
ಸಕಲೇಶಪುರ : ಮನೆಯ ಪ್ಯಾಸೆಜ್ ನಲ್ಲಿ ಇರಿಸಲಾಗಿದ್ದ ಅಡಿಗೆ ಸಿಲಿಂಡರ್ ಗೆ ಆಕಸ್ಮಿಕವಾಗಿ ಬೆಂಕಿ, ಮಲ್ಲಿಕಾರ್ಜುನ ಬಡಾವಣೆಯ ವಕೀಲ ಅಕ್ರಂ ಎಂಬುವವರ ಮನೆಯಲ್ಲಿ ಘಟನೆ.
ಪಟ್ಟಣದ ಮಲ್ಲಿಕಾರ್ಜುನ ಬಡಾವಣೆಯ ವಕೀಲರಾದ ಅಕ್ರಂ ಎಂಬುವವರ ಮನೆಯ ಪ್ಯಾಸೆಜ್ ನಲ್ಲಿ ಇಡಲಾಗಿದ್ದ ಅಡಿಗೆ ಅನಿಲದ ಸಿಲಿಂಡರ್ ಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ರಬಸವಾಗಿ ಹೊತ್ತಿ ಉರಿದಿದೆ ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ಆರಿಸುವಲ್ಲಿ ಯಶಸ್ವಿಯಾದ ಪರಿಣಾಮ ಹೆಚ್ಚಿನ ಅನಾಹುತ ಆಗುವುದು ತಪ್ಪಿದಂತಾಗಿದೆ.
ಈ ಸಂದರ್ಭದಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ರಾಜು ಹಾಗೂ ಇತರ ಸಿಬ್ಬಂದಿಗಳು ಇದ್ದರು.




