ಹಾಸನ: ಪ್ರಸ್ತುತದಲ್ಲಿ ಜೆಡಿಎಸ್ ಎಂದರೇ ಪಕ್ಷವಾಗಿ ಉಳಿಯದೇ ಪ್ರೈವೆಟ್ ಲಿಮಿಟೆಡ್ ಆಗಿ ಬದಲಾಗಿದ್ದು, ತನ್ನ ಆಸ್ತಿ ಮತ್ತು ಮಕ್ಕಳನ್ನು ಕಾಪಾಡಿಕೊಳ್ಳಲು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವುದಾಗಿ ಹಾಸನ ಕ್ಷೇತ್ರ ವಿಧಾನಸಭೆಯ ಪರಾಜಿತ ಅಭ್ಯರ್ಥಿ ಬನವಾಸೆ ರಂಗಸ್ವಾಮಿ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.

ನಗರದ ಬಿ.ಎಂ. ರಸ್ತೆ ಬಳಿ ಇರುವ ಜಿಲ್ಲಾ ಕಾಂಗ್ರೆಸ್ ಕಛೇರಿ ಆವರಣದಲ್ಲಿ ಅಲ್ಪಸಂಖ್ಯಾತ ವಿಭಾಗದ ಸಮಾವೇಶದಲ್ಲಿ ಉದ್ದೇಶಿಸಿ ಮಾತನಾಡಿದ ಅವರು, ಪ್ರಸ್ತುತದಲ್ಲಿ ಗಲ್ಲಿ ಗಲ್ಲಿಯಲ್ಲಿ ಕಾಂಗ್ರೆಸ್ ಅಲೆ ಶುರುವಾಗಿದ್ದು, ಎಲ್ಲಾರೂ ಕೂಡ ಶ್ರದ್ಧೆಯಿಂದ ಕೆಲಸ ಮಾಡಿದ್ದಲ್ಲಿ ಏಪ್ರಿಲ್ ೨೬ ರಂದು ನಡೆಯುವ ಚುನಾವಣೆಯಲ್ಲಿ ಜಯಭೇರಿಯನ್ನು ಭಾರಿಸಿ ಮೇ. ೪ ರಂದು ಪಲಿತಾಂಶ ಬಂದ ಮೇಲೆ ಇದೆ ರೀತಿ ಎಲ್ಲಾರೂ ಕೂಡ ಸಮಾರಂಭ ಏರ್ಪಡಿಸಿ ಸಂತೋಷ ಪಡೊಣ. ಪ್ರತಿಯೊಬ್ಬರೂ ಕೂಡ ಶ್ರೇಯಸ್ ಪಟೇಲ್ ಆಗಿ ಕಾರ್ಯನಿರ್ವಹಣೆ ಮಾಡಿದಾಗ ಮಾತ್ರ ಗೆಲುವು ಪಡೆಯಬಹುದು ಎಂದರು. ಜೆಡಿಎಸ್ ಪಕ್ಷ ಎಂದರೇ ಅದೊಂದು ಸಮಯ ಸಾದಕ ಪಕ್ಷ. ಇಂದು ಪಕ್ಷವಾಗಿ ಉಳಿದಿಲ್ಲ. ಈ ಪಕ್ಷದ ಕಾರ್ಯಕರ್ತರನ್ನು ನಾಯಕರನ್ನು ಬೀದಿಗೆ ತಳ್ಳಿ ಕೋಮುವಾದಿ ಬಿಜೆಪಿ ಪಕ್ಷವನ್ನು ಒಪ್ಪಿಕೊಂಡಿರುವುದರಿಂದ ಪಕ್ಷವಾಗಿ ಉಳಿಯದೇ ಪ್ರೈವೆಟ್ ಲಿಮಿಟೆಡ್ ಆಗಿ ಬದಲಾವಣೆ ಆಗಿದೆ. ತನ್ನ ಆಸ್ತಿಗಳನ್ನು, ಮಕ್ಕಳನ್ನು ಕಾಪಾಡಿಕೊಳ್ಳುವುದಕ್ಕಾಗಿ ಅವರು ಕಾರ್ಯಕರ್ತರನ್ನು ಮುಖಂಡರನ್ನು ಬೀದಿಯಲ್ಲಿ ಬಿಟ್ಟು ಬಿಜೆಪಿ ಜೊತೆ ಹೋಗಿರುವುದಾಗಿ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಪಕ್ಷವು ಜೆಡಿಎಸ್ ಕಾರ್ಯಕರ್ತರ ಎದುರು ನೋಡುತ್ತಿದೆ. ನಿಮ್ಮನ್ನು ಬದುಕಲು ಅವಕಾಶ ಕೊಡುತ್ತೇವೆ ಎಂದು ಭರವಸೆ ನೀಡಿದರು. ಪಕ್ಷದಲ್ಲಿ ಯಾರಿಗಾದರೂ ನೋವಾಗಿದ್ದರೇ ನಮ್ಮ ಪಕ್ಷಕ್ಕೆ ಬರಬಹುದು. ನಮ್ಮ ಕಾಂಗ್ರೆಸ್ ಪಕ್ಷ ನಿಮಗೆ ಯಾವಾಗಲು ಆಸರೆ ಆಗಿರುತ್ತದೆ. ಎಲ್ಲಾರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಶ್ರೇಯಸ್ ಪಟೇಲ್ ಅವರನ್ನು ಗೆಲ್ಲಿಸೋಣ. ಅವರ ಗೆಲುವಿನಲ್ಲಿ ನಮ್ಮೆಲ್ಲರ ಭವಿಷ್ಯ ಅಡಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಿಮ್ಮೆ ಮನಸ್ಸನ್ನು ಗೆಲ್ಲಲು ಆಗಿಲ್ಲವೇನೊ? ಇಲ್ಲವೇ ಒಂದು ದುಷ್ಟ ಶಕ್ತಿಯನ್ನು ಸೋಲಿಸುವ ನಿಟ್ಟಿನಲ್ಲಿ ಜನರು ನಿರ್ಧಾರ ಮಾಡಿರಬಹುದು, ಆ ನಿರ್ಧಾರಕ್ಕೆ ನಾ ತಲೆ ಬಾಗುತ್ತೇನೆ. ನನಗೆ ಇನ್ನು ವಯಸ್ಸಿದ್ದು, ಮುಂದಿನ ದಿನಗಳಲ್ಲಿ ಒಳ್ಳೆ ಕೆಲಸ ಮಾಡಿ ನಿಮ್ಮ ಹೃದಯವನ್ನು ಗೆದ್ದು ಮುಂದೆ ಆ ಸ್ಥಾನ ಗೆಲ್ಲುವ ವಿಶ್ವಾಸವಿದೆ ಎಂದು ವಿಶ್ವಾಸವ್ಯಕ್ತಪಡಿಸಿದರು.

ಕಾಂಗ್ರೆಸ್ ಮುಖಂಡ ಹೆಚ್.ಕೆ. ಮಹೇಶ್ ಮಾತನಾಡಿ, ನಮಗೆ ಮುಸಲ್ಮಾನರ ಮತ ಅವಶ್ಯಕತೆ ಇಲ್ಲ ಎಂದು ಬಿಜೆಪಿಯವರು ಹೇಳುತ್ತಾರೆ. ಆದರೇ ಕಾಂಗ್ರೆಸ್ ನಮಗೆ ಎಲ್ಲಾ ಧರ್ಮದ ಮತ ಬೇಕು. ಚುನಾವಣೆಯಲ್ಲಿ ದೇವೆಗೌಡರು ಮೋದಿಗೋಸ್ಕರ ಓಟ್ ಕೇಳ ಬಾರದು, ನಮ್ಮ ಪಕ್ಷ ಉಳಿವಿಗಾಗಿ ಓಟ್ ಕೇಳಿ ಜನರು ಒಪ್ಪುತ್ತಾರೆ. ಜೆಡಿಎಸ್ ಅಭ್ಯರ್ಥಿ ಈಗ ಜನರ ಮನಸ್ಸಿನಲ್ಲಿ ತಿರಸ್ಕೃತಗೊಂಡಿದ್ದು, ನಮ್ಮ ಕಾಂಗ್ರೆಸ್ ಅಭ್ಯರ್ಥಿ ಮನೆ ಮನೆಮಾತಾಗಿದ್ದು, ಅತಿ ಹೆಚ್ಚು ಅಂತರದಿಂದ ಗೆದ್ದೆ ಗೆಲ್ಲುತ್ತಾರೆ ಎಂದು ಭರವಸೆ ಮಾತನಾಡಿದರು.

ಕಾಂಗ್ರೆಸ್ ಸರಕಾರವು ಐದು ಗ್ಯಾರಂಟಿಯನ್ನು ಪೂರ್ಣವಾಗಿ ಕೊಟ್ಟಿದ್ದು, ವರ್ಷಕ್ಕೆ ಎಪ್ಪತ್ತು ಸಾವಿರ ಕೋಟಿ ಖರ್ಚು ಆಗುತ್ತಿದೆ. ಆದರೇ ಯಾವುದನ್ನು ಲೆಕ್ಕಿಸದೇ ನೀಡಿದ ಭರವಸೆ ಈಡೇರಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಕೇಂದ್ರದ ನಾಯಕರ ಕೈ ಬಲಪಡಿಸಿ ಎಂದು ಕರೆ ನೀಡಿದರು.

ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ದೇವರಾಜೇಗೌಡ ಮಾತನಾಡಿ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮೊದಲು ಐದು ಗ್ಯಾರಂಟಿಗಳನ್ನು ನೀಡುವ ಭರವಸೆ ನೀಡಿದಂತೆ ಅಧಿಕಾರಕ್ಕೆ ಬಂದ ಮೇಲೆ ಕೂಡ ಸರ್ವ ಧರ್ಮಕ್ಕೂ ೫ ಭರವಸೆ ಕೂಡ ನೀಡಿ ಈಡೇರಿಸಿದೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಇಬ್ಬರೂ ಜೋಡಿ ಎತ್ತುಗಳಾಗಿ ಜನಪರ ಯೋಜನೆ ನೀಡಿದ್ದು, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಅವರನ್ನು ಗೆಲ್ಲಿಸುವಂತೆ ಇದೆ ವೇಳೆ ಮನವಿ ಮಾಡಿದರು.

ಕಾಂಗ್ರೆಸ್ ಮುಖಂಡ ಹಾಗೂ ಹುಡಾ ಮಾಜಿ ಅಧ್ಯಕ್ಷ ಬಿ.ಕೆ. ಮಂಜುನಾಥ್ ಮಾತನಾಡಿ, ೨೦೧೪ ರಲ್ಲಿ ನರೇಂದ್ರ ಮೋದಿಯವರು ಸುಳ್ಳು ಅಬ್ಬರದ ಭಾಷಣ ಮಾಡಿದ್ದು, ಇಡೀ ದೇಶವೇ ಅವರ ಕಡೆ ಸೆಳೆದಿತ್ತು. ಪ್ರಧಾನಿ ಆಗುವ ಮೊದಲು ನನಗೆ ಒಂದು ಅವಕಾಶ ಕೊಡಿ ದೇಶದಲ್ಲಿ. ಸ್ವಿಸ್ ಬ್ಯಾಂಕಿನಲ್ಲಿರುವ ಭಾರತೀಯರ ಹಣ ತಂದು ಪ್ರತಿ ವ್ಯಕ್ತಿಗೆ ೩ ಲಕ್ಷ, ಒಂದು ಕುಟುಂಬಕ್ಕೆ ೧೫ ಲಕ್ಷ ಕೊಡುವುದಾಗಿ ನಂಬಿಸಿ ಎಂಪಿ ಚುನಾವಣೆಯಲ್ಲಿ ಗೆಲುವು ಪಡೆದುಕೊಂಡರು.

ಇಡಿ ಜನರು ಸುಳ್ಳು ಭರವಸೆ ನಂಬಿ ಮತ ಹಾಕಿದ ಪರಿಣಾಮ ಪ್ರಧಾನಿಯಾದರು. ಮಣ್ಣಿನ ಮಗ ದೇವೇಗೌಡ ಎಂದು ಹೇಳುತ್ತಿದ್ದವರ ಹೆಸರನ್ನು ಕೂಡ ಸ್ವಿಸ್ ಬ್ಯಾಂಕಿನಲ್ಲಿ ದುಡ್ಡು ಇದೆ ಎಂದು ಹೇಳಿದವರು ಇದೆ ಮೋದಿಯವರು. ಹೆಚ್.ಡಿ. ಕುಮಾರಸ್ವಾಮಿ ಅವರು ಕೂಡ ಹಣ ಇಟ್ಟಿದ್ದಾರೆ ಎಂದು ಹೇಳಿದ್ದರು. ಈಗ ಯಾವ ಹಣ ಯಾರ ಖಾತೆಗೆ ಒಂದು ಬಿಡಿಗಾಸು ಬರಲಿಲ್ಲ ಎಂದು ಕಿಡಿಕಾರಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮೊಹಮ್ಮದ್ ದಾವುದ್, ಉಪಾಧ್ಯಕ್ ಎಂ. ಅಮ್ಜಾದ್ ಖಾನ್, ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಶರ್ಮ, ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಧ್ಯಕ್ಷ ಜಾಕೀರ್ ಹುಸೇನ್, ಕಾಂಗ್ರೆಸ್ ಮುಖಂಡರಾದ ಖಡಾಖಡಿ ಫೀರ್ ಸಾಹೇಬ್, ಮುಭಾಶೀರ್ ಅಹಮದ್, ಫಾಸ್ಟರ್ ಮಣಿ, ಶೀರಾಜ್, ಜಿಶಾನ್, ಖಲಂದರ್ ಪಾಷಾ, ಶಿವಕುಮಾರ್ ಇತರರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *