ಬೇಲೂರು : ಏಪ್ರಿಲ್. ೮ಕೇಶವನ ಜಾತ್ರಾ ಮಹೋತ್ಸವ – ಖಜಾನೆಯಿಂದ ಆಭರಣ ದೇಗುಲಕ್ಕೆ – ಪರಿಶೀಲನೆ :-ಐತಿಹಾಸಿಕ ಪ್ರಸಿದ್ಧ ಹೊಯ್ಸಳ ನಾಡು ಎಂದೇ ಖ್ಯಾತಿ ಹೊಂದಿರುವ ಬೇಲೂರು ಚನ್ನಕೇಶವಸ್ವಾಮಿ ಬ್ರಹ್ಮ ರಥೋತ್ಸವ, ನಾಡ ರಥೋತ್ಸವ ಅಂಗವಾಗಿ ಸೋಮವಾರ ಖಜಾನೆಯ ಭದ್ರತೆಯಲ್ಲಿದ್ದ ಚನ್ನಕೇಶವಸ್ವಾಮಿ ಮತ್ತು ಸೌಮ್ಯನಾಯಕಿ ಹಾಗೂ ರಂಗನಾಯಕಿ ಅವರ ಆಭರಣಗಳು ವಿಶೇಷ ಪೂಜೆ ಸಲ್ಲಿಸಿ ಪೋಲಿಸ್ ಭದ್ರತೆಯೊಂದಿಗೆ ದೇಗುಲಕ್ಕೆ ಮೆರವಣಿಗೆ ಮೂಲಕ ತರಲಾಯಿತು.

ಪಲ್ಲಕ್ಕಿ ಮೂಲಕ ದೇಗುಲಕ್ಕೆ ಬಂದ ಆಭರಣಗಳನ್ನು ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ನಾರಾಯಣಸ್ವಾಮಿ ‌ಮತ್ತು ದೇಗುಲದ ಕಾರ್ಯಾನಿರ್ವಾಹಕ ಅಧಿಕಾರಿ ಯೋಗೀಶ್, ಪ್ರಧಾನ ಅರ್ಚಕರಾದ ಶ್ರೀನಿವಾಸಸ್ವಾಮಿ‌ಭಟ್ಟರ್, ನರಸಿಂಹಭಟ್ಟರ್ ಸಮ್ಮುಖದಲ್ಲಿ ಆಭರಣಗಳನ್ನು ಪರಿಶೀಲನೆ ನಡೆಸಿ ದೇವರಿಗೆ ಧರಿಸಲು ಅರ್ಚರಿಗೆ ನೀಡಲಾಯಿತು.

ದಕ್ಷಿಣ ಭಾರತದಲ್ಲಿ ಭಕ್ತರ ಪಾಲಿನ ವೈಕುಂಠ ಎಂದೇ ಹೆಸರು ಪಡೆದ ಬೇಲೂರು ಚನ್ನಕೇಶವಸ್ವಾಮಿ ಬ್ರಹ್ಮ ರಥೋತ್ಸವಕ್ಕೆ ಶತ ಶತಮಾನಗಳ ಐತಿಹಾಸಿಕ ಉಲ್ಲೇಖವಿದೆ. ಪ್ರತಿ ವರ್ಷ ಯುಗಾದಿ ಹಬ್ಬದಿಂದ ಆರಂಭವಾಗು ಚನ್ನಕೇಶವಸ್ವಾಮಿ ರಥೋತ್ಸವ ೧೫ ದಿನಗಳ ಅದ್ದೂರಿಯಿಂದ ನಡೆಸಿಕೊಂಡು ಬರುತ್ತಿದ್ದಾರೆ.‌

ಬೇಲೂರು ಶಿಲ್ಪಕಲೆಗಳ‌ ನಾಡು. ಇಲ್ಲಿನ ಶಿಲ್ಪ ವೈಭವ ವೀಕ್ಷಿಸಿಸಲು ದೇಶ- ವಿದೇಶದಿಂದ ಪ್ರವಾಸಿಗರು ಬರುತ್ತಾರೆ. ಅಂತಯೇ ಚನ್ನಕೇಶವಸ್ವಾಮಿಗೆ ರಾಜ್ಯ ಅಂತರಾಜ್ಯದಲ್ಲಿ ಭಕ್ತರು ಇದ್ದು, ಪ್ರತಿ ವರ್ಷ ನಡೆಯುವ ಬ್ರಹ್ಮ ರಥೋತ್ಸವಕ್ಕೆ ಬರುವ ವಾಡಿಕೆ ಇದೆ.

ಚನ್ನಕೇಶವ ಜಾತ್ರೆಯಲ್ಲಿ ಹನುಮಂತೋತ್ಸವ, ದಿವ್ಯ ಗರುಡೋತ್ಸವ, ಬ್ರಹ್ಮ ರಥೋತ್ಸವ, ನಾಡ ರಥೋತ್ಸವ ಪ್ರಮುಖ ಉತ್ಸವಗಳಲ್ಲಿ ಲಕ್ಷಾಂತರ ಭಕ್ತರು ಕೇಶವನ ದರ್ಶನ ಪಡೆದು ಧನ್ಯರಾಗುತ್ತಾರೆ.

ಯುಗಾದಿ ಮುನ್ನ ದಿನವೇ ಖಜಾನೆಯಲ್ಲಿನ ಕೇಶವನ ಒಡವೆಗಳನ್ನು ಪೋಲಿಸ್ ಬಿಗಿ ಭದ್ರತೆಯೊಂದಿಗೆ ದೇಗುಲದ ಕಚೇರಿ ತಂದು ಚನ್ನಕೇಶವಸ್ವಾಮಿ, ಸೌಮ್ಯನಾಯಕಿ, ರಂಗನಾಯಕಿ ಅಮ್ಮನವರ ಒಡವೆಗಳನ್ನು ಪರಿಶೀಲನೆ ನಡೆಸಿ, ಯುಗಾದಿ ಹಬ್ಬದ ದಿನ ಕೇಶವನ ಧರಿಸಲು ಪ್ರಧಾನ ಅರ್ಚಕರಿಗೆ ಹಸ್ತಾಂತರ ಮಾಡಲಾಯಿತು.

ಈ‌ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ಡಾ.ನಾರಾಯಣಸ್ವಾಮಿ, ಪ್ರತಿ ವರ್ಷ ನಡೆಯುವ. ಚನ್ನಕೇಶವ ಜಾತ್ರಾ ಮಹೋತ್ಸವ ಅಂಗವಾಗಿ ಖಜಾನೆಯಲ್ಲಿನ ಆಭರಣಗಳನ್ನು ದೇಗುಲಕ್ಕೆ ತಂದು ಇಂದು ಪರಿಶೀಲನೆ ‌ನಡೆಸಲಾಗಿದೆ. ಪ್ರತಿ ಆಭರಣಗಳನ್ನು ‌ಖಾತ್ರಿ ಪಡೆಯಲಾಗಿದೆ. ಯುಗಾದಿ ಹಬ್ಬದ ದಿನದಿಂದ ಏಪ್ರಿಲ್ ೨೬ ರ ತನಕ ಸ್ವಾಮಿಗೆ ಆಭರಣಗಳನ್ನು ಧರಿಸಲಾಗುತ್ತದೆ ಎಂದ ಅವರು ಜಾತ್ರಾ ಮಹೋತ್ಸವದಲ್ಲಿ ಅತಿ ಹೆಚ್ಚು ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಲು ದೇಗುಲ ಆಡಳಿತ ಸಕಲ ವ್ಯವಸ್ಥೆ ಮಾಡಿದೆ‌ ಎಂದರು.

ದೇಗುಲ ಪ್ರಧಾನ ಅರ್ಚಕ ಶ್ರೀನಿವಾಸ ಭಟ್ ಮಾತನಾಡಿ, ಚಂದ್ರಮಾನ ಯುಗಾದಿ ದಿನದಿಂದ ಆರಂಭವಾಗುವ ಬೇಲೂರು ಚನ್ನಕೇಶವಸ್ವಾಮಿ ಜಾತ್ರೆಗೆ ನಾಳೆಯಿಂದಲೇ ವಿವಿಧ ಅಭಿಷೇಕ ಮಾಡಿ ಉತ್ಸವಗಳಿಗೆ ಚಾಲನೆ ನೀಡಲಾಗುತ್ತದೆ.ಏಪ್ರಿಲ್ ೧೨ ರಿಂದ ೨೬ ತನಕ ವಿವಿಧ ವೈವಿಧ್ಯಮಯ ಉತ್ಸವಗಳು ಭಕ್ತರ ಸಹಕಾರದಿಂದ ‌ನಡೆಲಾಗುತ್ತದೆ ಎಂದು ತಿಳಿಸಿದರು.

ಈ‌ ಸಂದರ್ಭದಲ್ಲಿ ಚನ್ನಕೇಶವಸ್ವಾಮಿ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವಿಜಯಲಕ್ಷ್ಮಿ, ಸುಧಾ, ರವೀಂದ್ರ, ರವಿಶಂಕರ್, ಪ್ರಮೋದ್ ಮತ್ತು ಅಡ್ಡೆಗಾರರಾದ ಶ್ರೀನಿವಾಸ, ವೆಂಕಟೇಶ್, ದೇವರಾಜ್ ಇನ್ನೂ ಮುಂತಾದವರು ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *