ಹಾಸನ: ಸರಳ ವ್ಯಕ್ತಿತ್ವ, ಸ್ನೇಹಜೀವಿಯಾಗಿದ್ದ ಹಿರಿಯ ಪತ್ರಕರ್ತ ಹಾಗೂ ಹಾಸನವಾಣಿ ದಿನಪತ್ರಿಕೆ ಸಂಪಾದಕ ಎ..ಬಿ. ಮುರುಳಿ ನಿಧನಕ್ಕೆ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದಿಂದ ಭಾವಪೂರ್ಣ ಶ್ರದ್ಧಾಂಜಲಿ ಸಭೆ ನಡೆಸಿ ಸಂತಾಪ ಸೂಚಿಸಲಾಯಿತು.

ನಗರದ ಜಿಲ್ಲಾ ಪತ್ರಕರ್ತ ಸಂಘದಲ್ಲಿ ಮಂಗಳವಾರ ಬೆಳಿಗ್ಗೆ ಸಂಘದ ಜಿಲ್ಲಾಧ್ಯಕ್ಷ ಕೆ.ಹೆಚ್. ವೇಣುಕುಮಾರ್ ಅಧ್ಯಕ್ಷತೆಯಲಿ ನಡೆದ ಶ್ರದ್ಶಾಂಜಲಿ ಸಭೆಯಲ್ಲಿ ಮೊದಲು ಎರಡು ನಿಮಿಷ ಮೌನ ಆಚರಿಸಿ ಶಾಂತಿ ಕೋರಲಾಯಿತು. ನಂತರ ಮುರುಳಿ ಬಾವಚಿತ್ರಕ್ಕೆ ಪುಷ್ಪ ಅರ್ಪಿಸಿ ನಮನ ಸಲ್ಲಿಸಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರವ ಸಂಘದ ಅಧ್ಯಕ್ಷ ಕೆ.ಹೆಚ್. ವೇಣುಕುಮಾರ್ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಸರಳ ಮತ್ತು ಸ್ನೇಹ ಜೀವಿಯಾಗಿದ್ದ ಎ.ಬಿ. ಮುರುಳಿ ಸದಾ ಕಾಲ ಕಷ್ಟಗಳಿಗೆ ಸ್ಪಂದಿಸುತ್ತಿದ್ದ ಜೀವ ಇಂದು ನಮ್ಮನ್ನೆಲ್ಲಾ ಬಿಟ್ಟು ಅಗಲಿದ್ದಾರೆ. ಕಳೆದ ೧೦ ವರ್ಷಗಳ ಹಿಂದೆ ಯಾವುದೇ ಕ್ರೈಂ ನಡೆದರೇ ಮೊದಲು ಮುರುಳಿಗೆ ತಿಳಿಯುತ್ತಿತ್ತು. ಹೆಚ್ಚು ಕ್ರಿಯಾಶೀಲವಾದ ವ್ಯಕ್ತಿ. ನಟರಾಜ ಜೊತೆ ಮುರುಳಿ ಹೆಚ್ಚು ಇರುತ್ತಿದ್ದು, ಆರೋಗ್ಯದ ಕಡೆ ಹೆಚ್ಚು ಗಮನ ಕೊಡುತ್ತಿರಲಿಲ್ಲ. ನನ್ನ ಜೊತೆ ೨೫ ವರ್ಷದ ಸಂಬಂಧವಿತ್ತು ಎಂದರು.

ಅನೇಕರ ಜೊತೆ ನಿರಂತರವಾದ ಸ್ನೇಹ ಇಟ್ಟುಕೊಂಡಿದ್ದು, ಯಾರ ವಿರುದ್ಧ ಯಾವತ್ತು ಮಾತನಾಡಲಿಲ್ಲ. ಮುರುಳಿ ಇವತ್ತು ನಮ್ಮ ಜೊತೆ ಇಲ್ಲ ಎಂದು ಹೇಳುವುದೇ ನಮ್ಮ ದೌರ್ಭಾಗ್ಯ. ಮುರುಳಿ ನಿಧನಕ್ಕೆ ನಾನು ಶಾಂತಿ ಕೋರುವುದಾಗಿ ಹೇಳಿದರು.

ಹೆಚ್.ಬಿ. ಮದನ್ ಗೌಡ ಮಾತನಾಡಿ, ಒಳ್ಳೆಯ ಸಂಬಂಧವನ್ನು ಮುರುಳಿ ಇಟ್ಟುಕೊಂಡಿದ್ದು, ಜಾತ್ಯಾತೀತ ವ್ಯಕ್ತಿತ್ವ ಹೊಂದಿದ್ದರು. ಪತ್ರಕರ್ತರ ಜೊತೆಗೆ ನಗರದಲ್ಲಿ ಎಲ್ಲಾ ಜನಾಂಗದರ ಜೊತೆ ಒಳ್ಳೆಯ ಸಂಬಂಧ ಇಟ್ಟುಕೊಂಡಿದ್ದರು. ಒಳ್ಳೆಯ ರೀತಿಯಲ್ಲಿ ಇದ್ದ ಮುರುಳಿಯನ್ನು ಇಂದು ನೆನಪು ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ. ಅವರು ಇಲ್ಲದಿರುವುದು ನಮ್ಮ ಪತ್ರಕರ್ತರ ಸಂಘಕ್ಕೆ ನಷ್ಟವಾಗಿದೆ ಎಂದರು.

ಉಸಿರಾಟದ ತೊಂದರೆಯಿಂದ ಸಾವನಪ್ಪಿದ್ದಾರೆ. ಅವರ ಸಾವು ನಮಗೆಲ್ಲಾ ದುಃಖವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಿದರು.

ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ರವಿನಾಕಲಗೂಡು ಮಾತನಾಡಿ, ಮುರುಳಿ ಸಾವನಪ್ಪಿರುವುದು ಬಹಳ ದುಃಖ ವಿಚಾರ. ವಿಶೇಷ ವ್ಯಕ್ತಿತ್ವ ಹೊಂದಿದ್ದರು. ಪೋನ್ ಯಾವಗ ಮಾಡಿದರೂ ಉತ್ತರ ಕೊಡುತ್ತಿದ್ದರು. ಕೊಂಡಿ ಕಳಚಿಕೊಂಡಿದೆ. ಹೃದಯವಂತ ಸ್ನೇಹ ಜೀವಿಯಾಗಿದ್ದು, ಎಲ್ಲಾ ಕಾರ್ಯಕ್ರಮಕ್ಕೂ ಬರುತ್ತಿದ್ದರು. ಸಾವಿನ ವಿಚಾರ ಕೇಳಿ ದುಃಖವಾಯಿತು. ಅವರ ಆತ್ಮಕ್ಕೆ ಶಾಂತಿ ಸಿಕ್ಕಿ, ಕುಟುಂಬಕ್ಕೆ ದೈರ್ಯ ತುಂಬುವ ಶಕ್ತಿ ದೇವರು ನೀಡಲಿ ಎಂದರು.

ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಪ್ರಸನ್ನಕುಮಾರ್ ಮಾತನಾಡಿ, ಸರಳ ಜೀವಿ ಮುರುಳಿ ಅವರು ಪತ್ರಿಕಾ ರಂಗದಲ್ಲಿ ಮೊದಲು ಪೋಟೊಗ್ರಫಿಯಾಗಿ ಕೆಲಸ ನಿರ್ವಹಿಸುತ್ತಿದ್ದು, ಯಾರಿಗೆ ಏನೆ ಸಮಸ್ಯೆ ಇದ್ದರೂ ರಾತ್ರಿ ವೇಳೆ ಕರೆದರೇ ಓಡಿ ಬರುತ್ತಿದ್ದರು. ಈ ಹಿಂದೆ ಹೃದಯಘಾತವಾಗಿ ಉಳಿದುಕೊಂಡಿದ್ದರು. ಈಗ ನಮ್ಮ ಕಣ್ಣಮುಂದೆ ಇಲ್ಲ. ಅವರ ಆತ್ಮಕ್ಕೆ ಶಾಂತಿ ದೊರಕಲೆಂದು ಕೋರಿದರು.

ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಉದಯಕುಮಾರ್ ಮಾತನಾಡಿ, ಮುರುಳಿ ಸಾವು ನಂಬಲು ಅಸಾಧ್ಯ. ಒಬ್ಬ ಸ್ನೇಹ ಜೀವಿ, ಕಷ್ಟಕ್ಕೆ ಸ್ಪಂದಿಸುತ್ತಿದ್ದರು. ಈ ಸಾವು ಅವರ ನೋವಾಗಿದೆ. ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ದೇವರು ನೀಡಲೆಂದು ಕೋರಿದರು.

ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಅತೀಖುರ್ ರೆಹಮಾನ್ ಮಾತನಾಡಿ, ನಮ್ಮೊಟಿಗೆ ಇದ್ದ ಮುರುಳಿಈಗ ಇಲ್ಲ. ಇದು ದುಃಖಕರವಾದ ಸಂಗತಿ. ೧೯೯೭ ರಿಂದ ಪರಿಚಯವಾಗಿ ಎಲ್ಲರೊಂದಿಗೆ ಆತ್ಮೀಯವಾಗಿ ಇರುತ್ತಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದರು.

ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಬನವಾಸೆ ರಂಗಸ್ವಾಮಿ ಮಾತನಾಡಿ, ಮುರುಳಿ ಅಣ್ಣ ಒಬ್ಬ ಸ್ನೇಹಜೀವಿ, ೨೦೦೭ ರಲ್ಲಿ ಪರಿಚಯವಾದರು.ಪೋನ್ ಮಾಡಿದ ಕುಡಲೇ ಬರುತ್ತಿದು, ನೆನ್ನೆ ಹುಷಾರಿಲ್ಲ ಎಂದು ಆಸ್ಪತ್ರೆಗೆ ಸೇರಿದ್ದರು. ಈಗ ನಮ್ಮ ಕಣ್ಣ ಮುಂದೆ ಇರುವುದಿಲ್ಲ ಎಂದು ನೆನಪಿಸಿಕೊಂಡರು. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದರು. ಪಿಟಿಐ ಶಿವರಾಮ್ ಮಾತನಾಡಿ, ನಮಗೆಲ್ಲಾ ಇವತ್ತು ಬೇಜಾರಿನ ದಿನವಾಗಿದೆ. ಪತ್ರಿಕೆ ಹಂಚುವುದು ಸೇರಿದಂತೆ ಎಲ್ಲಾ ಕೆಲಸ ಮಾಡುತ್ತಿದ್ರು. ಈ ವಯಸ್ಸಿನಲ್ಲಿ ಅವರ ಅಮ್ಮ ಲೀಲಾವತಿ ಅವರಿಗೆ ನೋವುಂಟಾಗಿದೆ. ಪತ್ರಿಕೆ ನಡೆಸಿಕೊಂಡು ಹೋಗುವ ಶಕ್ತಿ ಅವರಿಗೆ ನೀಡಲಿ ಎಂದು ಹೇಳಿದರು.

ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಕೆ.ಆರ್. ಮಂಜುನಾಥ್ ಮಾತನಾಡಿ, ಪ್ರೀತಿಯ ಗೆಳೆಯ ಹೃದಯವಂತ ಬಾಲ್ಯದಿಂದಲೂ ನೋಡಿದ್ದೇನೆ. ಎಲ್ಲಾರಿಗೂ ಪರಿಚಯ. ಒಬ್ಬ ಸ್ನೇಹ ಜೀವಿಯಾಗಿದ್ದು, ಎಸ್.ಎಸ್.ಎಂ. ಆಸ್ಪತ್ರೆಯ ದಿನೇಶ್ ಹಾಗೂ ಮುರುಳಿ ಸ್ನೇಹಿತರು. ಕ್ರಿಯಾಶೀಲವ್ಯಕ್ತಿ ಈಗ ನಮ್ಮ ಮುಂದೆ ಇಲ್ಲ. ಆ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದರು.

ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಖಜಾಂಚಿ ಜಿ. ಪ್ರಕಾಶ್ ಮಾತನಾಡಿ, ಗೆಳೆಯನು ಬಾರದ ಲೋಕಕ್ಕೆ ಹೋಗಿದ್ದಾನೆ. ನನಗಿಂತ ಹಿರಿಯ ಪತ್ರಕರ್ತನಾಗಿದ್ದು, ಈ ಸಾವು ಆಗಿರುವುದು ನೋವಿನ ಸಂಗತಿ. ಆತ್ಮಕ್ಕೆ ಶಾಂತಿ ಸಿಗಲೆಂದರು.

ಹಿರಿಯ ಪತ್ರಕರ್ತ ನಾಗರಾಜು ಹೆತ್ತೂರ್ ಮಾತನಾಡಿ, ಏಕೈಕ ಮಹಿಳಾ ಸಂಪಾದಕಿ ಲೀಲಾವತಿ ಪುತ್ರನಾದ ಮುರುಳಿ ಅಗಲಿರುವುದು ನೋವು ತಂದಿದೆ. ಪ್ರತಿ ಪತ್ರಿಕಾಗೋಷ್ಠಿಗೆ ಆಗಮಿಸುತ್ತಿದ್ರು.. ಇಂದು ನಮ್ಮ ಮುಂದೆ ಇಲ್ಲದಿರುವುದು ನೋವಾಗಿದೆ. ದುಃಖ ಭರಿಸುವ ಶಕ್ತಿ ಕುಟುಂಬಕ್ಕೆ ನೀಡಲಿ ಎಂದು ಹೇಳಿದರು.

ಜಿಲ್ಲಾ ಪತ್ರಕರ್ತರ ಸಂಘದ ನಿಕಟಪೂರ್ವ ಅಧ್ಯಕ್ಷ ಬಾಳ್ಳುಗೋಪಾಲ್ ಮಾತನಾಡಿ, ಚಿಕ್ಕವಯಸ್ಸಿನಲ್ಲಿ ಸಾವನಪ್ಪಿರುವುದು ಬೇಸರದ ಸಂಗತಿ. ಎಲ್ಲಾರೊಂದಿಗೆ ಸಂತೋಷದಿಂದ ಕಳೆಯುತ್ತಿದ್ದ ಮುರುಳಿ ಸಾವು ನಮಗೆಲ್ಲಾ ನೋವನ್ನುಂಟು ಮಾಡಿದೆ. ಅವರ ಆತ್ಮಕ್ಕೆ ಆಂತಿ ದೊರಕಲಿ ಎಂದರು.

ಜಿಲ್ಲಾ ವರದಿಗಾರ ಪ್ರಕಾಶ್ ಬೆಳವಾಡಿ ಮಾತನಾಡಿ, ಮುರುಳಿ ಅಣ್ಣನ ಬಗ್ಗೆ ಹೇಳಲಿ ಸಾಲುಗಳಿಲ್ಲ. ೨೦೦೮ ರಲ್ಲಿ ನಾನು ಕ್ಯಾಮಾರ ಮೆನ್ ಆಗಿ ಬಂದಾಗ ಪರಿಚಯ ಇರಲಿಲ್ಲ. ಸಮಯ ಟಿವಿಗೆ ಬಂದಾಗ ಮೊದಲು ಕ್ರೈ ಸುದ್ದಿ ಅವರಿಗೆ ಮೊದಲು ಗೊತತಾಗಿ ಹೇಳುತ್ತಿದ್ರು ಎಂದರು. ಸಂಪಾದಕರಾದ ಜಗದೀಶ್ ಚೌಡಹಳ್ಳಿ ಮಾತನಾಡಿ, ಮುರುಳಿ ಅವರು ಯಾವಾಗಲು ಲವಲವಿಕೆಯಿಂದ ಎಲ್ಲಾರ ಜೊತೆ ಬಾಂಧ್ಯವ್ಯದಲ್ಲಿ ಇರುತ್ತಿದ್ದರು. ಒಳ್ಳೆಯ ಸ್ನೇಹಿತ, ಆತನ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿದರು.

ಸಂಪಾದಕರಾದ ತೌಫಿಕ್ ಮಾತನಾಡಿ, ಎ.ಬಿ. ಮುರುಳಿ ಅವರು ಕಳೆದ ೨೫ ವರ್ಷಗಳಿಂದಲೂ ಪರಿಚಯ. ಎಲ್ಲಾ ಕಡೆ ಸಿಗುತ್ತಿದ್ದರು. ಸ್ನೇಹ ಜೀವಿಯಾಗಿ ಚಿರಪರಿಚಿತರು. ಅವರ ಸಾವು ನಂಬಲು ಸಾಧ್ಯವಿಲ್ಲ. ಅವರಿಗೆ ಶಾಂತಿ ದೊರಕಲಿ ಎಂದು ಹೇಳಿದರು.

ಶಾಂತಿ ಸಭೆ ನಂತರ ಮದ್ಯಾಹ್ನ ಜಿಲ್ಲಾ ಪತ್ರಕರ್ತರ ಭವನದಲ್ಲಿ ಮುರುಳಿಯ ಮೃತ ದೇಹವನ್ನು ತುರ್ತು ವಾಹನದಲ್ಲಿ ತಂದು ಸಾರ್ವಜನಿಕ ದರ್ಶನಕ್ಕೆ ಇಡಲಾಯಿತು.

ಇದೆ ವೇಳೆ ಪ್ರಧಾನ ಕಾರ್ಯದರ್ಶಿ ಬಿ.ಸಿ. ಶಶಿಧರ್, ಉಪಾಧ್ಯಕ್ಷ ಮೋಹನ್, ನಟರಾಜು, ಕುಮಾರ್ ಸೇರಿದಂತೆ ಕಿರಿಯ ಹಿರಿಯ ಪತ್ರಕರ್ತರು ಭಾಗವಹಿಸಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *