
ಬೇಲೂರು : ದೇಶದೆಲ್ಲೆಡೆ ಬುಧವಾರ ಚಂದ್ರ ದರ್ಶನವಾದ ಹಿನ್ನೆಲೆ. ಬೇಲೂರು ಕೇಂದ್ರ ಜಾಮಿಯ ಮಸೀದಿಯ ಗುರುಗಳಾದ ಸೈಯದ್ ಅಹ್ಮದ್ ಅಶ್ರಫಿ ರವರು ಗುರುವಾರ ಈದುಲ್ ಫಿತರ್ ಆಚರಿಸಲಾಗುವುದು ಎಂದು ಘೋಷಿಸಿದರು.
ಇಂದು ರಾಜ್ಯದಂತ್ಯ ರಂಜಾನ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು .
ಒಂದು ತಿಂಗಳು ಉಪವಾಸ ತೊರೆದ ಮುಸ್ಲಿಮರು ಇಂದು ಬೆಳಗ್ಗೆ ಗೆಂಡೆಹಳ್ಳಿ ರಸ್ತೆಯಲ್ಲಿರುವ ಈದ್ಗಾ ಮೈದಾನಕ್ಕೆ ತೆರಳಿ ಶ್ರದ್ಧಾ ಭಕ್ತಿಯಿಂದ ಸಾಮೂಹಿಕ ನಮಾಜ ಸಲ್ಲಿಸಿದರು.
ಮಕ್ಕಳು ಹಿರಿಯರು ಹೊಸ ಬಟ್ಟೆ ಧರಿಸಿ ಸಿಹಿ ಹಂಚಿ ಶುಭ ಕೋರಿ ಹಸ್ತ ವಿನಿಮಯ ಮಾಡಿಕೊಂಡರು..
ಈ ಸಂದರ್ಭದಲ್ಲಿ ಮಾತನಾಡಿದ ಸಾಮಾಜಿಕ ಹೋರಾಟಗಾರ ನೂರ್ ಅಹಮದ್. ಅಲ್ಲಾಹು ನಮ್ಮ ಉಪವಾಸ ಪ್ರಾರ್ಥನೆ ಮತ್ತು ಸತ್ಕರ್ಮಗಳನ್ನು ಸ್ವೀಕರಿಸಲಿ ಉತ್ತಮ ಆರೋಗ್ಯದೊಂದಿಗೆ ಇನ್ನಷ್ಟು ರಂಜಾನ್ ತಿಂಗಳನ್ನು ಸ್ವಾಗತಿಸಲು ನಮ್ಮನ್ನು ಅನುಗ್ರಹಿಸಲಿ.
ಪವಿತ್ರ ರಂಜಾನ್ ಹಬ್ಬವು ಕೇವಲ ಹೊಸ ಬಟ್ಟೆ ಸಂಭ್ರಮಾಚರಣೆ ಸೀಮಿತವಾಗದೆ ಪ್ರವಾದಿ ಮೊಹಮ್ಮದ್ ಪೈಗಂಬರ್ (ಸ ) ರವರ ಆದೇಶದಂತೆ ಬಡವರ ಪಾಲಿನ ಜಕಾತ್ ನೀಡಿ ಬಡವರಿಗೆ ನೆರವಾಗುವುದು ಅವರು ಸಹ ನಮ್ಮಂತೆಯೇ. ಸಮಾನವಾಗಿ ನಮ್ಮ ಜೊತೆಗೆ ಹಬ್ಬ ಆಚರಣೆ ಮಾಡುವುದೇ ನಿಜವಾದ ರಂಜಾನ್ ಹಬ್ಬ ಎಂದರು.
ಸಂದರ್ಭದಲ್ಲಿ ಬೇಲೂರು ತಾಲೂಕಿನ ಎಲ್ಲಾ ಮಸೀದಿಯ. ಗುರುಗಳು ಪದಾಧಿಕಾರಿಗಳು. ಹಾಗೂ ಸಾವಿರಾರು ಭಕ್ತಾದಿಗಳು ಹಾಜರಿದ್ದರು. ಮತ್ತು ಯಾವುದೇ ರೀತಿಯ ಅಹಿಂತಕರ ಘಟನೆ ನಡೆಯದಂತೆ. ಬೇಲೂರು ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಸುಬ್ರಮಣ್ಯ ರವರ ನೇತೃತ್ವದಲ್ಲಿ. ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು

