
ಅರೇಹಳ್ಳಿ: ಮೂರು ದಿನದ ಹಿಂದೆ ಬೊಮ್ಮನಮನೆಯ ಬನಶಂಕರಿ ಅಮ್ಮನವರನ್ನು ನಮ್ಮ ಗ್ರಾಮಕ್ಕೆ ಭಕ್ತಿಭಾವದಿಂದ ಕರೆತಂದು ಸಡಗರ ಸಂಭ್ರಮದಿಂದ ಉತ್ಸವವನ್ನು ಮಾಡಲಾಗುತ್ತಿದೆ ಎಂದು ಗ್ರಾಮಸ್ಥ ಸುಧೀರ್ ಹೇಳಿದರು.
ಬೇಲೂರು ತಾಲೂಕಿನ ಬಿಕ್ಕೋಡು ಹೋಬಳಿಯ ಶ್ರೀ ಬನಶಂಕರಿ ಹಾಗೂ ಶ್ರೀ ಪರ್ವತಮಲ್ಲೇಶ್ವರ ಸ್ವಾಮಿಯ ಜಂಪೋತ್ಸವ ಮತ್ತು ರುದ್ರಾಭಿಷೇಕ ಕಾರ್ಯಕ್ರಮಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಉತ್ತಮ ಮಳೆಯಾಗಿ ರೈತ ಸಮುದಾಯ ಹಾಗೂ ಸುತ್ತಮುತ್ತಲ ಗ್ರಾಮದ ಗ್ರಾಮಸ್ಥರು ಸುಖಮಯವಾಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.
ಮೂರು ವರ್ಷಕ್ಕೆ ಒಮ್ಮೆ ದೇವಿಯನ್ನು ನಮ್ಮ ಗ್ರಾಮಕ್ಕೆ ಕರೆತಂದು ಅಡ್ಡಪಲ್ಲಕ್ಕಿಯಲ್ಲಿ ಹೊತ್ತು ವಿಜೃಂಭಣೆಯಿಂದ ಮೆರವಣಿಗೆ ಮಾಡಿ ಮೂರು ದಿನದ ಪೂಜಾ ಕಾರ್ಯಕ್ರಮ ಮುಗಿದ ಬಳಿಕೆ ಅಮ್ಮನವರನ್ನು ಪುನಃ ಬೊಮ್ಮನಮನೆಗೆ ಕಳುಹಿಸಿಕೊಡಲಾಗುತ್ತದೆ.
ಪೂಜಾ ಮಹೋತ್ಸವಕ್ಕೆ ನಮ್ಮ ಗ್ರಾಮದ ಯುವಕರು, ಮಹಿಳೆಯರು,ಗ್ರಾಮಸ್ಥರು ಸಹಕಾರ ನೀಡಿದ್ದರಿಂದ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿದೆ ಎಂದರು.
ಈ ವೇಳೆ ಉತ್ಸವ ಸಮಿತಿ ಅಧ್ಯಕ್ಷ ಕಾಂತರಾಜು, ಕಾರ್ಯದರ್ಶಿ ಶಿವರಾಜು, ಸಹ ಕಾರ್ಯದರ್ಶಿ ಪವನ್, ಸದಸ್ಯರುಗಳಾದ ಸುದರ್ಶನ್, ನವೀನ್, ರಘು, ವಿಜಿತ್ ಹಾಗೂ ಇನ್ನಿತರರು ಇದ್ದರು.


