ಚನ್ನರಾಯಪಟ್ಟಣ: ಗಾಂಧಿ ಸರ್ಕಲ್ ನಲ್ಲಿರುವ ರಾಯರ ರಂಗಮಂದಿರದಲ್ಲಿ ರಾಮ ನವಮಿ ಕಾರ್ಯಕ್ರಮ ನಡೆಯಿತು.

ಅಯೋಧ್ಯೆ ರಾಮ ಮಂದಿರ ಪ್ರತಿಷ್ಠಾಪನೆ ಮೊದಲ ರಾಮನವಮಿ ಅಂಗವಾಗಿ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ಡಾ.ಸುಭುದೇಂದ್ರ ತೀರ್ಥ ಶ್ರೀಪಾದಂಗಳವರ ಪಾದಸ್ಪರ್ಶ ಮತ್ತು ಅಮೃತ ಹಸ್ತದಿಂದ ಶ್ರೀ ಮೂಲ ರಾಮರ ಪೂಜೆಯೊಂದಿಗೆ ನಿರ್ಮಾಣವಾಗಿರುವ ಚನ್ನರಾಯಪಟ್ಟಣದ ರಾಯರ ರಂಗಮಂದಿರದಲ್ಲಿ ಬುಧವಾರ ಬೆಳಗ್ಗೆ ಶ್ರೀರಾಮ ದೇವರಿಗೆ ಪಂಚಾಮೃತ ಅಭಿಷೇಕ ವಿಶೇಷ ಅಲಂಕಾರವನ್ನು ಭಕ್ತರು ಕಣ್ತುಂಬಿಕೊಂಡರು ನಂತರ ಮಹಾಮಂಗಳಾರತಿ ಬಂದಂತಹ ಎಲ್ಲಾ ಭಕ್ತರಿಗೆ ಅಯೋಧ್ಯ ಶ್ರೀರಾಮದೇವರ ಪ್ರಸಾದ ಅಯೋಧ್ಯೆ, ಸರಿಯೋ ನದಿ ತೀರ್ಥ ಅಯೋಧ್ಯೆ ಶ್ರೀರಾಮದೇವರ ಮೃತಿಕೆ ಹಾಗೂ ಶ್ರೀರಾಮ ದೇವರಿಗೆ ಇಷ್ಟವಾದ ವಿಶೇಷ ತುಳಸಿ ಪಾನಕ ಹಾಗೂ ಮಜ್ಜಿಗೆ ಮತ್ತು ಕೋಸಂಬರಿಯನ್ನು ವಿತರಿಸಲಾಯಿತು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *