ಹಾಸನ: ನಗರದ ಬಿ.ಎಂ. ರಸ್ತೆ ಬಳಿ ಹುಡಾ ಕಛೇರಿ ಎದುರು ಇರುವ ಲಯನ್ಸ್ ಕ್ಲಬ್ ನಲ್ಲಿ ನಡೆದ ನಿರ್ದೇಶಕರ ಸಭೆಯಲ್ಲಿ ಚರ್ಚಿಸಿ ಎಲ್ಲಾರ ಒಪ್ಪಿಗೆ ಮೆರೆಗೆ ಮುಂದಿನ ಅವಧಿಗೆ ಲಯನ್ಸ್ ಸೇವಾ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಐ.ಜಿ. ರಮೇಶ್, ಖಜಾಂಚಿ ಸಿ.ಬಿ. ನಾಗರಾಜು ಹಾಗೂ ಕಾರ್ಯದಶಿಯಾಗಿ ರವಿಕುಮಾರ್ ಬಲ್ಲೆನಹಳ್ಳಿ ಅವರನ್ನು ಆಯ್ಕೆ ಮಾಡಲಾಯಿತು.

ಮುಂದಿನ ಅವಧಿಯಲ್ಲಿ ಸೇವಾ ಚಟುವಟಿಕೆಗಳನ್ನು ಹೆಚ್ಚು ನಡೆಸಿ ನಮ್ಮ ಕ್ಲಬ್ ನ್ನು ಮೊದಲನೇ ಸ್ಥಾನಕ್ಕೆ ತರುವಂತೆ ಇದೆ ವೇಳೆ ಹಿರಿಯ ಲಯನ್ಸ್ ಸದಸ್ಯರು ಸಲಹೆ ನೀಡಿದರು.

ಇದೆ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಹೆಚ್.ಎನ್. ನಾಗೇಶ್, ಕಾರ್ಯದರ್ಶಿ ಸಿ.ಕೆ. ಕಿರಣ್, ವಲಯ ಅಧ್ಯಕ್ಷ ಎಸ್.ಪಿ. ಪ್ರಕಾಶ್, ಮಾಜಿ ಅಧ್ಯಕ್ಷ ಬಿ.ಎಸ್. ಸೋಮಶೇಖರ್, ಲಿಯೋ ಕ್ಲಬ್ ಅಧ್ಯಕ್ಷರಾದ ಪ್ರಿಯಾ ಕಿರಣ್, ಮಾಜಿ ಗೌವರ‍್ನರ್ ಹಿರಿಯರಾದ ಬಿ.ವಿ. ಹೆಗಡೆ, ಹೆಚ್.ಆರ್. ಚಂದ್ರೇಗೌಡ ಇತರರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *