
ಸಕಲೇಶಪುರ : ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 12 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರ ಆರಂಬಿಸಿರುವ ಕಾಂಗ್ರೆಸ್ ಪಕ್ಷ ಇಂದು ಬಾಳ್ಳುಪೇಟೆ ಸರ್ಕಲ್ ನಲ್ಲಿ ಸಬೆ ನಡೆಸುವ ಮೂಲಕ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಿದ ಶ್ರೇಯಸ್ ನುಡಿದಂತೆ ನಮ್ಮ ಸರ್ಕಾರಕ್ಕೆ ಮತ ನೀಡುವ ಮೂಲಕ ನನ್ನನ್ನು ಈ ಬಾರಿ ಹಾಸನ ಜಿಲ್ಲೆಯ ಸಂಸದನ್ನಾಗಿ ಮಾಡುವ ಮೂಲಕ ತಮ್ಮ ಸೇವೆಯನ್ನು ಮಾಡಲು ಅವಕಾಶ ನೀಡಬೇಕು ಎಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ದಿ.ಪುಟ್ಟಸ್ವಾಮಿ ಗೌಡರ ಸೊಸೆ ಶ್ರೇಯಸ್ ಪಟೆಲ್ ಅವರ ತಾಯಿ ಅನುಪಮ, ಕಾಂಗ್ರೆಸ್ ಮುಖಂಡ ಮುರುಳಿ ಮೋಹನ್,ಕಾಂಗ್ರೆಸ್ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಬೈರಮುಡಿ ಚಂದ್ರು, ಮುಖಂಡರಾದ ಡಿಸಿ.ಸಣ್ಣಸ್ವಾಮಿ, ಬಾಚಹಳ್ಳಿ ಪ್ರತಾಪ್ ಗೌಡ, ಹೆಚ್.ಹೆಚ್.ಉದಯ, ಎಸ್ಸಿ,ಎಸ್ಟಿ ಘಟಕದ ಅದ್ಯಕ್ಷ ಪ್ರಶಾಂತ್, ಗೌರಮ್ಮ, ಇತರರು ಇದ್ದರು.



