ಬೇಲೂರು : ಕರವೇ ಪ್ರವೀಣ್ ಶೆಟ್ಟಿ ಬಳಗದ ವತಿಯಿಂದ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಕಲ್ಪಿಸದ ಹಿನ್ನೆಲೆಯಲ್ಲಿ ಕರವೇ ತಾಲೂಕು ಅಧ್ಯಕ್ಷ ಭೋಜೇಗೌಡ ಅವರ ನೇತೃತ್ವದಲ್ಲಿ ನಿಲ್ದಾಣದಲ್ಲಿ ಸಾರ್ವಜನಿಕರೊಂದಿಗೆ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಕರವೇ ಅಧ್ಯಕ್ಷ ಭೋಜೇಗೌಡ ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು ಹಾಗು ವಿದ್ಯಾರ್ಥಿಗಳು ಬೇರೆ ಬೇರೆ ತಾಲೂಕುಗಳಿಗೆ ಹಾಗು ಇನ್ನಿತರ ಕೆಲಸಗಳಿಗೆ ತೆರಳುತ್ತಾರೆ.ಆದರೆ ಇಲ್ಲಿರುವ ಅಧಿಕಾರಿಗಳು ಬೇಜವಬ್ದಾರಿಯಿಂದ ಸಾರ್ವಜನಿಕರೊಂದಿಗೆ ಉಡಾಫೆಯಿಂದ ಮಾತನಾಡುತ್ತಾರೆ.

ಪ್ರಯಾಣಿಕರಿಗೆ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ.ಅಲ್ಲದೆ ಬಸ್ ಗಳು ಮಳೆಬಂದಂತ ಸಂದರ್ಭದಲ್ಲಿ ಸೋರುತ್ತದೆ.ಅಲ್ಲದೆ ಬಂದಂತ ಪ್ರಯಾಣಿಕರಿಗೆ ಕುಡಿಯುವ ನೀರಿನ ತೊಂದರೆ ಇದೆ.ಇಲ್ಲಿ ಕೆಲ ಜಾಹಿರಾತು ಕಂಪನಿ ಗಳ ಜೊತೆ ಶಾಮಿಲಾಗಿ ಮಾರ್ಗಸೂಚಿ ಫಲಕಗಳೆ ಕಾಣೆಯಾಗಿದೆ.

ಸಂಪೂರ್ಣ ಸೊಳ್ಳೆ ನೊಣಗಳ ತಾಣವಗಿದ್ದು ಸ್ವಚ್ಚತೆಯೆ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಕೂಡಲೆ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸದ ಇಂತಹ ಅಧಿಕಾರಿಗಳನ್ನು ಇಲ್ಲಿಂದ ಶಾಸಕರು ಹೊರಕಳಿಸಬೇಕು ಇಲ್ಲಿ ಶಾಸಕರ ಮಾತಿಗು ಅಧಿಕಾರಿಗಳು ಕಿವಿ ಕೊಡುತ್ತಿಲ್ಲ.

ಒಂದು ವಾರದ ಹಿಂದೆ ಸ್ವಚ್ಚವಾಗಿಡುವಂತೆ ಅಧಿಕಾರಿಗಳಿಗೆ ತಿಳಿ ಹೇಳಿದ್ದರೂ ಇದರ ಬಗ್ಗೆ ಗಮನ ಹರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಂತರ ಮಾತನಾಡಿದ ಕಾರ್ಯ ದರ್ಶಿ ಜಯಪ್ರಕಾಶ್ ಮಾಳೆಗೆರೆ ,ಸೇರಿದಂತೆ ಗ್ರಾಮೀಣ ಭಾಗದಲ್ಲಿ ಬೆಳಗಿನ ಸಮಯದಲ್ಲಿ ಬಸ್ ಗಳನ್ನು ಅಧಿಕಾರಿಗಳು ಸರಿಯಾದ ಸಮಯಕ್ಕೆ ಕಳುಹಿಸುತ್ತಿಲ್ಲ.ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು ಇದನ್ನು ವಿಚಾರಿಸಲು ಬಂದಂತ ಸಂದರ್ಭದಲ್ಲಿ ಸಾರ್ವಜನಿಕರ ಮೇಲೆ ಇಲ್ಲಿಯ ಅಧಿಕಾರಿ ಸಹಾಯಕ ಸಂಚಾಲಕ ನಿರ್ದೇಶಕ ಮಂಜಪ್ಪರವರು ಉಡಾಫೆಯಿಂದ ವರ್ತಿಸುವುದಲ್ಲದೆ ಸಂಘಟನೆಯಿಂದ ಮೇಲಾಧಿಕಾರಿಗಳಿ ದೂರು ನೀಡುತ್ತೇವೆ ಎಂದರೆ ನಾವು ಇಲ್ಲಿರಬೇಕೆಂದಿಲ್ಲ ನಾವು ಎಲ್ಲಿ ಬೇಕಾದರೂ ಕೆಲಸ ಮಾಡುತ್ತವೆ ಎಂದು ಹೇಳುತ್ತಾರೆ.

ವಿದ್ಯಾರ್ಥಿಗಳ ಸಮಸ್ಯೆಗಳನ್ನು ಕಿವಿಗೆ ಹಾಕಿಕೊಳ್ಳದ ಸ್ಥಿತಿ ಎದುರಾಗಿದೆ.ಕೂಡಲೇ ಇಲ್ಲಿ ಗಮನ ಹರಿಸಬೇಕು.ಇಲ್ಲದಿದ್ದರೆ ಮುಂದಿನ ವಾರ ಬಸ್ ನಿಲ್ದಾಣ ಬಂದ್ ಮಾಡಿ ಸಾರ್ವಜನಿಕರು ಹಾಗು ವಿದ್ಯಾರ್ಥಿಗಳೊಂದಿಗೆ ಪ್ರತಿಭಟಿಸುವ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಉಪಧ್ಯಕ್ಷರಾದ ರಾಘವೇಂದ್ರ ಹೊಳ್ಳ,ಅರುಣ್ ಸಿಂಗ್,ಮಂಜು ಆಚರ್,ಕಾರ್ಯದರ್ಶಿ ಕಾರ್ತಿಕ್,ಯುವ ಘಟಕದ ಅಧ್ಯಕ್ಷ ಸತೀಶ್,ನವೀನ್,ಹುಸೇನ್,ರತ್ನಾಕರ್,ಮಂಜುನಾಥ್,ಸತೀಶ್,ಕೋಳಿ ಚಂದ್ರು,ದೇವುಪ್ರಸಾದ್,ತೀರ್ಥಕುಮಾರ್,ಸಲ್ಮಾನ್,ರೈತ ಸಂಘದ ನಂಜಪ್ಪ,ಇತರರು ಹಾಜರಿದ್ದರು‌

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *