
ಬೇಲೂರು : ಮೇ.೭”ಭಾವೈಕ್ಯತೆ ಭಾರತ ನಿರ್ಮಾಣಕ್ಕೆ ಹರ್ಡಿಕರ್ ಕೊಡುಗೆ ಅಪಾರ ” :-ಭಾವೈಕ್ಯತೆ ಭಾರತ ನಿರ್ಮಾಣಕ್ಕೆ ಅಡಿಪಾಯ ಹಾಕಿದ ಮಹನೀಯರಲ್ಲಿ ನಾ.ಸು.ಹರ್ಡೀಕರ್ ಪ್ರಮುಖರೆಂದು ಬೇಲೂರು ಪುರಸಭಾ ಮಾಜಿ ಅಧ್ಯಕ್ಷೆ ತೀರ್ಥಕುಮಾರಿ ಅಭಿಪ್ರಾಯಪಟ್ಟರು.
ಪಟ್ಟಣದ ಹೃದಯ ಭಾಗದಲ್ಲಿನ ಹರ್ಡಿಕರ್ ವೃತ್ತದಲ್ಲಿ ಭಾರತ್ ಸೇವಾದಲ ಸಂಸ್ಥಾಪಕ ಅಧ್ಯಕ್ಷ ನಾ.ಸು.ಹರ್ಡಿಕರ್ ಜನ್ಮ ದಿನದ ಅಂಗವಾಗಿ ಪುಷ್ಪ ನಮನ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಯುವಕರನ್ನು ಶಿಸ್ತುಬದ್ಧ ಸಂಘಟನೆ ಮೂಲಕ ಸಜ್ಜುಗೊಳಿಸಲು ನಾ.ಸು.ಹರ್ಡೀಕರ್ ಹಿಂದೂಸ್ತಾನ್ ಸೇವಾದಳವನ್ನು ಮಹಾತ್ಮ ಗಾಂಧಿಜಿರವರ ತತ್ವಗಳಡಿ ಸ್ಥಾಪಿಸಿದ್ದರು.
ಆನಂತರ ಬೇಲೂರು ಮಹಾಸಮಾವೇಶದಲ್ಲಿ ಹರ್ಡೀಕರ್ ಹಿಂದೂಸ್ತಾನ್ ಸೇವಾದಳವನ್ನು ಭಾರತ ಸೇವಾದಳವನ್ನಾಗಿ ರಾಜಕೀಯ ಪಕ್ಷಾತೀತವಾಗಿ ರೂಪಿಸಿ ಮಕ್ಕಳಲ್ಲಿ ಶಿಸ್ತು, ಸಂಯಮ, ದೇಶಭಕ್ತಿ, ಸೇವಾಮನೋಭಾವನೆ ಮೂಡಿಸಲು ರೂಪಿಸಿದ್ದಾರೆ ಎಂದ ಅವರು ಹರ್ಡೀಕರ್ ಹಾಕಿಕೊಟ್ಟ ಹಾದಿಯಲ್ಲಿ ಸಾಗಿದಾಗ ಮಾತ್ರವೇ ದೇಶದ ಐಕ್ಯತೆ ಕಾಪಾಡಲು ಸಾಧ್ಯ ಆದ್ದರಿಂದ ಪ್ರತಿಯೊಂದು ಶಾಲೆಯಲ್ಲಿಯೂ ಸೇವಾದಳ ಘಟಕವನ್ನು ಸ್ಥಾಪಿಸಿ ಮಕ್ಕಳಲ್ಲಿ ದೇಶಪ್ರೇಮ ತುಂಬಿಸಬೇಕೆಂದರು ಎಂದು ಕರೆ ನೀಡಿದರು.
ಬೇಲೂರು ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹೆಬ್ಬಾಳು ಹಾಲಪ್ಪ ಮಾತನಾಡಿ, ಬೇಲೂರು ಕನ್ನಡ ಸಾಹಿತ್ಯಲೋಕಕ್ಕೆ ಪ್ರಥಮ ಶಿಲಾಶಾಸನ ನೀಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ.ಅಂತಯೇ ಶಿಲ್ಪಕಲಾ ನಾಡು ಎಂದರೆ ಬೇಲೂರು ಎಂಬ ಖ್ಯಾತಿಗೆ ಪಾತ್ರವಾಗಿದೆ. ವಿಶೇಷವಾಗಿ ಸ್ವಾತಂತ್ರ್ಯ ಸಂಗ್ರಮದ ಸಮಯದಲ್ಲಿ ಭಾರತ್ ಸೇವಾದಲ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಯುವಕರಲ್ಲಿ ರಾಷ್ಟ್ರಭಕ್ತಿಯನ್ನು ಮೂಡಿದ ಪದ್ಮಭೂಷಣ ನಾ.ಸು ಹರ್ಡಿಕರ್ ಬೇಲೂರಿನಲ್ಲಿಯೇ ಭಾರತ್ ಸೇವಾದಲ ಸಂಸ್ಥೆಯನ್ನು ಸ್ಥಾಪನೆ ಮಾಡಿದ್ದಾರೆ. ಅಂದಿನಿಂದ ಬೇಲೂರಿನಲ್ಲಿ ಹರ್ಡಿಕರ್ ಪ್ರತಿಮೆ ಸ್ಥಾಪಿಸಿ ಅವರು ಜನ್ಮದಿನ ಮತ್ತು ಪುಣ್ಯ ಸ್ಮರಣೆಯನ್ನು ನಡೆಸುತ್ತಾ ಬಂದಿದೆ.
ಇಂತಹ ಸಂದರ್ಭದಲ್ಲಿ ನಾವುಗಳು ಶತನಾಟಕ ಸಾರ್ವಭೌಮ ಬೇಲೂರು ಕೃಷ್ಣಮೂರ್ತಿ ರವರನ್ನು ನೆನಪು ಮಾಡುವುದು ಔಚಿತ್ಯಪೂರ್ಣವಾಗಿದೆ ಮತ್ತು ಇಡೀ ಜಿಲ್ಲೆಯಲ್ಲಿ ಭಾರತ್ ಸೇವಾದಲ ಮಹತ್ವವನ್ನು ತಿಳಿಸುತ್ತಾ ಬಂದಿರುವ ರಾಣಿರವರ ಕಾರ್ಯಕ್ಷಮತೆ ನಿಜಕ್ಕೂ ಅನನ್ಯವಾಗಿದೆ ಎಂದರು.
ತಾಲ್ಲೂಕು ಭಾರತ್ ಸೇವಾದಲದ ಪದಾಧಿಕಾರಿಗಳಾದ ಶಿಕ್ಷಕ ಕೇಶವೇಗೌಡ ಮಾತನಾಡಿ, ನಾ.ಸು.ಹರ್ಡಿಕರ್ ಎಂದಿಗೂ ಒಂದು ಜಾತಿ, ಧರ್ಮಕ್ಕೆ ಸೀಮಿತವಾಗದೆ ದೇಶದಲ್ಲಿ ಭಾವೈಕ್ಯತೆ ಮತ್ತು ಸಾಮರಸ್ಯಕ್ಕೆ ಮುನ್ನುಡಿ ಬರೆದಿದ್ದಾರೆ. ಕಳೆದ ಮೂರು ದಶಕದಿಂದ ನಾವುಗಳು ಅರ್ಥಪೂರ್ಣ ಕಾರ್ಯಕ್ರಮ ನಡೆಸುವ ಇಂಗಿತವನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬೇಲೂರು ತಾಲ್ಲೂಕು ಭಾರತ್ ಸೇವಾ ಸಮಿತಿ ಉಪಾಧ್ಯಕ್ಷ ಸಿ.ಎಂ.ನಿಂಗರಾಜ್, ಕಾರ್ಯದರ್ಶಿ ಯುವರಾಜ್, ಭಾರತ್ ಸೇವಾದಲ ಹಾಸನ ಜಿಲ್ಲಾ ಸಂಚಾಲಕಿ ರಾಣಿ, ಗೋಪಿನಾಥ್, ಮಂಜುನಾಥ ಸೇರಿದಂತೆ ಇನ್ನೂ ಮುಂತಾದವರು ಹಾಜರಿದ್ದರು.
ಬಾಕ್ಸ್ ನ್ಯೂಸ್ :- ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ನಾ.ಶು.ಹರ್ಡಿಕರ್ ರವರು ಬೇಲೂರಿನಲ್ಲಿಯೇ ಭಾರತ್ ಸೇವಾದಲ ಸಮಿತಿ ಸ್ಥಾಪಿಸಿದ ಹಿನ್ನೆಲೆಯಲ್ಲಿ ಬೇಲೂರು ಪಟ್ಟಣದಲ್ಲಿ ಒಂದು ಕಚೇರಿ ತೆರೆಯಲು ಸಂಬಂಧಿಸಿದವರು ಅವಕಾಶ ಕಲ್ಪಿಸಬೇಕು ಎಂದು ಭಾರತ್ ಸೇವಾದಲ ಸಮಿತಿ ಹಾಸನ ಜಿಲ್ಲಾ ಸಂಚಾಲಕಿ ರಾಣಿ ಹೇಳಿದರು
