ಹಾಸನ: ಕಳೆದ ೨೦ ವರ್ಷಗಳಿಂದ ದೇಶದ ಗಡಿ ಕಾದು ಉತ್ತಮ ಸೇವೆ ಸಲ್ಲಿಸಿ ನಿವೃತ್ತರಾಗಿ ತಮ್ಮ ತವರಿಗೆ ಮರಳಿದ ಯೋಧನಿಗೆ ಹಾಸನ ನಗರದ ಡೈರಿ ವೃತ್ತದಲ್ಲಿ ಅದ್ಧೂರಿ ಸ್ವಾಗತ ನೀಡಿ ಪಟಾಕಿ ಸಿಡಿಸಿ ಹೂವಿನ ಹಾರ ಹಾಕಿ, ಪೇಟ ತೊಡಿಸಿ ಬರಮಾಡಿಕೊಂಡರು.

ನಂತರ ಮೆರವಣಿಗೆ ಮೂಲಕ ಕರೆದೊಯ್ಯಲಾಯಿತು.

ಯೋಧ ಟಿ.ಜಿ. ಜಗದೀಶ್ ಅವರು ಅರಸೀಕೆರೆ ರಸ್ತೆ ಬಿ. ಕಾಟೀಹಳ್ಳಿ ನಿವಾಸಿಯಾಗಿದ್ದು, ಇವರ ತಂದೆ ಗುಂಡೇಗೌಡ ಮತ್ತು ತಾಯಿ ಜಯಮ್ಮ ಇಬ್ಬರೂ ಸಾವನಪ್ಪಿದ್ದು, ಇವರ ಮೂವರು ಮಕ್ಕಳಲ್ಲಿ ಓರ್ವ ಜಗದೀಶ್ ಎಂಬುವರೆ ಯೋಧರಾಗಿ ೨೦ ವರ್ಷಗಳ ಕಾಲ ಸುಧೀರ್ಘ ಸೇವೆ ಸಲ್ಲಿಸಿ ಯಶಸ್ವಿಯಾಗಿ ವಾಪಸ್ ಬಂದಿದ್ದಾರೆ. ಇವರ ಪತ್ನಿ ಸವಿತಾ ಹಾಗೂ ಇವರಿಗೆ ಇಬ್ಬರೂ ಮಕ್ಕಳಿದ್ದಾರೆ.

ಈ ಸಂದರ್ಭದಲ್ಲಿ ಕುಟುಂಬದ ಸದಸ್ಯರ ಹಾಗೂ ನಿವೃತ್ತ ಸೈನಿಕರ ಸಂಘದ ಪದಾಧಿಕಾರಿಗಳು ಹಾಜರಿದ್ದು ದೇಶ ಸೇವೆ ಮಾಡಿದ ಸೈನಿಕರ ಜೊತೆ ಕುಟುಂಬ ಸದಸ್ಯರಿಗೂ ಅಭಿನಂದನೆ ಸಲ್ಲು ಸಲ್ಲಿಸುವ ಮೂಲಕ ಅವರ ಸೇವೆಯನ್ನು ಸ್ಮರಿಸಿದ್ದರು

ನಂತರ ಮಾಧ್ಯಮದೊಂದಿಗೆ ಮಾತನಾಡಿ, ೨೦೦೪ ರಲ್ಲಿ ಹಾಸನದಲ್ಲೆ ಆರ್ಮಿ ಸೆಲೆಕ್ಷನೆ ಆಗಿದ್ದು, ೨೦೦೫-೦೬ ರಲ್ಲಿ ತರಬೇತಿ ಪಡೆದ ನಂತರ ೨೦೦೬ ರಲ್ಲಿ ಮೊದಲು ಜಮ್ಮುವಿಗೆ ಮೊದಲ ಕರ್ತವ್ಯಕ್ಕೆ ಹಾಜರಾಗಿದ್ದು, ನಂತರ ಅಸ್ಸಾಂ, ದೆಹಲಿಯಲ್ಲಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿ, ಲೇಲಡಕ್, ಲೆಸೇರಾ ನಂತರ ಜೋತುಪುರಿಗೆ ಬಂದಿದ್ದು, ನಂತರದಲ್ಲಿ ಬೆಂಗಳೂರು ತರಬೇತಿಯಲ್ಲಿ ನನಗೆ ಎರಡಯ ವರ್ಷ ಸರ್ವಿಸ್ ಮಾಡಲು ಜಾಗ ಸಿಕ್ಕಿತು ಎಂದರು.

ಇದಾದ ಬಳಿಕ ಸಿಕ್ಕಿಂನ ಚೈನ ಬಾರ್ಡರ್ ಗೆ ಹಾಕಿದರು. ಇಲ್ಲಿ ತುಂಬ ಕೋಲ್ಡ್ ಆಗಿದ್ದು, ಆದ್ರೂ ನಮ್ಮ ದೇಶದ ಸೇವೆಗಾಗಿ ಸಾಧವಾದಷ್ಟು ಕೆಲಸ ಮಾಡಿದೆ. ಇಲ್ಲಿ ಮುಗಿಸಿಕೊಂಡು ಹಿಮಾಚಲ ಪ್ರದೇಶಕ್ಕೆ ಹೋಗಿದ್ದೇವು. ಇಲ್ಲಿ ಕೊನೆಯ ಎರಡು ವರ್ಷಗಳ ಕಾಲ ಸರ್ವಿಸ್ ಮುಗಿಸಿ ತವರು ಮನೆಗೆ ವಾಪಸ್ ಹಿಂದುರಿಗಿ ಬಂದಿರುವುದು ಬಹಳ ಸಂತೋಷವಾಗಿದೆ. ಕಳೆದ ೨೦ ವರ್ಷಗಳ ಕಾಲ ಭಾರತ ಮಾತೆ ಸೇವೆ ಮಾಡಿದ್ದು, ಈಗ ಕನ್ನಡ ತಾಯಿ ಸೇವೆ ಮಾಡಲು ಅವಕಾಶ ಕೊಟ್ಟಿರುವುದು ನನಗೆ ಸಂತೋಷ ತಂದಿದೆ ಎಂದು ಹೇಳಿದರು.

ನನ್ನ ಸೇವಾವಧಿಯಲ್ಲಿ ಮರೆಯಲಾಗದ ಘಟನೆ ಎಂದರೇ ಸಿಕ್ಕಿಂನಲ್ಲಿ ಐಸ್ ಕ್ಲಿಯೆರೆನ್ಸ್ ಎಂದು ರಸ್ತೆಗೆ ಹೋಗುತ್ತಿದ್ದು, ಚೈನ ಬಾರ್ಡರ್ ಗೆ ವಸ್ತುಗಳ ಸಾಗಿಸಬೇಕಾಗಿತ್ತು. ಈವೇಳೆ ಒಂದು ದಿವಸ ನಾವು ಮತ್ತು ನಮ್ಮ ಅಧಿಕಾರಿಗಳೆಲ್ಲಾ ಜೆಸಿಬಿ ಮೂಲಕ ನಿಂತುಕೊಂಡು ಐಸ್ ಕ್ಲಿಯೆರೆನ್ಸ್ ಮಾಡಲಾಗುತ್ತಿದ್ದು, ನಮ್ಮ ದುರದೃಷ್ಟವಶ ಸಮಯ ಚನ್ನಾಗಿರಲಿಲ್ಲ. ಮೇಲಿಂದ ಒಂದುವರೆ ಕಿಲೋ ಮಿಟರ್ ಐಸ್ ಕೆಳಗೆ ಕುಸಿದು ನಮ್ಮ ಅಧಿಕಾರಿಗಳು ಸಾವನಪ್ಪಿದರು. ಆದರೇ ನಮ್ಮ ಅದೃಷ್ಟ ಚನ್ನಾಗಿತ್ತು. ೧೧ ಜನ ಕುತ್ತಿಗೆವರೆಗೂ ಐಸಿನಲ್ಲಿ ಕುಳಿತುಕೊಳ್ಳಬೇಕಾಯಿತು. ಹೊರಗಡೆಯವರು ನಮ್ಮನ್ನೆಲ್ಲಾ ಬಚಾವ್ ಮಾಡಿದರು.

ರಾತ್ರಿ ೧೦:೩೦ ರಲ್ಲಿ ಹುಡುಕಿ ತೆಗೆಯಲಾಯಿತು. ಆದರೇ ನಮ್ಮ ಅಧಿಕಾರಿಗಳು ಅಷ್ಟರೊಳಗೆ ದೇವರ ಪಾದ ಸೇರಿದ್ದರು. ಲೆಪ್ಟೆಂಡ್ ಕರ್ನಲ್ ನಮ್ಮ ಬೆಸ್ಟ್ ಆಫೀಸರ್ ಸಾವು ನಮಗೆ ಮರೆಯಲಾಗದ ಸಂಗತಿ ಎಂದು ಇದೆ ವೇಳೆ ಹಳೆ ನೆನಪನ್ನು ಮೆಲುಕು ಹಾಕಿ ಕಣ್ಣಿರು ಹಾಕಿದ ಪ್ರಸಂಗ ನಡೆಯಿತು.

ಮುಂದೆ ಸರಕಾರಿ ಕೆಲಸಕ್ಕೆ ಅರ್ಜಿ ಹಾಕುತ್ತೇನೆ. ಕೆಲಸ ಸಿಕ್ಕಿದರೇ ಮಾಡುವೆ. ಇಲ್ಲವಾದರೇ ನಿಯತ್ತಾಗಿ ಯಾವ ಕೆಲಸ ಮಾಡಬಹುದು ಬ್ಯಸ್ನೆಸ್ ಮಾಡಲಾಗುವುದು. ನನ್ನ ತಂದೆ ಗುಂಡೇಗೌಡ ಅವರಿಗೆ ಸರಕಾರಿ ಕೆಲಸವನ್ನು ನಮ್ಮ ಮಕ್ಕಳು ಯಾರಾದರೂ ಮಾಡಬೇಕು ಎನ್ನುವ ಆಸೆಯಿತ್ತು. ಅವರ ಆಸೆ ಈಡೇರಿಸಲು ಆರ್ಮಿ ಸೇರಿದೆ. ಜೊತೆಗೆ ನಮ್ಮ ಇಬ್ಬರೂ ಸಹೋಧರರು ಸಹಕಾರ ನೀಡಿದ್ದು, ನನ್ನ ಬಾಲ್ಯ ಸ್ನೇಹಿತ ನಂದೀಶ್ ಅವರೆ ಆಇ ಸೇರಲು ಸ್ಪೂರ್ತಿ ನೀಡಿದ್ದಾರೆ ಎಂದು ಇದೆ ವೇಳೆ ಸ್ಮರಿಸಿದರು.

ಮೆರೆವಣಿಗೆಯಲ್ಲಿ ಸೈನಿಕ ನಿವೃತ್ತ ಸಂಘದ ಅಧ್ಯಕ್ಷ ವೆಂಕಟೇಶ್, ಸಂಚಾಲಕರು ರಮೇಶ್, ನಿರ್ದೇಶಕ ಎಸ್.ಕೆ. ಮಂಜೇಗೌಡ, ಚಂದ್ರಶೇಖರ, ಸಹ ಕಾರ್ಯದರ್ಶಿ ಚಂದ್ರೇಗೌಡ ಉಪಾಧ್ಯಕ್ಷ ಗೋವಿಂದೇಗೌಡ, ಸೈನಿಕ ಜಗದೀಶ್ ಅವರ ಸಹೋಧರರಾದ ಮೋಹನ್ ಕುಮಾರ್, ಪಾಂಡುರಂಗ, ನಂದೀಶ್, ರವಿ, ಅಶೋಕ್, ಕುಮಾರ್, ರಾಜೇಗೌಡ ಇತರರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *