
ಹಾಸನ: ಯೋಗಾಸನ ಹೇಗೆ ಮಾಡಿದರೇ ಮನುಷ್ಯನ ದೇಹಕ್ಕೆ ಪವರ್ ಬರುತ್ತದೆ ಅದರಂತೆ ಎಲ್ಲಾರು ತಪ್ಪದೆ ಮತದಾನ ಮಾಡಿದರೇ ಮಾತ್ರ ದೇಶಕ್ಕೂ ಪವರ್ ಬರುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಸಿ. ಸತ್ಯಭಾಮ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿ ಜಿಲ್ಲಾಡಳಿತ ಮತ್ತು ಸ್ವೀಪ್ ಸಮಿತಿ, ವಿಕಲಚೇತನರ ಹಾಗೂ ನಾಗರೀಕರ ಸಬಲೀಕರಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರದಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ವಿಲಚೇತನರ ಹಾಗೂ ಹಿರಿಯ ನಾಗರಿಕರು ಕಡ್ಡಾಯವಾಗಿ ಮತದಾನ ಮಾಡಲು ಜಾಗೃತಿಗಗಾಗಿ ಬೈಕ್ ರ‍್ಯಾಲಿ ಹಾಗೂ ಜಾಥಕ್ಕೆ ಹಸಿರು ಬಾವುಟ ಪ್ರದರ್ಶಿಸಿ ಮಾತನಾಡಿದ ಅವರು, ಮತದಾನ ಎಂದರೇ ಕೈಲಿ ಇರುವ ಶಕ್ತಿ. ಇರುವ ಶಕ್ತಿಯನ್ನು ಬಳಸಬೇಕು. ಎಕ್ಸಸೇಜ್ ಮಾಡಿದರೇ ಮಾತ್ರ ಪವರ್ ಬರುತ್ತದೆ. ಇಲ್ಲವಾದ್ರೆ ಆ ಶಕ್ತಿ ವ್ಯರ್ಥವಾಗುತ್ತದೆ. ಮತದಾರರ ಪಟ್ಟಿಯಲ್ಲಿರುವ ಎಲ್ಲಾರೂ ತಪ್ಪದೆ ಮಾತದಾನ ಮಾಡುವ ಮೂಲಕ ನಿಮ್ಮ ಪವರ್ ಉಪಯೋಗಕ್ಕೆ ಬರುತ್ತದೆ. ಕಡ್ಡಾಯ ಎಂದು ಏನಾದರೂ ಕಾನೂನು ಬಂದು ಯಾರು ಮತದಾನ ಮಾಡುವುದಿಲ್ಲ ಅಂತವರ ಸೌಲಭ್ಯ ಮಟುಕುಕೊಳಿಸಲಾಗುವುದು ಎಂದಾಗ ಪ್ರತಿಯೊಬ್ಬರೂ ಮತದಾನ ಮಾಡುತ್ತಾರೆ ಎಂದರು.
ಯಾವುದೇ ಆಮಿಷಕ್ಕೆ ಒಳಗಾಗದೇ ನಿಮ್ಮ ಮನಸ್ಸಿನಲ್ಲಿರುವ ಉತ್ತಮ ವ್ಯಕ್ತಿಗೆ ಮತದಾನ ಮಾಡಬೇಕು. ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಮತದಾನ ಮಾಡಿದಾಗ ಇಂತಹ ಕಾರ್ಯಕ್ರಮಗಳು ಸಾರ್ಥಕವಾಗುತ್ತದೆ ಎಂದು ಕಿವಿಮಾತು ಹೇಳಿದರು.
ಸ್ವೀಪ್ ಸಮಿತಿ ಮತದಾನ ಕುರಿತು ಹೆಚ್ಚಿನ ಪ್ರಚಾರ ಕೈಗೊಳ್ಳುತ್ತಿದ್ದು, ಶ್ರೀಮಂತ ಆಗಲಿ, ಬಡವನಾಗಲಿ ಇರುವುದು ಒಂದೆ ಮತ ಹಾಕಲು ಅವಕಾಶ ಎಂದು ಸಲಹೆ ನೀಡಿದರು. ಪ್ರಜಾಪ್ರಭುತ್ವದಲ್ಲಿ ಇರುವುದು ಒಂದೆ ಹಕ್ಕು ಅದೆ ಮತದಾನದ ಹಕ್ಕು. ಎಲ್ಲಾರು ಮತಗಟ್ಟೆಗೆ ಬಂದು ಮತದಾನ ಮಾಡಲು ಕರೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ‍್ಯನಿರ್ವಹಣಾಧಿಕಾರಿ ಪೂರ್ಣಿಮ ಮಾತನಾಡಿ, ಮತದಾನ ಮಾಡಬೇಕು ಎನ್ನುವ ಉತ್ಸಹ ಅಂಗವಿಕಲರು, ವಿಕಲಚೇತನರಿಂದ ಬರಬೇಕು ಎನ್ನುವು ದೃಷ್ಠಿಯಲ್ಲಿ ಈ ಜಾಗೃತಿ ಜಾಥವನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲಾರೂ ಮತಗಟ್ಟೆಗೆ ಬಂದು ಓಟು ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಿ ಎಂದರು.
ಶೇಕಡ ನೂರರಷ್ಟು ಮತದಾನ ಮಾಡಿ ರಾಜ್ಯದಲ್ಲಿ ನಮ್ಮ ಜಿಲ್ಲೆ ಪ್ರಥಮ ಸ್ಥಾನಕ್ಕೆ ಬರಬೇಕು ಎಂದು ಹೇಳಿದರು. ಚುನಾವಣೆಯ ಐಕಾನ್ ಲೋಕೇಶ್ ಅವರು ಮಾತನಾಡಿ, ಹಿರಿಯ ನಾಗರಿಕರು ಅಂಗವಿಕಲರು, ವಿಕಲಛೇತನರು ತಪ್ಪದೆ ಮತದಾನ ಮಾಡಬೇಕು. ಮತದಾನದಿಂದ ದೇಶದ ಭವಿಷ್ಯ ಬದಲಾಯಿಸಬಹುದು. ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೇ ಉತ್ತಮ ನಾಯಕತ್ವವನ್ನು ತರಲು ನಿಮ್ಮೆಲ್ಲರ ಮತದಾನ ಅವಶ್ಯಕ ಎಂದರು.
ಬಾಣಾವಾರ ಗ್ರಾಮದ ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆ ಮಹಾದೇವಿ ಮಾತನಾಡಿ, ಎಲ್ಲಾರು ಕಡ್ಡಾಯವಾಗಿ ಮತದಾನ ಮಾಡಬೇಕು. ವಿಕಲಛೇತನರೇ ಮತದಾನ ಮಾಡುವಾಗ ನಾವು ಕೂಡ ಮತದಾನ ಮಾಡಬೇಕು ಎನ್ನುವ ಮನಸ್ಸು ಬರಬೇಕು. ಮತಗಟ್ಟೆಗೆ ಬಂದು ಓಟ್ ಹಾಕಲು ಯಾರಿಗೆ ಸಾಧ್ಯವಿಲ್ಲ ಅಂತವರಿಗೆ ಮನೆಯಿಂದಲೇ ಮತದಾನ ಮಾಡುವ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಇದೆ ವೇಳೆ ಅಪರ ಜಿಲ್ಲಾಧಿಕಾರಿ ಶಾಂತಲಾ, ನೂಡಲ್ ಅಧಿಕಾರಿ ಪರಪ್ಪಸ್ವಾಮಿ, ಇಲಾಖೆ ಅಧಿಕಾರಿ ಅನುಪಮ ಜಿಲ್ಲಾ ವಾರ್ತಾಧಿಕಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.




