
ಬೇಲೂರು : ಆಹಾರ ಅರಸಿ ಗ್ರಾಮದ ಒಳಗೆ ನುಗ್ಗುತ್ತಿದ್ದ ಚಿರತೆಯೊಂದು ಶುಕ್ರವಾರ ರಾತ್ರಿ ಗ್ರಾಮಸ್ಥರು ಮರದ ಮೇಲೆ ನಿರ್ಮಾಣ ಮಾಡಲಾಗಿದ್ದ ಹುರುಳಿಗೆ ಸಿಲುಕಿರುವ ವಿಷಯ ತಿಳಿದು ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯನ್ನು ಸೆರೆ ಹಿಡಿಯಲು ಬೋನ್ ಸಮೇತ ಗ್ರಾಮಕ್ಕೆ ಆಗಮಿಸಿ ರಾತ್ರಿಯೆಲ್ಲಾ ಪ್ರಯತ್ನ ಪಟ್ಟರೂ ಚಿರತೆ ಕೈಗೂ ಸಿಗದೇ ಬೋನಿಗೂ ಬೀಳದೆ ಅಧಿಕಾರಿಗಳಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿರುವ ಘಟನೆ ತಾಲೂಕಿನ ಹಳೇಬೀಡು ಹೋಬಳಿಯ ಮಲ್ಲಿಕಾರ್ಜುನಪುರ ಗ್ರಾಮದಲ್ಲಿ ನಡೆದಿದೆ
ಕಳೆದ ಒಂದು ವರ್ಷದಿಂದ ಗ್ರಾಮಕ್ಕೆ ಬರುತ್ತಿದ್ದ ಚಿರತೆ ರಾತ್ರಿ ವೇಳೆಯಲ್ಲಿ ಮನೆಗಳ ಅಕ್ಕಪಕ್ಕದ ಹುಣಸೆ ಮರಗಳಲ್ಲಿ ಅವಿತು ಕುಳಿತು ಮಧ್ಯರಾತ್ರಿಯಲ್ಲಿ ಕೊಟ್ಟಿಗೆಯಲ್ಲಿ ಕಟ್ಟಲಾಗಿದ್ದ ಕುರಿ ಕೋಳಿ ಕರು ನಾಯಿ ಗಳನ್ನು ತಿನ್ನಲು ಹೊತ್ತುಯುತ್ತಿತ್ತು ಚಿರತೆ ಇರುವ ಬಗ್ಗೆ ಅನೇಕ ಬಾರಿ ಗ್ರಾಮಸ್ಥರು ಅರಣ್ಯ ಇಲಾಖೆಗೆ ತಿಳಿಸಿದರು ಅಧಿಕಾರಿಗಳು ನಿರ್ಲಕ್ಷ ಮಾಡಲಾಗಿತ್ತು ಚಿರತೆ ಶುಕ್ರವಾರ ರಾತ್ರಿ ಗ್ರಾಮದ ಚಂದ್ರಯ್ಯ ಎಂಬುವವರು ಮನೆಯ ಹತ್ತಿರದ ಮರದ ಮೇಲೆ ನಿರ್ಮಾಣ ಮಾಡಲಾಗಿದ್ದ ಹುರುಳಿಗೆ ಸಿಲುಕಿತ್ತು ಚಿರತೆಯು ಹುರುಳಿನಿಂದ ಹೊರಬರಲು ಸಾಧ್ಯವಾಗದೆ ರಾತ್ರಿಯೆಲ್ಲಾ ಮರದ ಮೇಲೆಯೇ ಕುಳಿತು ಬೆಳಗಿನ ಜಾವ ಹುರುಳು ಸಮೇತ ಕೆಳಗೆ ಬಿದ್ದು ಪರಾರಿಯಾಗಿದೆ
ಮುಂಜಾಗ್ರತಾ ಕ್ರಮವಿಲ್ಲದೆ ಚಿರತೆ ಸೆರೆ ಹಿಡಿಯಲು ಬಂದ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ
ಅಭಿಪ್ರಾಯಗಳು : ಚಿರತೆ ಅನೇಕ ದಿನಗಳಿಂದ ರಾತ್ರಿ ವೇಳೆಯಲ್ಲಿ ಗ್ರಾಮದೊಳಗೆ ಸಂಚಾರ ಮಾಡುತ್ತಿರುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು ಸಾರ್ವಜನಿಕರ ಕಣ್ಣಿಗೆ ಕಾಣುವಂತೆ ಚಿರತೆ ಅನೇಕ ಕುರಿ ಕೋಳಿ ಕರು ನಾಯಿಗಳನ್ನು ತಿಂದು ಹಾಕಿದೆ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ ದಿಂದಾಗಿ ಗ್ರಾಮಸ್ಥರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದ್ದು ತಪ್ಪಿಸಿಕೊಂಡಿರುವ ನರಹತಕ ಚಿರತೆಯನ್ನು ಕೂಡಲೇ ಸೆರೆ ಹಿಡಿಯಲು ಕ್ರಮ ಕೈಗೊಳ್ಳಬೇಕು: – ಮಹೇಶ್ ಮಲ್ಲಿಕಾರ್ಜುನ ಪುರ ಗ್ರಾಮಸ್ಥ.
ಮಲ್ಲಿಕಾರ್ಜುನ ಪುರ ಗ್ರಾಮದಲ್ಲಿ ಶುಕ್ರವಾರ ಹುರುಳಿಗೆ ಸಿಲುಕಿ ತಪ್ಪಿಸಿ ಕೊಂಡಿರುವ ಚಿರತೆಯನ್ನು ಸೆರೆ ಹಿಡಿಯಲು ರಾತ್ರಿಯಾಗಿತ್ತು ಯಾವುದೇ ವನ್ಯಜೀವಿಗಳಿಗೂ ರಾತ್ರಿ ವೇಳೆಯಲ್ಲಿ ಅರಿವಳಿಕೆ ಚುಚ್ಚುಮದ್ದು ನೀಡಲು ಸರ್ಕಾರ ಅನುಮತಿ ನೀಡಿದ ಕಾರಣ ಕಾರ್ಯಾಚರಣೆಯಲ್ಲಿ ಸ್ವಲ್ಪ ವ್ಯತ್ಯಾಸ ವಾಗಿದೆ ಕೊಡಲೇ ಚಿರತೆಯ ಚಲನವಲನವನ್ನು ತಿಳಿಯಲು ಗ್ರಾಮದಲ್ಲಿ ಟ್ಯಾಪ್ ಕ್ಯಾಮೆರಾ ಅಳವಡಿಸಿ ಬೋನ್ ಇಡಲು ತೀರ್ಮಾನಿಸಿದ್ದು ಆದಷ್ಟು ಬೇಗ ಚಿರತೆಯನ್ನು ಸೆರೆ ಹಿಡಿಯಲಾಗುವುದು
:- ವಿನಯ್ ಕುಮಾರ್ ವಲಯ ಅರಣ್ಯಾಧಿಕಾರಿ ಬೇಲೂರು


