು ಈ ಬಾರಿ ವಸೂಲಾತಿ ಮಾಡಲಾಗುವುದು.

ಏಪ್ರಿಲ್ ೧ ರಿಂದ ೩೦ ರೊಳಗೆ ತೆರಿಗೆ ಹಣ ಪಾವತಿಸುವ ಪ್ರತಿಯೊಬ್ಬರಿಗೂ ಶೇಕಡಾ ೫ % ವಿನಾಯಿತಿ ನೀಡಲಾಗುವುದು.ನಂತರ ಮೇ ತಿಂಗಳಲ್ಲಿ ಬಡ್ಡಿ ರಹಿತವಾಗಿ ಆಸ್ತಿ ತೆರಿಗೆಗೆ ಅವಕಾಶ ಕಲ್ಪಿಸಲಾಗುವುದು.ನಂತರ ಬಂದಂತವರಿಗೆ ೨ %ಬಡ್ಡಿ ಹಾಕಲಾಗುವುದು.

ಈ ಅನ್ವಯ ೨೦೨೪-೨೫ ನೇ ಸಾಲಿನವರೆಗೂ ಇದು ಅನ್ವಯಿಸುತ್ತದೆ. ೨೦೨೩-೨೪ ರಲ್ಲಿ ಬಾಕಿ ಉಳಿಸಿಕೊಂಡಿರುವವರಿಗೆ ಬಡ್ಡಿ ಸಮೇತ ವಸೂಲಿ ಮಾಡಲಾಗುವುದು. ಆ ವಾರ್ಡ್ಗಳಿಗೆ ಸೀಮಿತವಾಗಿ ಮೂರು ಕೌಂಟರ್ ತೆರದಿದ್ದು ೬ ಜನ ಸಿಬ್ಬಂದಿಗಳು ಕೆಲಸ ನಿರ್ವಹಿಸುತ್ತಿದ್ದು ನಮ್ಮ ಸಿಬ್ಬಂದಿಗಳ ಹಾಗೂ ಸದಸ್ಯರ ಸಹಕಾರದಿಂದ ಶೇಕಡಾ ೧೦೦ ರಷ್ಟು ತೆರಿಗೆ ಪಾವತಿಯನ್ನು ಪಡೆಯುತ್ತೇವೆ ಎಂದರು.

ಹೆಚ್ ಡಿ ಎಫ್ ಸಿ ಬ್ಯಾಂಕಿನ ವ್ಯವಸ್ಥಾಪಕ ಆನಂದ್ ಮಾತನಾಡಿ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನಮ್ಮ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದು ಬೆಳಗ್ಗೆ ೧೦ ರಿಂದ ಸಂಜೆ ೪ ಗಂಟೆಯ ತನಕ ಇಲ್ಲಿ ಹಣವನ್ನು ಕಟ್ಟಿಸಿಕೊಳ್ಳಲಾಗುವುದು.ಅಲ್ಲದೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಆನ್ ಲೈನ್ ನಲ್ಲೂ ಸಹ ಹಣಪಾವತಿಸಲು ಅವಕಾಶ ಕಲ್ಪಿಸಲಾಗುವುದು ಎಂದರು .

*ಸಾರ್ವಜನಿಕರ ಮೆಚ್ಚುಗೆ* ಪುರಸಭೆಯಲ್ಲಿ ಈ ರೀತಿಯ ವಿನೂತನ ಕಾರ್ಯಕ್ರಮ ಮಾಡುವ ಮೂಲಕ ಸಾರ್ವಜನಿಕರಿಗೆ ಅನುಕೂಲವಾಗಿದ್ದು ಇಲ್ಲಿ ಕಚೇರಿಗೆ ಪ್ರತಿನಿತ್ಯ ಅಲೆಯುವ ಬದಲು ಒಂದೇ ದಿನ ಆಸ್ತಿ ತೆರಿಗೆಯನ್ನು ಇಲ್ಲಿಯೇ ಪಾವತಿಸುವ ಮೂಲಕ ಸಮಯ ಉಳಿಸುವ ಕೆಲಸ ಮಾಡಿದೆ.ಇಲ್ಲಿನ ಹಿರಿಯ ನಾಗರೀಕರಿಗೂ ತುಂಬಾ ಅನುಕೂಲವಾಗಿದೆ ಎಂದು ಸೌಭಾಗ್ಯ ಆಂತೋಣಿ ಪುರಸಭೆಗೆ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಕ ರಾದ ಲೋಹಿತ್,ಸಿಬ್ಬಂದಿಗಳಾದ ,ಪ್ರತೀಕ್ಷಾ,ಮೊನೇಶ್,ಪೃಥ್ವಿ,ಸಲ್ಮಾನ್, ಸಂಜಯ್ ಸೇರಿದಂತೆ ಇತರರು ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *