ಅರಕಲಗೂಡು: ಬಿಜಿಎಸ್ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜು ಉತ್ತಮ ಫಲಿತಾಂಶ ನೀಡುವಲ್ಲಿ ಹೆಸರಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಹೊಡೆನೂರು ಮಹೇಶ್ ತಿಳಿಸಿದರು.

ಕಾಲೇಜಿನಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಹೆಚ್ಚಿಒನ ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಿ ಮಾತನಾಡಿದ ಅವರು, 2006 ರಲ್ಲಿ ಪ್ರಾರಂಭವಾದ ಕಾಲೇಜು ಆರಂಭದಲ್ಲಿ ಶೇ 65 ಫಲಿತಾಂಶ ನೀಡಿದ್ದು ಪ್ರಸ್ತುತ ಶೇ 100 ಫಲತಾಂಸ ನೀಡುವ ಎತ್ತರಕ್ಕೆ ಬೆಳೆದಿದೆ.

ಈ ಬಾರಿ ಕಾಲೇಜಿನ ಒಟ್ಟಾರೆ ಫಲಿತಾಂಶ 99.5 ಆಗಿದೆ. ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ಬರೆದಿದ್ದ 242 ವಿದ್ಯಾರ್ಥಿಗಳಲ್ಲಿ 239 ಮಂದಿ ತೇರ್ಗಡೆ ಯಾಗಿದ್ದು ಶೇ 99 ಫಲಿತಾಂಶ ದೊರೆತಿದೆ. 107 ಅತ್ಯುನ್ನತ ದರ್ಜೆ, 126 ಪ್ರಥಮ ಹಾಗೂ 6 ಮಂದಿ ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದ ಎಲ್ಲ 78 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು ಶೇ 100 ಫಲಿತಾಂಶ ದೊರೆತಿದೆ. ವಿಜ್ಞಾನ ವಿಭಾಗದಲ್ಲಿ ಆರ್.ವೈ. ಐಶ್ವರ್ಯ 583 ಹಾಗೂ ವಾಣಿಜ್ಯ ವಿಭಾಗದಲ್ಲಿ ಮಮತಾ ಬಿ. ಸೋಲಂಕಿ 582 ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ ಎಂದರು.

ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಾದ ಐಶ್ವರ್ಯ,ಜಿ.ಎಸ್.ಉದಯ್, ಎನ್.ವಿ.ಸಹನಾ, ಕೆ.ಎಂ.ಜಮುನಾ ಅವರನ್ನು ಗೌರವಿಸಿ ಅಭಿನಂದಿಸಲಾಯಿತು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *