
ಸಕಲೇಶಪುರ: TV 46 ಮಲೆನಾಡು ಚಾನೆಲ್ ನಲ್ಲಿ ಭಾನುವಾರ ಬಿತ್ತರವಾದ ಸುದ್ದಿಗೆ , ಕಿರ್ಕಳ್ಳಿ ಗ್ರಾಮಕ್ಕೆ ಇಂದು ಭೇಟಿ ನೀಡಿದ ಉಪವಿಭಾಗ ಅಧಿಕಾರಿ ಮತ್ತು ತಹಶಿಲ್ದಾರರು ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದರು, ಹಾಗೆ ಸಮಸ್ಯೆಯ ಸುದ್ದಿಯನ್ನು ಬಿತ್ತರಿಸಿದ ಚಾನಲ್ ಗೆ ಅಬಿನಂದನೆ ತಿಳಿಸಿದರು.
ಕಳೆದ ಎರಡು ದಿನದ ಹಿಂದೆ ತಾಲ್ಲೂಕಿನ ಹೆತ್ತೂರು ಹೋಬಳಿಯ ಕಿರ್ಕಳ್ಳಿ ಗ್ರಾಮವು ಸರ್ಕಾರದ ಮೂಲ ಸೌಲಭ್ಯಗಳಿಂದ ವಂಚಿತವಾಗಿದ್ದು, ದೂರದ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಒದಗಿಸುವ ಎತ್ತಿನಹೊಳೆ ಕಾಮಗಾರಿಯಲ್ಲಿ ಅರ್ಧ ಸೇತುವೆ ಮಾಡಲಾಗಿದೆ ಹಾಗೂ ಐದು ಕಿಲೋ ಮೀಟರ್ ರಸ್ತೆಯ ಕಾಮಗಾರಿಯು ಸಹ ನಡೆದಿಲ್ಲ. ಅಲ್ಲದೆ ಗ್ರಾಮದಲ್ಲಿ ಕಾಡುಪ್ರಾಣಿಗಳ ಕಾಟ ವಿಪರೀತವಾಗಿದ್ದು, ಈ ಸಮಸ್ಯೆಯನ್ನು ಬಗೆಹರಿಸಲು ಸಹ ಅರಣ್ಯ ಇಲಾಖೆ ವಿಪಲವಾಗಿದೆ.
ಈ ಹಿನ್ನಲೆಯಲ್ಲಿ ಗ್ರಾಮಸ್ಥರು ಚುನಾವಣಾ ಬಹಿಷ್ಕಾರಕ್ಕೆ ಮುಂದಾಗಿದ್ದರು .ಈ ನಿಟ್ಟಿನಲ್ಲಿ ಇಂದು ಉಪವಿಭಾಗಾಧಿಕಾರಿ ಡಾ.ಎಂ.ಕೆ ಶ್ರುತಿ ಗ್ರಾಮಸ್ಥರೊಡನೆ ಮಾತನಾಡಿ ಗ್ರಾಮಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಎಲ್ಲಾ ಕ್ರಮ ಕೈಗೊಳ್ಳಲಾಗುತ್ತದೆ. ಈ ನಿಟ್ಟಿನಲ್ಲಿ ಮತದಾನ ಬಹಿಷ್ಕಾರವನ್ನು ಹಿಂಪಡೆದು ಮತದಾನ ಮಾಡಬೇಕೆಂದು ಮನವಿ ಮಾಡಿದರು.
ಕಿರ್ಕಳ್ಳಿ ಗ್ರಾಮಸ್ಥರ ಸಮಸ್ಯೆ ನನ್ನ ಗಮನಕ್ಕೆ ಬಂದಿದೆ. ರಸ್ತೆ ನಿರ್ಮಾಣಕ್ಕೆ ಎತ್ತಿನಹೊಳೆ ಯೋಜನೆಯಲ್ಲಿ ಅನುದಾನ ಕಾದಿರಿಸಲಾಗಿತ್ತು ಎಂಬ ಗ್ರಾಮಸ್ಥರು ಹೇಳುತ್ತಿದ್ದಾರೆ. ಈ ಬಗ್ಗೆ ಪರಿಶೀಲನೆ ನೆಡೆಸುತ್ತೇನೆ.
ನೀರಿನ ಸಮಸ್ಯೆಯನ್ನು ಶೀಘ್ರವಾಗಿ ಬಗೆ ಹರಿಸಲಾಗುವುದು ಗ್ರಾಮದಲ್ಲಿ ಮೂಲಭೂತ ಸೌಕರ್ಯಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಉಪವಿಭಾಗಾಧಿಕಾರಿ ಶ್ರುತಿ ಭರವಸೆ ನೀಡಿದರು.


