
ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ಕಡೇಗರ್ಜೆ ಗ್ರಾಮದ ಹತ್ತಿರ ಕಾಣಿಸಿಕೊಂಡ ಕಾಡಾನೆಗಳ ಹಿಂಡು ಕಾಡಾನೆಗಳ ಕಾದಾಟ ಕಂಡು ಬೆಚ್ಚಿಬಿದ್ದ ಗ್ರಾಮಸ್ಥರು.
ಮನೆ ಮೇಲೆ ನಿಂತು ವಿಡಿಯೋ ಸೆರೆ ಹಿಡಿದ ಗ್ರಾಮಸ್ಥರು.
ಬೆಳ್ಳಂಬೆಳಿಗ್ಗೆ ಕಾಡಾನೆಗಳ ಕದನ
ಕಾಡಾನೆಗಳ ಕಾದಾಟಕ್ಕೆ ಚಂದ್ರು ರವರ ಜಮೀನಲ್ಲಿ ಅಡಿಕೆ ಬೆಳೆ ಹಾನಿ.,ನಾವು ಬೆಳಿಗಿನ ಸಮಯ ನಮ್ಮ ಜಮೀನಲ್ಲಿ ಅಡಿಕೆ ಬೆಳೆಗಳ ನಿರ್ವಹಣೆ ಕೆಲಸ ಮಾಡುವ ಸಂದರ್ಬದಲ್ಲಿ ಎರಡು ಕಾಡನೆಗಳು ಏಕಾಏಕಿ ಜಮೀನ ಹತ್ತಿರ ಬರುತ್ತಿದ್ದಂತೆ ಕಾದಟಕ್ಕೆ ನಿಂತಿದೆ ನಾವು ಅಲ್ಲಿಂದ ಜೀವ ಉಳಿಸಲು ಹರಸಾಹಸಪಟ್ಟು ಹತ್ತಿರದ ಮನೆಯೊಳಗೆ ಒಡಿ ಹೋಗಿದ್ದೇವೆ.
ಕಾಡಾನೆಗಳ ಕಾದಾಟದಿಂದ ನಮ್ಮ ಜಮೀನಲ್ಲಿ ಬೆಳೆದಿದ್ದ ಅಡಿಕೆ ಬೆಳೆಗಳ ಹಾನಿಯಾಗಿದೆ ಅರಣ್ಯ ಇಲಾಖೆಯವರು ಪರಿಹಾರ ಒದಗಿಸಬೇಕು ಎಂದು ಜಮೀನಿನ ಮಾಲೀಕರಾದ ಚಂದ್ರು ಹೇಳಿದರು.




