ಅರೇಹಳ್ಳಿ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿಕಳೆದ ಐದಾರು ವರ್ಷಗಳಿಂದ ಸಾರ್ವಜನಿಕರಿಗೆ ಬಹತೇಕ ಎಲ್ಲಾ ಸೇವಾ ಸೌಲಭ್ಯಗಳನ್ನು ಉತ್ತಮವಾಗಿ ನೀಡಲಾಗುತ್ತಿದ್ದರು ತುರ್ತು ಪರಿಸ್ಥಿಯಲ್ಲಿ ಹಾಗು ವ್ಯಾಪ್ತಿಯ ಬಡರೋಗಿಗಳಿಗೆ 108 ಆರೋಗ್ಯ ರಕ್ಷಾ ಕವಚ ಸೇವೆ ಇರಲಿಲ್ಲ ಹಾಗು ಈ ಹಿಂದೆ ಇದ್ದ ಅಂಬುಲೆನ್ಸ್ ದುರಸ್ತಿಗೊಂಡಿತ್ತು.

ಆದರೆ ಇದೀಗ ಜನರ ಜೀವ ರಕ್ಷಿಸುವ ಹಾಗು ತುರ್ತು ಪರಿಸ್ಥಿತಿಗೆ ಉಚಿತ ತುರ್ತು ಸಾಗಾಣಿಕೆ ಮತ್ತು ಆಸ್ಪತ್ರೆಗೆ ದಾಖಲಿಸುವ ಮುನ್ನ ಪ್ರಥಮ ಉಪಚಾರ ತುರ್ತು ಸೇವೆಯನ್ನು ಒದಗಿಸುವ ಸರ್ಕಾರದ ಮಹತ್ವಕಾಂಕ್ಷೆಯ ಯೋಜನೆಯಾದ ಆರೋಗ್ಯ ರಕ್ಷ ಕವಚ (108) ಅಂಬುಲೆನ್ಸ್ ಸೇವೆ ಉದ್ಘಾಟಿಸುವ ಮೂಲಕ ತುರ್ತು ಸೇವಕಾಂಕ್ಸಿಗಳ ಇನ್ನಷ್ಟು ಜೀವಾ ರಕ್ಷಣೆ ಹಾಗೂ ಆರೋಗ್ಯಕರ ಬೆಳವಣಿಗೆಗೆ ನಾಂದಿಯಾಗಿದೆ.

ಕಳೆದೈದು ವರ್ಷಗಳಿಂದ ಎಥೇಚ್ಚವಾಗಿ ಕಾಡಾನೆಗಳ ಉಪಟಳವಿರುವ ಮಲೆನಾಡು ಭಾಗವಾದ ಅರೇಹಳ್ಳಿ ಮತ್ತು ಸುತ್ತ ಮುತ್ತಲಿನ ಗುಡ್ಡಗಾಡು ಹಾಗು ಕಾಫಿ ತೋಟಗಳ ನಡುವೆ ಇರುವ ಹಳ್ಳಿ ಪ್ರದೇಶಗಳಲ್ಲಿ ಹಗಲು ರಾತ್ರಿ ಎನ್ನದೆ ಕೆಲವೊಮ್ಮೆ ಜೀವದ ಹಂಗು ತೊರೆದು ತುರ್ತು ಪರಿಸ್ಥಿತಿಯ ಕರೆಯನ್ನು ತಾಳ್ಮೆಯಿಂದ ಆಲೀಸಿ ರೋಗಿಗಳ ಕ್ಷೇಮಕ್ಕಾಗಿ ಸದಾ ಸೇವೆ ನೀಡಲು ಮುಂದಿರುವ ನಮ್ಮಆರೋಗ್ಯ ರಕ್ಷಾ ಕವಚದಉತ್ತಮ ತರಬೇತಿ ಪಡೆದ ತುರ್ತು ವೈದ್ಯಕೀಯ ತಂತ್ರಜ್ಞ ಹಾಗು ಅಂಬುಲೆನ್ಸ್ ಪೈಲೆಟ್ ಗಳ ಸೇವಾ ಪರಿಶ್ರಮ ಮುಂದುವರೆದಂತೆ

ಇಲಾಖೆಯು ಇದೀಗ ನೂತನ ಆರೋಗ್ಯ ರಕ್ಷಾ ಕವಚ ಒದಗಿಸಿರುವುದು ಅವರುಗಳಿಗೆ ಇನ್ನಷ್ಟು ಉತ್ಸಾಹ ಹಾಗು ಚೈತನ್ಯ ತುಂಬಿದಂತಾಗಿದೆ ಎಂದು ಡಾಕ್ಟರ್ ಮಮತಾ ತಿಳಿಸಿದರು..

ಈ ವೇಳೆ ಆರೋಗ್ಯ ರಕ್ಷಾ ಕವಚದ ಸಿಬ್ಬಂದಿಗಳಾದ ಮೋಹನ್,ಲತೆಶ್,ಮಂಜುನಾಥ್,ಚಂದ್ರು,ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗದವರು,ಆಶಾ ಕಾರ್ಯಕರ್ತೆಯರು,ವೈದ್ಯಾಧಿಕಾರಿಗಳು,ದಾದಿಯರು ಹಾಗು ಇತರರು ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *