ಮುಖ್ಯರಸ್ತೆಯಲ್ಲೆ ಒಂಟಿ ಕಾಡಾನೆ ರಾತ್ರಿ ಸಂಚಾರ ಅರೇಹಳ್ಳಿ.

ಬೇಲೂರು : ತಾಲೂಕು ಅರೇಹಳ್ಳಿಯ ಚೀಕನಹಳ್ಳಿ ಮುಖ್ಯರಸ್ತೆಯಲ್ಲಿ ಒಂಟಿ ಕಾಡಾನೆಯೊಂದು ಭಾನುವಾರ ರಾತ್ರಿ ೧೦.೩೦ ರ ಸಮಯದಲ್ಲಿ ರಾತ್ರಿ ಸಂಚಾರ ಮಾಡಿ ಜನಸಾಮಾನ್ಯರನ್ನು ಭಯಭೀತರನ್ನಾಗಿ ಮಾಡಿದ ಘಟನೆ ಜರುಗಿದೆ.

ನಾಯಿಗಳು ಬೊಗಳುವ ಸದ್ದು ಕೇಳಿದ ನಿವಾಸಿಗಳು ಹೊರಬಂದು ನೋಡಿದರೆ ದೈತ್ಯಾಕಾರದ ಆನೆಯನ್ನು ಕಂಡು ಅಕ್ಷರಶಃ ಹೌಹಾರಿದ್ದಾರೆ. ನೇರವಾಗಿ ಹೋಗುತ್ತಿದ್ದ ಕಾಡಾನೆ ನಾಯಿಗಳು ಬೊಗಳುವ ಶಬ್ದಕ್ಕೆ ಸಿಟ್ಟಿಗೆದ್ದು ಘೀಳಿಡುತ್ತಾ ಹಿಂತಿರುಗಿ ಬಂದು ನಾಯಿಗಳನ್ನು ಅಟ್ಟಾಡಿಸಿದ ವಿಡಿಯೋ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಅರೇಹಳ್ಳಿ ಹಾಗೂ ಬಿಕ್ಕೋಡು ಹೋಬಳಿಯಾದ್ಯಂತ ನಿರಂತರವಾಗಿ ಕಾಡಾನೆಗಳು ಹಗಲು ರಾತ್ರಿಯೆನ್ನದೇ ತಿರುಗಾಡುತ್ತಿರುವುದರಿಂದ ಸಾರ್ವಜನಿಕರು ಜೀವಭಯದಲ್ಲಿಯೆ ಬದುಕು ಸಾಗಿಸುತ್ತಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *