ಬೇಲೂರು : ಪಟ್ಟಣದ ಶುಭಾ ಕ್ಲಿನಿಕ್ ನಲ್ಲಿ ಏರ್ಪಡಿಸಿದ್ದ ಉಚಿತ ಮಧುಮೇಹ ಹಾಗೂ ರಕ್ತದೊತ್ತಡ ತಪಾಸಣಾ ಶಿಭಿರವನ್ನು ದೇಶಭಕ್ತ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.

ಈ ವೇಳೆ ಮಧುಮೇಹ ಹಾಗು ರಕ್ತದೊತ್ತಡ ತಪಾಸಣೆ ನಡೆಸಿ ಮಾತನಾಡಿದ ದೇಶ ಭಕ್ತ ಬಳಗದ ಅಧ್ಯಕ್ಷ ಡಾ ಸಂತೋಷ್ ಮಾತನಾಡಿಆಧುನಿಕ ಜೀವನ ಶೈಲಿಯ ಒತ್ತಡ.. ಮತ್ತು ವಿದ್ಯಾರ್ಥಿ ಜೀವನದಿಂದಲೇ ಮಕ್ಕಳ ಮೇಲೆ ಹೆತ್ತವರು ಹಾಕುತ್ತಿರುವ ಒಂದು ರೀತಿಯ ಮಾನಸಿಕ ಕಿರುಕುಳ ರೀತಿಯ ಪ್ರೆಷರ್.. ಇವತ್ತಿನ ಈ ಕಾಲಘಟ್ಟದಲ್ಲಿ ಮತ್ತು ವೃತ್ತಿ ಜೀವನದಲ್ಲಿ ಆ ಮಕ್ಕಳು ಎದುರಿಸುತ್ತಿರುವ ತೀವ್ರತರದ ಪೈಪೋಟಿ.. ಮುಂತಾದವುಗಳಿಂದಾಗಿ ಮತ್ತು ಶಿಸ್ತುಬದ್ಧವಲ್ಲದ ಜೀವನ ಶೈಲಿ.. ವಿಚಿತ್ರ ರೀತಿಯ ಆಹಾರ ಸೇವನೆ.. ನೈಟ್ ಡ್ಯೂಟಿ.. ವ್ಯಾಯಾಮದ ಕೊರತೆ.. ಮುಂತಾದವುಗಳಿಂದಾಗಿ ಯುವಜನಾಂಗ ಹೆಚ್ಚಾಗಿ ಮಧುಮೇಹ ಮತ್ತು ಹೃದಯಘಾತಕ್ಕೆ ಬಲಿಯಾಗುತ್ತಿದೆ.

ಮತ್ತು ಈ ರೋಗ ಕಂಡು ಹಿಡಿಯಲುಪಟ್ಟ ಹಿರಿಯರಿಗೆ.. ವೈದ್ಯರು ಸೂಚಿಸಿದ ಔಷದ ಸೇವನೆಗೆ ಅಡ್ಡಗಾಲಿಕುವ ಕೆಲವು ಕಾಲ್ಪನಿಕ ವಿಷಯಗಳು..

ಬಿಪಿ ಮತ್ತು ಮಧುಮೇಹಕ್ಕೆ ದಿನ ಮಾತ್ರೆ ಸೇವನೆಯಿಂದ ಕಿಡ್ನಿ ಹಾಳಾಗುತ್ತದೆ ಎಂದು ಕೆಟ್ಟ ಸಂದೇಶ ನೀಡುವ ನೆರೆಹೊರೆಯವರು ಗೆಳೆಯರು ಮತ್ತು ಮಕ್ಕಳು ಅವರನ್ನು ದಾರಿ ತಪ್ಪಿಸಿ ಮಾತ್ರೆ ನುಂಗುವುದನ್ನು ನಿಲ್ಲಿಸುತ್ತಾರೆ… ಇದರಿಂದಾಗಿ ಹಲವಾರು ಅಕಾಲಿಕ ಮರಣಗಳು ಉಂಟಾಗುತ್ತಿವೆ.ಮತ್ತು ಈ ರೋಗ ಕಂಡು ಹಿಡಿಯಲುಪಟ್ಟ ಹಿರಿಯರಿಗೆ.. ವೈದ್ಯರು ಸೂಚಿಸಿದ ಔಷದ ಸೇವನೆಗೆ ಅಡ್ಡಗಾಲಿಕುವ ಕೆಲವು ಕಾಲ್ಪನಿಕ ವಿಷಯಗಳು.. ಬಿಪಿ ಮತ್ತು ಮಧುಮೇಹಕ್ಕೆ ದಿನ ಮಾತ್ರೆ ಸೇವನೆಯಿಂದ ಕಿಡ್ನಿ ಹಾಳಾಗುತ್ತದೆ ಎಂದು ಕೆಟ್ಟ ಸಂದೇಶ ನೀಡುವ ನೆರೆಹೊರೆಯವರು ಗೆಳೆಯರು ಮತ್ತು ಮಕ್ಕಳು ಅವರನ್ನು ದಾರಿ ತಪ್ಪಿಸಿ ಮಾತ್ರೆ ನುಂಗುವುದನ್ನು ನಿಲ್ಲಿಸುತ್ತಾರೆ… ಇದರಿಂದಾಗಿ ಹಲವಾರು ಅಕಾಲಿಕ ಮರಣಗಳು ಉಂಟಾಗುತ್ತಿವೆ.

ಮದುಮೇಹ ಮತ್ತು ಹೃದಯಘಾತ ಕಾಯಿಲೆಗೆ ಒಳಗಾದವರು ವೈದ್ಯರು ಸೂಚಿಸಿದ ಔಷಧಿಯನ್ನು ಸೇವಿಸಿ ಕಟ್ಟುನಿಟ್ಟಿನ ಆಹಾರ ಪದ್ಧತಿಯ ಜೊತೆಯಲ್ಲಿ ವ್ಯಾಯಾಮವನ್ನು ಮಾಡಿದರೆ ಖಂಡಿತ ಇಂತಹ ದುರಂತಗಳಿಂದ ತಪ್ಪಿಸಿಕೊಳ್ಳಬಹುದೆಂದು ಅವರು ತಿಳಿಸಿದರು.

ಈ ಸಂದರ್ಭ ದಲ್ಲಿ ಗ್ಲನ್ಮಾರ್ಕ್ ಅಂಜು ಶೆಟ್ಟಿ. ಮಲ್ಲಿಕಾರ್ಜುನ ಗ್ರೂಪ್ ಸುಬ್ರಹ್ಮಣ್ಯ ಮಹೇಶ್ ಸುಚಿತ್ರ. ಮತ್ತು ದೇವರಾಜ್ ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *