ಹಾಸನ: ನಗರದ ಗೌರಿಕೊಪ್ಪಲು ಬಳಿ ಇರುವ ಶ್ರೀ ಆದಿಚುಂಚನಗಿರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಆವರಣದಲ್ಲಿ ರೋಟರಿ ಕ್ಲಬ್ ಹಾಸನ ಮತ್ತು ವಿಸ್ತಾರ ಸಮೂಹ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಶುದ್ಧ ನೀರಿನ ಘಟಕದ ಉದ್ಘಾಟನೆಯನ್ನು ಕ್ಲಬ್ ಗೌರ‍್ನರ್ ಪಾಲಾಕ್ಷ ಅವರು ನೆರವೇರಿಸಿ ಲೋಕರ್ಪಣೆಗೊಳಿಸಿದರು.

ನಂತರ ಮಾಧ್ಯಮದೊಂದಿಗೆ ಉದ್ದೇಶಿಸಿ ಮಾತನಾಡಿದ ಅವರು, ರೋಟರಿ ಕ್ಲಬ್ ಹಾಸನವತಿಯಿಂದ ಸುಮಾರು ೫೦ ಸಾವಿರ ರೂಗಳ ಖರ್ಚುನೊಂದಿಗೆ ಶ್ರೀ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟನೆ ಮಾಡಲಾಗಿದೆ. ಇದರಿಂದ ಈ ಶಾಲೆಯ ಸುತ್ತ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.

ಉತ್ತಮ ಗುಣಮಟ್ಟದ ನೀರನ್ನು ಸೇವನೆ ಮಾಡುವುದರಿಂದ ಮನುಷ್ಯನ ಆರೋಗ್ಯವನ್ನು ಸುಸ್ತಿತಿಯಲ್ಲಿಡಬಹುದು. ವಿದ್ಯಾರ್ಥಿಗಳ ಜೀವನ ಉತ್ತಮವಾಗುತ್ತದೆ. ಸಮಾಜಕ್ಕೆ ರೋಟರಿ ಕೊಡುವ ಕೊಡುಗೆ ಆಗಿದೆ ಎಂದರು.

ನಮ್ಮ ಈ ಸೇವೆಗೆ ಸಹಕರಿಸಿದಂತಹ ಎಲ್ಲಾರಿಗೂ ಅಭಿನಂದಿಸುತ್ತೇನೆ ಎಂದು ಹೇಳಿದರು.

ಇದೆ ವೇಳೆ ರೋಟರಿ ಕ್ಲಬ್ ಫಾಸ್ಟ್ ಗೌರ‍್ನರ್ ಬಿ.ಎನ್. ರಮೇಶ್, ಅಸಿಸ್ಟೆಂಟ್ ಗೌರ‍್ನರ್ ಫಾಸ್ಟ್ ಡಿ.ಎಂ. ಜಲೇಂದ್ರ, ಕ್ಲಬ್ ಅಧ್ಯಕ್ಷರಾದ ಗಿರೀಶ್ ಕುಮಾರ್, ಕಾರ್ಯದರ್ಶಿ ಶ್ರೀನಾಥ್ ದಾನಿಗಳಾದ ರಮೇಶ್ ಕೊಥಾರಿ, ಕೆ.ಆರ್. ಮಂಜುನಾಥ್ ಹಾಗೂ ಶಾಲೆಯ ಮಖ್ಯ ಶಿಕ್ಷಕರು ಸೇರಿದಂತೆ ಇತರರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *