
ಹಾಸನ: ಕೈಚಳಕದ ಮೂಲಕ ಸುಂದರ ಅನುಭವವಾದರೇ ಮಾತ್ರ ಚಿತ್ರಕಲೆ ಎಂಬುದು ಗೊತ್ತಾಗುತ್ತದೆ. ಇಂತಹ ಚಿತ್ರಕಲೆ ಶಿಬಿರಗಳು ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ ಎಂದು ಶ್ರೀ ಕಲಾನಿಕೇತನ ದೃಶ್ಯಕಲಾ ಕಾಲೇಜು ಉಪನ್ಯಾಸಕರಾದ ಡಾ. ವಿಠಲರೆಡ್ಡಿ ಎಫ್. ಚುಳಕಿ ಅಭಿಪ್ರಾಯಪಟ್ಟರು.
ಹಾಸನದ ವಿದ್ಯಾನಗರ ಕಲಾಶ್ರೀ ಆರ್ಟ್ ಗ್ಯಾಲರಿ ಸಭಾಂಗಣದಲ್ಲಿ ಚಿತ್ಕಲಾ ಫೌಂಡೇಷನ್ ಹಾಗೂ ಬಣ್ಣದಮನೆ ಸಾಂಸ್ಕೃತಿಕ ವೇದಿಕೆ ಗದಗ ಇವರ ಸಹಯೋಗದಲ್ಲಿ ಭಾನುವಾರದಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಮೈಸೂರು ಸಾಂಪ್ರದಾಯಿಕ ಶೈಲಿಯ ಚಿತ್ರಕಲಾ ಶಿಬಿರೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಮಾತನಾಡಿದ ಅವರು, ಚಿತ್ರಕಲೆ ಎಂಬುದನ್ನು ಉಳಿಸಿ ಬೆಳೆಸಬೇಕು ಎನ್ನುವ ಆಸಕ್ತಿ ಇರಬೇಕು ಬೆಳೆಸಬೇಕು ಎನ್ನುವ ಇಚ್ಛಾಶಕ್ತಿ ದೇಸಾಯಿ ಅವರಲ್ಲಿದೆ. ಸಾಂಪ್ರದಾಯಕ ಚಿತ್ರಕಲಾ ವಿಷಯ ಕುರಿತು ಹೇಳುವುದಾದರೇ ಮಕ್ಕಳಲ್ಲಿ ಮೊದಲು ಚಿತ್ರಕಲೆಯ ಬೇಸಿಕೆ ಬಗ್ಗೆ ತಿಳಿಸಬೇಕು.
ಚಿತ್ರಕಲೆ ಎಂಬುದು ೧೫೬೫ ರಲ್ಲಿ ವಿಜಯನಗರ ಶೈಲಿಯು ಪಥನವಾದ ನಂತರ ಅನೇಕ ಕಲಾವಿದರು ಅಲ್ಲಿಂದ ವಲಸೆ ಹೋಗಬೇಕಾದ ಪರಿಸ್ಥಿತಿ ಬಂದು ಅನೇಕರು ಮೈಸೂರು, ವಿಜಾಪುರ ಸೇರಿದಂತೆ ನಾನಾ ಕಡೆ ಬಂದು ನೆಲೆಸುತ್ತಾರೆ ಎಂದರು.
ಮೈಸೂರಿಗೆ ಬಂದ ಕಲಾವಿದರು ಸೇರಿ ಅಲ್ಲೊಂದು ಸಾಂಪ್ರದಾಯಕ ಚಿತ್ರಕಲೆಯನ್ನು ಪ್ರಾರಂಭ ಮಾಡುತ್ತಾರೆ. ಮೈಸೂರಲ್ಲಿ ಸಿಗುವಂತಹ ಪರಿಕರಗಳು, ವಿಷಯಗಳು, ವಾತವರಣ ಎಲ್ಲಾವನ್ನು ಬಳಸಿಕೊಳ್ಳುತ್ತಾರೆ. ಮೈಸೂರು ಎನ್ನುವ ಹೆಸರು ಬಂದರೇ ಅಲ್ಲಿ ಮಾಡುವ ಬಹುತೇಕ ಚಿತ್ರಗಳು ದೇವರಿಗೆ ಸಂಬಂಧಪಟ್ಟಿದಾಗಿದೆ. ಗಣೇಶ, ರಾಮ, ಲಕ್ಷ್ಮಣ, ಚಾಮುಂಡೇಶ್ವರಿ ಸೇರಿದಂತೆ ಅನೇಕ ಚಿತ್ರಗಳೆಲ್ಲಾ ದೇವರಿಗೆ ಸಂಬಂಧಪಟ್ಟಿದೆ ಎಂದು ಕಿವಿಮಾತು ಹೇಳಿದರು.
ಮೈಸೂರು ಎಂದರೇ ಗದಗ್ ಬಾಷೆಗೆ ಹೆಸರುವಾಸಿಯಾಗಿದೆ. ತುಂಬ ಶ್ರೀಮಂತವಾದಂತಹ ಪ್ರದೇಶವಾಗಿದೆ. ಬಂಗಾರದಿಂದ ಕೂಡಿದ ಕಲಾಕೃತಿಗಳನ್ನು ಇಲ್ಲಿ ನೋಡಬಹುದಾಗಿದೆ. ಮಹಾರಾಜರ ವೇಷ ಭೂಷಣ ಎಲ್ಲಾ ಬಂಗಾರ ಬಣ್ಣ ಇರುವುದು ಕಾಣಬಹುದು.
ಭೂಮಿಯಲ್ಲಿ ಸಿಗುವ ಪ್ರಕೃತಿಯ ವಸ್ತುಗಳನ್ನು ಬಳಸಿ ಕಲ್ಲರ್ ಸಿದ್ಧಪಡಿಸುತಿದ್ದರು. ಪ್ರಸ್ತುದಲ್ಲಿ ಎಲ್ಲಾ ಒರಿಜಿನಲ್ ಕಲ್ಲರ್ ಸಿಗುವುದಿಲ್ಲ. ಕಲ್ಲರ್ ಸಿಗುತ್ತದೆ ಅದನ್ನು ಮಿಕ್ಸ್ ಮಾಡಿ ಬಣ್ಣ ಪಡೆಯುತ್ತಿದ್ದೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತುಮಕೂರು ಹಿರಿಯ ಚಿತ್ರಕಲಾವಿದ ಹಾಗೂ ನಿವೃತ್ತ ಪ್ರಾಂಶುಪಾಲ ಕಿಶೋರ್ ಕುಮಾರ್ ಶಿಬಿರವನ್ನು ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಿತ್ರಕಲಾವಿದ ಹಾಗೂ ಚಿತ್ಕಲಾ ಫೌಂಡೇಷನ್ ಸ್ಥಾಪಕ ಅಧ್ಯಕ್ಷ ಬಿ.ಎಸ್. ದೇಸಾಯಿವಹಿಸಿದ್ದರು.
ನಿರ್ಮಲಾ ಚಿತ್ರಕಲಾ ಶಾಲೆಯ ಪ್ರಾಂಶುಪಾಲರು ಆರ್.ಸಿ. ಕಾರದ ಕಟ್ಟಿ, ಚಿತ್ರ ಕಲಾವಿದರಾದ ಚೇತನ್, ತೇಜಸ್ವಿನಿ, ಶಿವಬಾಬು, ನಂದನ್, ಸುಪ್ರಿತ್, ಕೃಷ್ಣಚಾರಿ, ಚಂದ್ರಕಾಂತ್, ಬಸವರಾಜು ಇತರರು ಉಪಸ್ಥಿತರಿದ್ದರು




