
ಅರೇಹಳ್ಳಿ : ಗುರುವಾರ ರಾತ್ರಿ ಸರಿ ಸುಮಾರು 10.30 ರ ಸಮಯದಲ್ಲಿ ಅರೇಹಳ್ಳಿ ಪಟ್ಟಣದಿಂದ ವಿದ್ಯುತ್ ಸರಬರಾಜು ಆಗುವಂತಹ ಹಸಿರುಗುಡ್ಡ,ವಾಟೆಹಳ್ಳಿ,ಉತ್ತೋಳಲು,ಸುತ್ತ ಮುತ್ತ ಹಾಗು ಹುಲ್ಲಮಕ್ಕಿ ಗ್ರಾಮಗಳಿಗೆ ವಿದ್ಯುತ್ ಕಡಿತವಾಗಿದೆ ಎಂದು ಗ್ರಾಹಕರ ದೂರಿನ ಮೇರೆಗೆ ಮಾರ್ಗದಾಳು ಲಕ್ಷ್ಮಣ್ ರವರು ದುರಸ್ತಿ ಕಾರ್ಯಕ್ಕಾಗಿ ತೆರಳಲು ತಯಾರಾದರು.
ರಾತ್ರಿ ಸಮಯ ಕಾಡಾನೆಗಳ ಹಾವಳಿ ಹೆಚ್ಚಿರುವುದರಿಂದ ಮಾರ್ಗೋಪಾಯಕ್ಕಾಗಿ ಮಾರ್ಗದಾಳು ಲಕ್ಷ್ಮಣರವರು ಅವರಿಗೆ ಪರಿಚಿತರಾದ ವಿಜಯ್ ಅವರಿಗೆ ತಿಳಿಸಿದ್ದರಿಂದ ಸ್ವತ ಅವರೂ ಕೂಡ ಜೊತೆಗೆ ತೆರಳಿದ್ದಾರೆ.
ಆ ವೇಳೆ ವಿದ್ಯುತ್ ಕಡಿತವಾಗಲು ದೋಷವನ್ನು ಪರಿಶೀಲಿಸುವಾಗ ಹುಲ್ಲೇಮಕ್ಕಿ ಗ್ರಾಮದ ನಂದಿವನ ಎಸ್ಟೇಟಿನ ಹತ್ತಿರ ಕಾಡಾನೆಗಳು ಮರವನ್ನು ವಿದ್ಯುತ್ ಕಂಬದ ಮೇಲೆ ಉರುಳಿಸಿ ತಂತಿ ತುಂಡಾದ ಪರಿಣಾಮ ವಿದ್ಯುತ್ ಕಡಿತ ಗೊಂಡಿದೆ ಎಂದು ತಿಳಿಯಿತು.
ಅದಕ್ಕಾಗಿ ಸ್ಥಳೀಯ ತೋಟದ ಮಾಲೀಕರಾದ ಯೂನಸ್ ರವರ ಸಹಾಯದಿಂದ ದೋಷಪೂರಿತ ಟ್ರಾನ್ಸ್ ಫಾರ್ಮರ್ ಹತ್ತಿರ ದುರಸ್ತಿಗಾಗಿ ಹೋಗುವಷ್ಟರಲ್ಲಿ ಎರಡು ಕಾಡಾನೆಗಳು ಪ್ರತ್ಯಕ್ಷವಾಗಿದ್ದು ನಾವುಗಳು ಒಂದು ಕ್ಷಣ ದಿಗ್ಬ್ರಾಂತಗೊಂಡು ಅಲ್ಲಿಂದ ವಾಪಸಾದೆವು..
ಒಂದು ವೇಳೆ ಗ್ರಾಹಕರ ಫೋನಿನ ಒತ್ತಡದಿಂದ ಮಾರ್ಗದಾಳು ಒಬ್ಬರೇ ಬಂದಿದ್ದರೆ..ಇನ್ನೂ ಹೆಚ್ಚಿನ ರೀತಿಯಲ್ಲಿ ಅಪಾಯವಾಗುತ್ತಿತ್ತು. ಆಗುವ ಮುಂದಿನ ಅಪಾಯ ನಮಗೆ ಊಹಿಸಲು ಸಾಧ್ಯವಿಲ್ಲ ಆದ್ದರಿಂದ ರಾತ್ರಿ ಸಮಯದಲ್ಲಿ ವಿದ್ಯುತ್ ಅಡಚಣೆ ಉಂಟಾದರೆ ಗ್ರಾಹಕರೂ ಹಾಗು ಅರಣ್ಯ ಇಲಾಖೆಯ ಸಹಕರಿಸಬೇಕಾಗಿದೆ .




