
ಬೇಲೂರು : ಮಲೆನಾಡು ಬಾಗದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಾಡಾನೆ ಹಾವಳಿ ಇದರ ಬೆನ್ನಲ್ಲೇ ಇಂದುಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ಬಾಲಗುಳಿ ಗ್ರಾಮಕ್ಕೆ ಸೇರಿದ ಮಲ್ಲೇಶ್ ಗೌಡ ಎಂಬುವವರ ತೋಟದಲ್ಲಿ ಕೂಲಿ ಕಾರ್ಮಿಕ ಕಾಡಾನೆ ದಾಳಿಯಿಂದ ಪಾರಾದ ಘಟನೆ ನಡೆದಿದೆ.
ಇಂದು ಸಂಜೆ ಸುಮಾರು 5.30ರ ಸಮಯದಲ್ಲಿ ಮನೆಯ ಹತ್ತಿರ ಇರುವ ನೀರಿನ ಟ್ಯಾಂಕ್ ನಿಂದ ನೀರನ್ನು ತರಲು ಹೋದಾಗ ಒಂಟಿ ಕಾಡಾನೆ ದಾಳಿಗೆ ಮುಂದಾಗಿ ತನ್ನ ಸೊಂಡಿಲಿನಿಂದ ಎಳೆಯಲು ಪ್ರಯತ್ನಿಸಿತು ಈ ವೇಳೆ ಅಲ್ಲಿಂದ ತಪ್ಪಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ..
ಇವರು ಮೂಲತಃ ಸಕಲೇಶಪುರ ತಾಲೂಕಿನ ಹಲಸುಲಿಗೆ ಗ್ರಾಮದ ಇವರು ಕೂಲಿ ಕೆಲಸಕ್ಕಾಗಿ ಅರೆಹಳ್ಳಿಗೆ ಬಂದು ನೆಲೆಸಿದ್ದರು.ಹತ್ತಿರದ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.


