ನಾಜೂಕಾಗಿ ಕಾಂಪೌಂಡ್ ದಾಟಿದ ಕಾಡಾನೆ: ವಿಡಿಯೋ ಎಲ್ಲೆಡೆ ವೈರಲ್

ಅರೇಹಳ್ಳಿ: ಬೇಲೂರು ತಾಲೂಕಿನ ಅರೇಹಳ್ಳಿಯಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದೆ.ಒಂಟಿ ಹಾಗೂ ಗುಂಪಿನಲ್ಲಿರುವ ಕಾಡಾನೆಗಳು ಡೋಂಟ್ ಕೇರ್ ಎಂಬಂತೆ ಮುಖ್ಯರಸ್ತೆಯಲ್ಲಿಯೆ ಓಡಾಡುತ್ತಿವೆ.

ಹಿರಿಗರ್ಜೆ,ಲಿಂಗಾಪುರ,ಅರೇಹಳ್ಳಿ,ಬಿಕ್ಕೋಡು ಸುತ್ತ ಮುತ್ತ ಕಾಡಾನೆಗಳು ಹಗಲು ರಾತ್ರಿಯೆನ್ನದೇ ಸಂಚರಿಸುತ್ತಿರುವುದರಿಂದ ಜನಸಾಮಾನ್ಯರು ಭಯಪಡುತಿದ್ದಾರೆ.

ನರಹಂತಕ ಕರಡಿ ಎಂಬ ಕಾಡಾನೆ ನಿವಾಸಿಗಳು ವಾಸವಿರುವ ಮನೆಗಳ ಹಿಂಭಾಗವೆ ಬಂದು ಸದ್ದು ಮಾಡುತ್ತಿರುವುದರಿಂದ ಜೀವಕೈಯ್ಯಲ್ಲಿಡಿದು ಬದುಕುವ ಸ್ಥಿತಿ ನಿರ್ಮಾಣವಾಗಿದೆ.

ಬುಧವಾರ ಸಂಜೆ ಹಿರಿಗರ್ಜೆ ಮುಖ್ಯರಸ್ತೆಯಲ್ಲಿ ಬರುತ್ತಿದ್ದ ಕಾಡಾನೆಯು ಜನರನ್ನು ನೋಡಿ ವಿಚಲಿತಗೊಂಡು ಪಕ್ಕದ ಕಾಫಿ ತೋಟಕ್ಕೆ ಹಾಕಲಾಗಿದ್ದ ಕಾಂಪೌಂಡ್ ಅನ್ನು ಬಹಳ ನಾಜೂಕಾಗಿ ದಾಟುವ ವಿಡಿಯೋ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದ್ದು ಈಗ ಎಲ್ಲೆಡೆ ವೈರಲ್ ಆಗಿದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *