ಸಕಲೇಶಪುರ ಹಿಂದೂ ಸಂಘಟನೆಯಿಂದ ಮೋದಿ ಮತ್ತೊಮ್ಮೆ ಪ್ರಧಾನಮಂತ್ರಿ ಮಾಡಲು ಮನೆ ಮನೆಗೆ ಜಾಗೃತಿ ಕರಪತ್ರ, ಯುಗಾದಿ ಶುಭಾಶಯ ಪತ್ರ (ಗ್ರೀಟಿಂಗ್)ಮತ್ತು ರಾಮನ ಭಾವಚಿತ್ರದ ಸ್ಟಿಕರ್ ತಲುಪಿಸಲು ತಯಾರಿ.

ಸಕಲೇಶ್ವರ ಸ್ವಾಮಿ ದೇವಸ್ಥಾನ ಮತ್ತು ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ iವಿಶೇಷ ಪೂಜೆ ಸಲ್ಲಿಸಿ ಕರಪತ್ರ ಬಿಡುಗಡೆ ಮಾಡಿದರು.

ಮೋದಿ ಮತ್ತಮ್ಮೆ ಪ್ರಧಾನಮಂತ್ರಿ ಆಗಬೇಕು 400 ಕ್ಕೂ ಹೆಚ್ಚು ಲೋಕಸಭಾ ಸದಸ್ಯರು ಗೆದ್ದು ದೇಶದ ಸುರಕ್ಷತೆ ಮತ್ತು ರಕ್ಷಣೆಗೆ ಕಟಿಬದ್ಧರಾಗಬೇಕು ಎಂಬ ಸಂಕಲ್ಪ ಮಾಡಿಸಿ. ಮೋದಿ ಪ್ರಧಾನಮಂತ್ರಿ ಆದರೆ ಮಾತ್ರ ಸನಾತನ ಧರ್ಮ ಉಳಿಯಲು ಮತ್ತು ಮುಂದಿನ ಪಿಳಿಗಿಗೆ ಹಿಂದೂಗಳು ತಲೆ ಎತ್ತಿ ಓಡಾಡಲು ಸಾಧ್ಯ ಎಂದು ಹೇಳಿದ್ದಾರೆ.

•ಮನೆ ಮನೆಗಳಿಗೆ ಮನೆಯಲ್ಲಿರುವ ಮನಸ್ಸುಗಳಿಗೆ ಮುಟ್ಟುವ ರೀತಿಯಲ್ಲಿ ಮನೆ ಮನೆ ಸಂಪರ್ಕ ಮಾಡಿ ಜಾಗೃತಿ ಮಾಡಲಾಗುವುದು ಎಂದು ಕಾರ್ಯಕರ್ತರು ತಿಳಿಸಿದ್ದಾರೆ.

•ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣ ಮಾಡಿದವರ ಪರ ನಮ್ಮ ಬೆಂಬಲ ಎಂಬ ಸ್ಟಿಕರ್ ಮನೆ ಮನೆ ಬಾಗಿಲಿಗೆ ಅಂಟಿಸಲಾಗುವುದು ಎಂದು ಇದೆ ಸಮಯದಲ್ಲಿ ತಿಳಿಸಿದ್ದಾರೆ.

ದೇಶದ ಭದ್ರತೆ, ಹೆಣ್ಣುಮಕ್ಕಳ ಸುರಕ್ಷತೆ, ರೈತರ ಸ್ವಾಲಂಬಿ ಜೀವನಕ್ಕೆ, ದೇಶ ವಿಶ್ವಗುರು ಕಲ್ಪನೆ, ಭಾರತ ವಿಶ್ವದ ಅತಿ ದೊಡ್ಡ ಆರ್ಥಿಕತೆಯ ದೇಶ ಆಗಬೇಕು ಎಂಬ ಶ್ರೇಷ್ಠವಾದ ಕಲ್ಪನೆ ಇಟ್ಟುಕೊಂಡು ಮತದಾನ ಜಾಗೃತಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *