ನಮ್ಮ ನಡೆ ಮತಗಟ್ಟೆಯ ಕಡೆ ಕಾರ್ಯಕ್ರಮ

ಅರೇಹಳ್ಳಿ: ಬೇಲೂರು ತಾಲೂಕಿನ ಅರೇಹಳ್ಳಿಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಮ್ಮಮ ನಡೆ ಮತಗಟ್ಟೆಯ ಕಡೆ ಎಂಬ ವಿನೂತನ ಕಾರ್ಯಕ್ರಮದ ಮೂಲಕ ಮತದಾನ ಜಾಗೃತಿಗೆ ಚಾಲನೆ ಕೊಡಲಾಯಿತು.

ಗ್ರಾ.ಪಂ. ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು ಒಟ್ಟಾಗಿ ಚುನಾವಣಾ ಪರ್ವ ದೇಶದ ಗರ್ವ ಎಂಬ ಧ್ಯೇಯವಾಕ್ಯವಿರುವ ಧ್ವಜವನ್ನು ಗ್ರಾ.ಪಂ ಹಾಗೂ ಸರಕಾರಿ ಪ್ರೌಢಶಾಲಾ ಆವರಣದಲ್ಲಿ ಹಾರಿಸಲಾಯಿತು. ಬಳಿಕ ಸಮಾನತೆಯ ಸಂಧಾನ ನಿಮ್ಮ ಮತದಾನ, ಹೆಮ್ಮೆಯಿಂದ ಮತ ಚಲಾಯಿಸಿ ಎಂಬ ಬರಹಗಳಿರುವ ಬ್ಯಾನರ್ ಹಿಡಿದು ಮುಖ್ಯರಸ್ತೆಯಲ್ಲಿ ಜಾಥಾ ನಡೆಸಿದರು.

ಈ ವೇಳೆ ಲೋಕೇಶ್, ರುದ್ರೇಶ್, ರೂಪ, ಗಣೇಶ್, ಅಫ್ಸರ್, ವಿರಾಜು, ಪುಟ್ಟರಾಜು, ಸ್ವಸಹಾಯ ಗುಂಪಿನ ಸದಸ್ಯರು ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *