ಅರಕಲಗೂಡು: ಬೇಸಿಗೆ ಶಿಬಿರಗಳಲ್ಲಿ ಕಲಿಸುವ ಪಠ್ಯೇತರ ಚಟುವಟಿಕೆಗಳು ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಿ ಸಾಮಾನ್ಯ ಜ್ಞಾನ ಹೆಚ್ಚಿಸಲು ಸಹಾಯಕವಾಗಿದೆ ಎಂದು ಸಂಸ್ಕೃತಿ ಚಿಂತಕ ಹಾಗೂ ಜನಪದ ಕಲಾವಿದ ಗ್ಯಾರೆಂಟಿ ರಾಮಣ್ಣ ಅಭಿಪ್ರಾಯ ಪಟ್ಟರು.

ಏಕತಾರಿ ಸಾಂಸ್ಕೃತಿಕ ಸಂಘಟನೆ ತಾಲ್ಲೂಕು ಜಾನಪದ ಪರಿಷತ್ ಹಾಗೂ ಅಲಂಕೃತ ಶೇಖರ್ ಶಾಮಿಯಾನ ಸಹಯೋಗದಲ್ಲಿ ಹಮ್ಮಿಕೊಮಡಿರುವ ಹಾರೋಣ ಬಾ 6 ನೇ ವರ್ಷದ ಬೇಸಿಗೆ ಶಿಬಿರವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಶಾಲಾ ಶಿಕ್ಷಣ ಕೇವಲ ಅಂಕಗಳಿಕೆಗಷ್ಟೆ ಸೀಮಿತವಾಗಿದೆ.

ಪರಿಸರ, ಮಾನವೀಯತೆ, ಸಹಬಾಳ್ವೆ, ಸಾಹಿತ್ಯ, ಸಂಸ್ಕೃತಿ, ಜನಪದ ಕಲೆ, ದೇಸಿ ಆಟಗಳು ಮುಂತಾದ ವಿಯಗಳನ್ನು ಅರಿತಾಗ ಮಾತ್ರ ಬದುಕು ಉತ್ತಮವಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ. ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಪ್ರತಿಭೆ ಇದ್ದರೂ ಸೂಕ್ತ ವೇದಿಕೆ ಹಾಗೂ ತರಬೇತಿ ಇಲ್ಲದ ಕಾರಣಕ್ಕೆ ಅವು ಕಮರುತ್ತಿದೆ.

ಇಂತಹ ಶಿಬಿರಗಳ ಮೂಲಕ ಅವರ ಪ್ರತಿಭೆ ಅನಾವರಣಕ್ಕೆ ಪ್ರಯತ್ನ ನಡೆಸಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.

ಶಿಬಿರದ ನಿರ್ದೇಶಕ ಹಾಗೂ ರಂಗಕರ್ಮಿ ಕೆ.ಕೆ.ದೇವಾನಂದ ವರಪ್ರಸಾದ್ ಮಾತನಾಡಿ, ಮಕ್ಕಳಿಗೆ ಜನಪದ ಸಂಸ್ಕೃತಿ, ಕಲೆ, ಸಾಹಿತ್ಯ, ಪರಿಸರ ಜ್ಞಾನ ಬೆಳೆಸುವ ದೃಷ್ಠಿಯಿಂದ ಏಕತಾರಿ ಸಾಂಸ್ಕೃತಿಕ ಸಂಘಟನೆ ಬೇಸಿಗೆ ಶಿಬಿರದ ನಡೆಸುತ್ತಾ ಬಂದಿದ್ದು ಕಳೆದ 5 ವರ್ಷಗಳಲ್ಲಿ ಹಲವು ಪ್ರತಿಭೆಗಳನ್ನು ಬೆಳೆಸಲಾಗಿದೆ ಎಂದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *