
ಸಕಲೇಶಪುರ ತಾಲೂಕು ಹಾನುಬಾಳು ಹೋಬಳಿ ಹುರುಡಿ ಸರ್ಕಲ್ ನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಹುಟ್ಟು ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ತಾಲೂಕಿನ ಹಾನುಬಾಳು ಹೋಬಳಿ ಹುರುಡಿ ಗ್ರಾಮದ ಸರ್ಕಲ್ ನಲ್ಲಿ ಅಂಬೇಡ್ಕರ್ ಭಾವಚಿತ್ರವನ್ನು ಇಟ್ಟು ಪಟಾಕಿ ಸಿಡಿಸುವ ಮೂಲಕ ಅಂಬೇಡ್ಕರ್ ಅವರಿಗೆ ಜೈಕಾರ ಹಾಕಲಾಯಿತು.
ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಹಾನುಬಾಳು ಹೆಚ್.ಬಿ.ಗೋಪಾಲ್ ಅವರು ಮಾತನಾಡಿ ಅಂಬೇಡ್ಕರ್ ಒಬ್ಬ ವ್ಯಕ್ತಿಯಲ್ಲ ಅದೋಂದು ಶಕ್ತಿ, ಪ್ರತಿಯೊಬ್ಬ ಯುವಕರು ಅಂಬೇಡ್ಕರ್ ಅವರ ಹಾದಿಯಲ್ಲಿ ನಡೆಯಬೇಕು ಅವರ ಆದರ್ಶ ತತ್ವಸಿದ್ದಾಂತಗಳು ನಮ್ಮೆಲ್ಲರಿಗೂ ಪ್ರೇರಣೆಯಾಗಬೇಕು ಎಂದರು
ಕಾರ್ಯಕ್ರಮವು ಹುರುಡಿ, ಹೆಗ್ಗರವಳ್ಳಿ ಅಂಬೇಡ್ಕರ್ ನಗರ ಹುರುಡಿ, ಹಂಜಗೋಡನಹಳ್ಳಿ, ಅವರೇಕಾಡು ಇವರ ನೇತೃತ್ವದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಹಾನುಬಾಳು, ಇಂದಿರಾನಗರ, ಬಿಳಿಸಾರೆ, ಅಚ್ಚರಡಿ,ಕಾರುಮಗ್ಗೆ, ವೆಂಕಟಹಳ್ಳಿ, ಚಕ್ಕುಡಿಗೆ, ಕಿರುಗುಂದದ ಗ್ರಾಮಗಳ ಜನರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

